News Kannada
Saturday, February 24 2024
ಮಂಗಳೂರು

ಮಂಗಳೂರು: ಕೆಎಂಸಿ ಆಸ್ಪತ್ರೆಯಲ್ಲಿ ಶಾಲಾ ಸ್ಕೋಲಿಯೋಸಿಸ್ ಜಾಗೃತಿ ಅಭಿಯಾನಕ್ಕೆ ಚಾಲನೆ

Mangaluru: School scoliosis awareness campaign launched at KMC Hospital
Photo Credit : News Kannada

ಮಂಗಳೂರು: ಶಾಲಾ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೆನ್ನು ಮೂಳೆಯ ಸಮಸ್ಯೆಯಾದ ಸ್ಕೋಲಿಯೋಸಿಸ್ ಪ್ರಾರಂಭಲ್ಲೇ ಪತ್ತೆ ಮಾಡುವುದಕ್ಕಾಗಿ ಶಾಲಾ ಸ್ಕೋಲಿಯೋಸಿಸ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆ.

200 ಪ್ರಾಥಮಿಕ ಮತ್ತು ಮಾ‘ಮಿಕ ಶಾಲೆಗಳನ್ನು ತಲಪುವ ಉದ್ದೇಶ. ಮುಂದಿನ ಒಂದು ವರ್ಷದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕಣ್ಣೂರು ಜಿಲ್ಲೆಗಳ ಶಾಲೆಗಳ ಪೋಷಕರು ಮತ್ತು ಶಿಕ್ಷಕರನ್ನು ತಲಪುವ ಗುರಿ.

ಮಕ್ಕಳಲ್ಲಿ ಸ್ಕೋಲಿಯೋಸಿಸ್‌ನ್ನು ಆರಂ‘ದಲ್ಲೇ ಪತ್ತೆ ಮಾಡಿದರೆ ಶಸ್ತ್ರಕ್ರಿಯೆ ಇಲ್ಲದೆಯೇ ಅದನ್ನು ಸಂಪೂರ್ಣ ಗುಣಪಡಿಸಲು ಸಾ‘ ಎಂದು ಮಾಹಿತಿ ನೀಡಿದ ಕೆಎಂಸಿ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯ ತಜ್ಞ ಡಾ.ಈಶ್ವರ ಕೀರ್ತಿ ಎಂದರು.

ಬೆನ್ನುಮೂಳೆಯು ಪಕ್ಕಕ್ಕೆ ಬಾಗುವ ತೊಂದರೆಯೇ ಸ್ಕೋಲಿಯೋಸಿಸ್. ಇದು ಶೇ 2ರಿಂದ 4ರಷ್ಟು ಮಕ್ಕಳಲ್ಲಿ ಕಂಡುಬರುತ್ತದೆ. ಬಹುತೇಕ ಮಕ್ಕಳಿಗೆ ಇದು ತಾನಾಗಿ ಸರಿಯಾಗುತ್ತದೆ. ಸ್ಕೋಲಿಯೋಸಿಸ್ ಪತ್ತೆಯಾದ ಪ್ರತಿ 6ರಲ್ಲಿ ಒಬ್ಬ ಮಗುವಿಗೆ ಶಸ್ತ್ರಕ್ರಿಯೆ ಅಗತ್ಯವಿರುತ್ತದೆ. ಬಾಲಕಿಯರಲ್ಲಿ ಈ ಸಮಸ್ಯೆ ಜಾಸ್ತಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು