News Kannada
Saturday, February 24 2024
ಕ್ಯಾಂಪಸ್

ಮಂಗಳೂರು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

Mangaluru: NSS annual special camp inaugurated
Photo Credit : News Kannada

ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಚೇಳೂರಿನಲ್ಲಿ ಮಾರ್ಚ್ 10, 2023 ರಂದು ನೆರವೇರಿತು.

ಸಂತ ಥೋಮಸ್ ದೇವಾಲಯದ ಧರ್ಮಗುರುಗಳಾದ ವಂ ಗು ಮೈಕಲ್ ಡಿಸಿಲ್ವಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ದತೆ ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನದ ಕುರಿತು ಅರಿವು ಮೂಡಿಸಿದರು. ಸಜಿಪ ಪಡು ಗ್ರಾಮ ಪಂಚಾಯತಿನ ಅಧ್ಯಕ್ಷರಾದ  ವಿಠ್ಠಲ್ ದಾಸ್ ಅವರು ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಂಗಳೂರಿನ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ವಂ ಗು ಬೋನವೆಂಚರ್ ನಜರೆತ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಶಿಬಿರಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ ಗು ಮೈಕಲ್ ಸಂತುಮಾಯರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂತ ಥೋಮಸ್ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರಾಬರ್ಟ್ ಡಿಸೋಜ ಹಾಗೂ ಕಾರ್ಯದರ್ಶಿಗಳಾದ ಲವೀನಾ ರೊಡ್ರಿಗಸ್ ಉಪಸ್ಥಿತರಿದ್ದರು.

ರಾ. ಸೇ.ಯೋಜನೆಯ ಯೋಜನಾಧಕಾರಿ ಕು ಶ್ರಾವ್ಯ ಏನ್ ಸ್ವಾಗತಿಸಿದರು. ಶಿಬಿರದ ನಾಯಕ ವಿನಿತ್ ಫರ್ನಾಂಡೀಸ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿ ಸುಶ್ಮಿತಾ ನಿರೂಪಿಸಿದರು. ಈ ವಾರ್ಷಿಕ ಶಿಬಿರದಲ್ಲಿ 51 ವಿದ್ಯಾರ್ಥಿಗಳು ಭಾಗವಾಗಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು