News Karnataka Kannada
Friday, March 29 2024
Cricket
ಮಂಗಳೂರು

ಮಂಗಳೂರು: ಎಂಸಿಸಿ ಬ್ಯಾಂಕ್ ಸ್ಥಾಪಕರ ದಿನ ಆಚರಣೆ

MCC Bank founder's day celebrated
Photo Credit : News Kannada

ಮಂಗಳೂರು: ಕರಾವಳಿಯ ಪ್ರಥಮ ಅರ್ಬನ್ ಕೋ-ಆಪ್ ಬ್ಯಾಂಕ್‌ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನವನ್ನು ಮೇ 7 ರಂದು ಬ್ಯಾಂಕಿನ ಆಡಳಿತ ಕಚೇರಿ ಆವರಣದಲ್ಲಿ ಆಚರಿಸಲಾಯಿತು. 111 ವರ್ಷ ಬ್ಯಾಂಕ್‌ ಪೂರ್ಣಗೊಳಿಸಿದ್ದು, ವಿವಿಧ ಸಮಾಜಮುಖಿ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ.

ಧರ್ಮಗುರು ಬೋನವೆಂಚರ್ ನಜರೆತ್ ಅವರು ಪವಿತ್ರ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಂಸ್ಥೆ ಸಂಸ್ಥಾಪಕ ಸಲ್ಡಾನ್ಹಾ ಅವರ ದೂರದೃಷ್ಟಿಯ ಫಲವಾಗಿ ಬ್ಯಾಂಕ್‌ ಸಮಾಜಮುಖಿಯಾಗಿ 111 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದರು. ಸಿಬ್ಬಂದಿಗಳು ದೂರದೃಷ್ಟಿಯುಳ್ಳವರಾಗಿರಬೇಕು ಮತ್ತು ಬ್ಯಾಂಕ್‌ನ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು. ಬಳಿಕ ಮಾಸಾಶನ ವಿತರಣೆ, ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು
ಮಂಗಳೂರಿನ ಪ್ರಾವಿಟ್ ಫುಡ್ ಪ್ರಾಡಕ್ಟ್ಸ್, ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್, ನಿರ್ದೇಶಕರು ವೇದಿಕೆಯಲ್ಲಿದ್ದರು.

ಅನಿಲ್ ಲೋಬೋಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್‌ ಸಂಸ್ಥಾಪಕ ಸಂಸ್ಥಾಪಕ ಸಲ್ಡಾನ್ಹಾ ಅವರ ಮುಂದಾಲೋಚನೆ, ಸಮಾಜಮುಖಿ ದೃಷ್ಟಿಯಿಂದ ಬ್ಯಾಂಕ್‌ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು. ಅಂತಹ ದಾರ್ಶನಿಕ ಸಂಸ್ಥಾಪಕರ ಮಹಾನ್‌ ಕಾರ್ಯಗಳನ್ನು ನೆನಪಿಸಲು ಬ್ಯಾಂಕ್‌ ಹಲವು ಕಾರ್ಯಯೋಜನೆ ಹಮ್ಮಿಕೊಂಡಿದೆ ಎಂದರು. ಗ್ರಾಹಕರ ಸಭೆ, ಮಹಿಳಾ ದಿನ, ಶತಮಾನೋತ್ಸವದ ನಂತರದ ದಶಮಾನೋತ್ಸವ ಆಚರಣೆ, ಎನ್‌ಆರ್‌ಐ ಸಭೆ ಇತ್ಯಾದಿ ಆಯೋಜಿಸಲಾಗಿದೆ ಎಂದರು. ಇಂತಹ ಕಾರ್ಯಕ್ರಮಗಳು ಬ್ಯಾಂಕಿನ ಗ್ರಾಹಕರು ಮತ್ತು ಷೇರುದಾರರಲ್ಲಿ ಅಭಿಮಾನ ಮೂಡಿಸುವಲ್ಲಿ ನೆರವಾಗಿದೆ. ಎಂದು ಹೇಳಿದರು. ಇಂದು ಬ್ಯಾಂಕ್‌ ಪ್ರಬಲ ಹಣಕಾಸು ಸಂಸ್ಥೆಯಾಗಿ ಬ್ಯಾಂಕ್ ಉಳಿದಿದೆ. ಬ್ಯಾಂಕ್‌ನ ಗ್ರಾಹಕರು, ಷೇರುದಾರರ ನಂಬಿಕೆಯನ್ನು ಗಳಿಸಿ ಮುನ್ನಡೆಯುತ್ತಿದೆ ಎಂದರು. ವಿನ್ಸೆಂಟ್ ಕುಟಿನ್ಹಾ ಅವರು ದೂರದೃಷ್ಟಿಯ ನಾಯಕ ಪಿಎಫ್‌ಎಕ್ಸ್ ಸಲ್ಡಾನ್ಹಾ ಅವರ ಸಾಧನೆಯ ಹಾದಿಯನ್ನು ಸ್ಮರಿಸಿದರು.

ಸಮುದಾಯದ ಅನುಕೂಲಕ್ಕಾಗಿ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಂದು ಹಲವರ ಮನೆ ಬೆಳಗುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಇಂದು ಬ್ಯಾಂಕ್‌ ಎರಡು ಜಿಲ್ಲೆಗಳಿಂದ 7 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ ಎಂಬುದು ಸಂತಸದ ವಿಚಾರ ಎಂದರು. ಅಲ್ಲದೆ ಸಿಬ್ಬಂದಿ ವರ್ಗದವರು ಬ್ಯಾಂಕಿನ ಅಭಿವೃದ್ದಿಗೆ ಒಗ್ಗೂಡಿ ಶ್ರಮಿಸಬೇಕು ಎಂದರು.

ಅತಿಥಿಗಳಿಂದ ಸ್ಥಾಪಕರ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥಾಪಕರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮೇ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂಟೆರೊ ರೋಶನ್ ಡಿಸೋಜಾ, ಎಲ್ರಾಯ್ ಕ್ರಾಸ್ಟೊ, ಡಾ ಫ್ರೀಡಾ ಡಿಸೋಜಾ, ಸುಶಾಂತ್ ಸಲ್ಡಾನ್ಹಾ, ಅಲ್ವಿನ್ ಪಿ. ಮೊಂಟಿಯೆರೊ, ಶರ್ಮಿಳಾ ಮೆನೆಜಸ್, ಫೆಲಿಕ್ಸ್ ಡಿಕ್ರೂಜ್, ಡಾ.ಜೆರಾಲ್ಡ್ ಪಿಂಟೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕರಾದ ಸುನಿಲ್ ಮಿನೇಜಸ್ ವಂದಿಸಿದರು. ಶೈನಿ ಡಿಸೋಜಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು