News Karnataka Kannada
Friday, April 26 2024
ಮಂಗಳೂರು

ಮಂಗಳೂರು: ‘ಹೃದಯರಕ್ತನಾಳದ ಮೆಟಾಬೊಲೊಮಿಕ್ಸ್’ ವಿಚಾರ ಸಂಕಿರಣ

Seminar on 'Cardiovascular Metabolomics'
Photo Credit : News Kannada

ಮಂಗಳೂರು: ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) “ಕಾರ್ಡಿಯೋವಾಸ್ಕುಲಾರ್ ಮೆಟಾ ಬೊಲೊಮಿಕ್ಸ್ ಕುರಿತು ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಘಟಕಗಳಲ್ಲಿ ಒಂದಾದ ಸೆಂಟರ್ ಫಾರ್ ಸಿಸ್ಟಮ್ಸ್ ಬಯಾಲಜಿ ಮತ್ತು ಮಾಲಿಕ್ಯುಲರ್ ಮೆಡಿಸಿನ್, ಯೆನೆಪೊಯ ಸಂಶೋಧನಾ ಕೇಂದ್ರವು, ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ (LSHTM) ಸಹಯೋಗದೊಂದಿಗೆ ಕಾರ್ಡಿಯೋವಾಸ್ಕುಲಾರ್ ಮೆಟಾಬೊಲೊಮಿಕ್ಸ್ ಕುರಿತು ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಈ ಅಂತರಾಷ್ಟ್ರೀಯ ವಿಚಾರ ಸಂಕಿರಣವು 19ನೇ ಮೇ 2023 ರಂದು ದೇರಳಕಟ್ಟೆ ಮಂಗಳೂರಿನ ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ದಲ್ಲಿ ನಡೆಯಲಿದೆ. ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ವಿಶ್ವದ ಕೆಲವು ಪ್ರಮುಖ ತಜ್ಞರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ಧಾರೆ.

ಕಾರ್ಡಿಯೋವಾಸ್ಕುಲಾರ್ ಮೆಟಾಬೊಲೊಮಿಕ್ಸ್ ನ ಇತ್ತೀಚಿನ ಬೆಳವಣಿಗೆಗಳು ಮತ್ತು ಅತ್ಯಾಧುನಿಕ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತದೆ. ಅಬೆರಿಸ್ಟ್‌ವಿತ್ ವಿಶ್ವವಿದ್ಯಾನಿಲಯ, ಚಿಯಾಂಗ್ ಮಾಯ್ ವಿಶ್ವವಿದ್ಯಾನಿಲಯ, ಜೈವಿಕ ತಂತ್ರಜ್ಞಾನ ಕೌಶಲ್ಯ ವರ್ಧನೆ ಕಾರ್ಯಕ್ರಮ (BiSEP) ಕರ್ನಾಟಕ ಸರ್ಕಾರ, ಥರ್ಮೋ ಫಿಶರ್ ಸೈಂಟಿಫಿಕ್ ಮತ್ತು ಮೊಲ್ಸಿಸ್ ಸೈಂಟಿಫಿಕ್ ಸೇರಿದಂತೆ ಹಲವಾರು ಇತರ ಸಂಸ್ಥೆಗಳು ಮತ್ತು ಕಂಪನಿಗಳು ಈ ವಿಚಾರ ಸಂಕಿರಣದಲ್ಲಿ ಪಾಲುದಾರರಾಗಿದ್ದಾರೆ.

ತಜ್ಞರ ಸಮಿತಿಯು ಇತ್ತೀಚಿನ ಸಂಶೋಧನೆಗಳು, ಉದಯೋನ್ಮುಖ ಪ್ರವೃತ್ತಿಗಳು ಮತ್ತು ಕ್ಷೇತ್ರಕ್ಕೆ ಸಂಭಾವ್ಯ ಭವಿಷ್ಯದ ನಿರ್ದೇಶನಗಳನ್ನು ಒಳಗೊಂಡಂತೆ ಹೃದಯರಕ್ತನಾಳದ ಕಾಯಿಲೆಗಳ ರೋಗಶಾಸ್ತ್ರದ ಪ್ರಮುಖ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳು ಮತ್ತು ಒಳನೋಟಗಳನ್ನು ಪ್ರದರ್ಶಿಸಲಿರುತ್ತಾರೆ. ಈ ವಿಚಾರ ಸಂಕಿರಣದಲ್ಲಿ ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಡಾ. ಸಂಜಯ್ ಕಿನ್ರಾ ಹಾಗೂ ಡಾ. ಪಾಪ್ಪಿ ಮಲ್ಲಿನ್ಸನ್; ಅಬೆರಿಸ್ಟ್‌ವಿತ್ ವಿಶ್ವವಿದ್ಯಾಲಯದ ಡಾ. ಥಾಮಸ್ ವಿಲ್ಸನ್; ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬೈಲಿಯರಿ ಸಯನ್ಸ್ ನ ಡಾ.ಜಸ್ವಿಂದರ್ ಸಿಂಗ್ ಮರಾಸ್, ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಮಂಜುನಾಥ್ ಬಿ ಜೋಶಿ, ಸೇರಿದಂತೆ ಹಲವಾರು ಖ್ಯಾತ ಸಂಶೋಧಕರು ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಯುವ ಸಂಶೋಧಕರಿಗೆ ತಮ್ಮ ಸಂಶೋಧನೆಯನ್ನು ಪ್ರದರ್ಶಿಸಲು ಮತ್ತು ಇತರ ತಜ್ಞರೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಪೋಸ್ಟರ್ ಪ್ರಸ್ತುತಿಗಳನ್ನು ಸ್ವೀಕರಿಸಲಾಗುವುದು. ಪೋಸ್ಟರ್‌ಗಳು ಆರೋಗ್ಯ ವಿಜ್ಞಾನ, ಬಯೋಮೆಡಿಕಲ್ ವಿಜ್ಞಾನ ಮತ್ತು ಜೀವ ವಿಜ್ಞಾನದ ಸಂಬಂಧಿತ ಯಾವುದೇ ಕ್ಷೇತ್ರದಿಂದ ಆಗಿರಬಹುದು.

ಹೆಚ್ಚುವರಿಯಾಗಿ, ಅತ್ಯುತ್ತಮ ಮೂರು ಪೋಸ್ಟರ್ ಪ್ರಸ್ತುತಿಗಳನ್ನು ಮೌಖಿಕ ಪ್ರಸ್ತುತಿಗಳನ್ನಾಗಿ ಮಾಡಲು ಅನುಮತಿಸಲಾಗುತ್ತದೆ. ಇದಲ್ಲದೇ ಮೂರು ಪೋಸ್ಟರ್ ಗಳಿಗೆ ನಗದು ಬಹುಮಾನ ನೀಡಲಾಗುವುದು. ಕಾರ್ಡಿಯೋವಾಸ್ಕುಲರ್ ಮೆಟಾಬೊಲೊಮಿಕ್ಸ್‌ನ ಇಂಟರ್ನ್ಯಾಷನಲ್ ಸಿಂಪೋಸಿಯಂ ಒಂದು ಉತ್ತಮ ವಿಜ್ಞಾನ ವಿಷಯ ವಿನಿಮಯ ವೇದಿಕೆಯಾಗಲಿದ್ದು, ಕ್ಷೇತ್ರದಲ್ಲಿನ ಕೆಲವು ಉನ್ನತ ತಜ್ಞರನ್ನು ಭೇಟಿಮಾಡಿ ಅವರ ಜ್ಞಾನ, ಅನುಭವಗಳು ಮತ್ತು  ಒಳನೋಟಗಳನ್ನು ಹಂಚಿಕೊಳ್ಳಲು ಸಹಾಯಕಾರಿಯಾಗುವುದು ಎಂದು ಆಶಿಸಲಾಗಿದೆ. ಈ ಕಾರ್ಯಕ್ರಮದಲ್ಲಿ
ಭಾಗವಹಿಸಲು ಆಸಕ್ತರಾದವರು ಉತ್ತಮ ಶೈಕ್ಷಣಿಕ ಅನುಭವವನ್ನು ಎದುರುನೋಡಬಹುದು ಹಾಗೂ ಕಾರ್ಡಿಯೋವಾಸ್ಕುಲಾರ್ ಮೆಟಾಬೊಲೊಮಿಕ್ಸ್ ಕುರಿತು ತಮ್ಮ ಅರಿವನ್ನು ಉದ್ಧೀಪನಗೊಳಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು