News Kannada
Monday, February 26 2024
ಮಂಗಳೂರು

ಮಂಗಳೂರು: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದವರೆಗೆ ವಿಶೇಷ ಠೇವಣಿ ಅಭಿಯಾನ

Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನವರಾತ್ರಿಯಿಂದ ದೀಪಾವಳಿ ಹಬ್ಬದವರೆಗೆ ವಿಶೇಷ ಠೇವಣಿ ಹಾಗು ಸಾಲ ನೀಡುವ ಅಭಿಯಾನವನ್ನು ಕೈಗೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 26 ರಂದು, ನವರಾತ್ರಿಯ ಮೊದಲ ದಿನವಾದ ಸೋಮವಾರದಂದು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ. ಎಂ.ಎನ್.ಆರ್. ವರ್ಷದ ಅವಧಿಗಿಂತ ಮೇಲ್ಪಟ್ಟ ಮತ್ತು 2 ವರ್ಷದ ಠೇವಣಿಗಳಿಗೆ ಶೇ 6.50 ಬಡ್ಡಿ ದರ ಮತ್ತು 3 ವರ್ಷ ಮೇಲ್ಪಟ್ಟು 5 ವರ್ಷದವರೆಗಿನ ರೂ. 25 ಲಕ್ಷಕ್ಕಿಂತ ಅಧಿಕ ಮೊತ್ತದ ಠೇವಣಿಗಳಿಗೆ ಶೇಖಡಾ 8 ಬಡ್ಡಿದರವನ್ನು ನೀಡಲಾಗುತ್ತದೆ ಎಂದರು. ಸಾಂಸ್ಥಿಕ ಠೇವಣಿಗಳಿಗೆ ಶೇ. 7.50 ರೂ ಬಡ್ಡಿದರ ನೀಡಲಾಗುವುದು ಎಂದೂ ಅವರು ತಿಳಿಸಿದರು.

ಹಿರಿಯ ನಾಗರಿಕರಿಗೆ ಬ್ಯಾಂಕ್ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಬಾರಿ ಹಿರಿಯ ನಾಗರಿಕರು, ಸೈನಿಕರು ಹಾಗು ಮಹಿಳೆಯರ ಠೇವಣಿಗಳಿಗೆ ಹೆಚ್ಚುವರಿಯಾಗಿ 0.50 ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರು ಇಡುವ 10 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಠೇವಣಿಗಳಿಗೆ ಶೇ.0.25 ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುವುದು. ಇದು ವಿಶೇಷ ಠೇವಣಿ ಅಭಿಯಾನಕ್ಕೆ ಮಾತ್ರ ಸೀಮಿತವಾಗಿದೆ ಎಂದೂ ಅವರು ವಿವರಿಸಿದರು.

ಆಪತ್ಕಾಲದಲ್ಲಿ ಜನರು ಅಡಮಾನ ಮಾಡುವ ಚಿನ್ನಾಭರಣಗಳಿಗೆ ಬ್ಯಾಂಕ್ ಸಾಲ ನೀಡುತ್ತಿದ್ದು ಅದಕ್ಕೂ ಕಡಿಮೆ ಬಡ್ಡಿದರ ನಿಗದಿ ಮಾಡಲಾಗಿದೆ. ಚಿನ್ನಾಭರಣದ ಒಟ್ಟು ಮೌಲ್ಯದ ಶೇಖಡಾ 90 ರಷ್ಟು ಮೊತ್ತದ ಸಾಲವನ್ನು ಬ್ಯಾಂಕ್ ನೀಡುತ್ತಿದೆ. ಸ್ವಂತ ಮನೆಯನ್ನು ಹೊಂದುವ ಆಶಯ ಇರುವವರಿಗೆ ಆಕರ್ಷಕ ಬಡ್ಡಿದರದಲ್ಲಿ ಬ್ಯಾಂಕ್ ಗೃಹ ಸಾಲವನ್ನು ನೀಡುತ್ತಿದೆ. ಗರಿಷ್ಟ 75 ಲಕ್ಷ ರೂಪಾಯಿಗಳವರೆಗೂ ಗೃಹ ಸಾಲ ಪಡೆಯಲು ಅವಕಾಶವಿದೆ ಎಂದೂ ಡಾ. ಎಂ.ಎನ್.ಆರ್. ತಿಳಿಸಿದರು.

ಬ್ಯಾಂಕ್ ಕಾರ್ಯವ್ಯಾಪ್ತಿ ಹೊಂದಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬೆಳೆ ಸಾಲಗಾರ ಸದಸ್ಯರಿಗೆ ಅವರು ಪಡೆದಿರುವ ಸಾಲದ ಮೇಲೆ ವಿಮಾ ಸೌಲಭ್ಯವನ್ನು ಬ್ಯಾಂಕ್ ಒದಗಿಸುತ್ತದೆ. ಇದರಿಂದ ಯಾವುದೇ ಅವಘಡಗಳಾಗಿ ರೂಪಾಯಿ 3 ಲಕ್ಷದವರೆಗೆ ಅಲ್ಪಾವಧಿ ಸಾಲ ಮತ್ತು 10 ಲಕ್ಷ ರೂ ಗಳವರೆಗೆ ಮಧ್ಯಮಾವಧಿ ಸಾಲ ಪಡೆದುಕೊಂಡ ರೈತರು ಮೃತಪಟ್ಟರೆ ಸಾಲದ ಮೊತ್ತವನ್ನು ವಿಮೆಯ ಮೂಲಕ ಭರಿಸಲಾಗುತ್ತದೆ ಎಂದೂ ಅವರು ಹೇಳಿದರು.

ಜಾಗತಿಕ ಸಾಂಕ್ರಾಮಿಕ ಕೋವಿಡ್ ಸಂದರ್ಭದಲ್ಲಿ ಬ್ಯಾಂಕ್ ರೈತರ ನೆರವಿಗೆ ಧಾವಿಸಿದೆ. ಮೃತಪಟ್ಟ 174 ರೈತ ಕುಟುಂಬಗಳಿಗೆ 1.52 ಕೋ.ರೂ. ಪರಿಹಾರವನ್ನು ಒದಗಿಸಲಾಗಿದೆ ಎಂದವರು ಅಂಕಿ ಅಂಶ ಒದಗಿಸಿದರು.

ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಭಾಸ್ಕರ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಎಸ್. ರಾಜು ಪೂಜಾರಿ, ಶಶಿ ಕುಮಾರ್ ರೈ ಬಾಲ್ಯೊಟ್ಟು, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕೆ. ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ.ರೈ, ರಾಜೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲ ಕೃಷ್ಣ ಭಟ್, ಸಹಕಾರ ಸಂಘಗಳ ಉಪ ನಿಬಮ್ಧಕ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು