News Kannada
Friday, March 01 2024
ಮಂಗಳೂರು

ಮಂಗಳೂರು: ಸ್ಮಾರ್ಟ್ ಸಿಟಿ ಗೇಲ್ ಇಂಡಿಯಾ ಕಾಮಗಾರಿಯಿಂದ ಅಲ್ಲಲ್ಲಿ ಗುಂಡಿ: ಜನರಿಗೆ ಪ್ರಾಣ ಸಂಕಟ

mangaluru-smart-city
Photo Credit : By Author

ಮಂಗಳೂರು: ನಗರದ ವಿವಿಧೆಡೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅಲ್ಲಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಗಾಲ ಶುರುವಾದ ಮೇಲೆ ಈ ಸಮಸ್ಯೆ ತೀವ್ರಗೊಂಡಿದೆ. ವಿಶೇಷವಾಗಿ ಬೈಕ್ ಸವಾರರು ಅಲ್ಲಲ್ಲಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.  ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಈ ಅಪಘಾತಗಳು ಜನರ ಬಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಜನರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .

ಕಳೆದ ಕೆಲವು ತಿಂಗಳುಗಳಿಂದ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ಗೇಲ್ ಇಂಡಿಯಾ ಪೈಪ್ ಲೈನ್ ಅಳವಡಿಕೆ ಕಾಮಗಾರಿ ವೇಗ ಪಡೆದುಕೊಂಡಿದೆ. ಇದರಿಂದ ವಾಹನ ಸವಾರರು ವರದಿಯಾಗದ ಸಣ್ಣಪುಟ್ಟ ಅಪಘಾತಗಳಿಗೆ ಈಡಾಗುವುದು ಹಾಗೂ ರಸ್ತೆಯ ಮಾರಣಾಂತಿಕ ಗುಂಡಿಗೆ ಸಿಲುಕಿ ವಾಹನಗಳಿಗೆ ಹಾನಿಯಾಗಿರುವ ಘಟನೆಗಳು ಮಾಮೂಲಿಯಾಗಿವೆ . ಆದರೆ ಕಾಮಗಾರಿಯಿಂದಾಗಿ ಸೃಷ್ಟಿಯಾಗಿರುವ ಈ ಮಾರಣಾಂತಿಕ ಗುಂಡಿಗಳಲ್ಲಿ ಸುರಕ್ಷತಾ ಕ್ರಮಕ್ಕೆ ಅಧಿಕಾರಿಗಳು ಇನ್ನೂ ಮುಂದಾಗಿಲ್ಲ.

ನಗರದ ವಿವಿಧ ಪ್ರಮುಖ ಜಂಕ್ಷನ್ ಗಳು ಮತ್ತು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಮತ್ತು ಗೇಲ್ ಇಂಡಿಯಾ ಪೈಪ್ ಲೈನ್ ಕಾಮಗಾರಿಯ ಅಂಗವಾಗಿ ಅಗೆದಿರುವ ಗುಂಡಿಗಳಿಗೆ ಕಾಮಗಾರಿ ಮುಗಿದ ನಂತರ ಅವುಗಳನ್ನು ಮುಚ್ಚದೆ ಬಿಡಲಾಗುತ್ತದೆ. ಕನಿಷ್ಠ ಆ ಪ್ರದೇಶದ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಾಗಾರಿಯನ್ನು ಅಪೂರ್ಣವಾಗಿ ಬಿಡಲಾಗಿದೆ, ಕಾಮಗಾರಿ ಪೂರ್ಣಗೊಂಡ ಸ್ಥಳದಲ್ಲಿ ಗುಂಡಿಗಳನ್ನು ಕೇವಲ ಮಣ್ಣಿನಿಂದ ಮುಚ್ಚಲಾಗಿದ್ದು ಮಳೆಗಾಲದಲ್ಲಿ ಅದು ಇಡೀ ರಸ್ತೆಯನ್ನು ಕೊಚ್ಚೆಯಾಗಿಸುತ್ತದೆ. ಅಂಬೇಡ್ಕರ್ ಜ್ಯೋತಿ ವೃತ್ತ, ಬಲ್ಮಠ ಜಂಕ್ಷನ್, ಫಲ್ನೀರ್, ಬೋಳಾರ್ ಸೇರಿದಂತೆ ಹಲವೆಡೆ ಇಂಥ ಗುಂಡಿಗಳಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಇದು ಇನ್ನಷ್ಟು ಬಿಗಡಾಯಿಸಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ನೀರು ತುಂಬಿದ ಗುಂಡಿಗಳು ಗಮನಕ್ಕೆ ಬರುವುದಿಲ್ಲವಾದ್ದರಿಂದ ಭಾರಿ ಅಪಾಯ ಕಾದಿದೆ.

ಈ ಹಿಂದೆ ನಗರದಾದ್ಯಂತ ಜನರು ಗೇಲ್ ಇಂಡಿಯಾ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಯಿಂದ ಉಂಟಾದ ಅನಾನುಕೂಲಗಳ ಬಗ್ಗೆ ದೂರು ನೀಡಿದ್ದರು. ಅಲ್ಲದೆ ಅದರ ಅಗೆಯುವಿಕೆ ಕಾರ್ಯಾಚರಣೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಬೈಕಂಪಾಡಿ ಸೇರಿದಂತೆ ಮತ್ತು ಇತರ ಪ್ರದೇಶಗಳು ಪೈಪ್ ಲೈನ್ ಅಳವಡಿಕೆ ಕಾರ್ಯ ದಿನ ತೀವ್ರ ತೊಂದರೆ ತೊಂದರೆಗೀಡಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು