News Kannada
Friday, February 23 2024
ಮಂಗಳೂರು

ಮಂಗಳೂರು: ಮೋತಿಶಾಮ್ ಕಾಂಪ್ಲೆಕ್ಸಿನ ಸಿಟಿ ಸೆಂಟರ್ ಮಾಲ್ ನ 12ನೇ ವರ್ಷಾಚರಣೆ

MANGALURU: The 12th anniversary celebrations of city centre mall in Motisham complex
Photo Credit : Facebook

ಮಂಗಳೂರು: ರಾಜ್ಯದ ಐದನೆಯ ಬೃಹತ್ ಮಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೋತಿಶಾಮ್ ಕಾಂಪ್ಲೆಕ್ಸಿನ ಸಿಟಿ ಸೆಂಟರ್ ಮಾಲ್ 12ನೇ ವರ್ಷಾಚರಣೆ ಪ್ರಯುಕ್ತ ಸಿಟಿ ಸೆಂಟರ್ ಮಾಲ್ ನಲ್ಲಿ ಸಂಭ್ರಮದ ಚಾಲನೆ ದೊರೆಯಿತು.

ಅತಿಥಿಯಾಗಿ ಭಾಗವಹಿಸಿದ ಮೋತಿಶಾಮ್ ಕಾಂಪ್ಲೆಕ್ಸ್ನ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕ ಸದಸ್ಯ ಮೋತಿಶಾಮ್ ಅಬ್ದುಲ್ ಬಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮತ್ತೋರ್ವ ಅತಿಥಿ ನಟ ರೂಪೇಶ್ ಶೆಟ್ಟಿ ಮಾತನಾಡಿ ಸಿಟಿ ಸೆಂಟರ್ ಮಾಲ್ ನ ಜೊತೆ ಮಂಗಳೂರಿನ ಜನರಿಗೆ ಭಾವನಾತ್ಮಕ ಸಂಬಂಧ ಇದೆ ಇಲ್ಲಿನ ಗ್ರಾಹಕರಿಗೆ ಮಾಲ್ ಬಗ್ಗೆ ಪರಿಚಯ ಮಾಡಿದ ಸಂಸ್ಥೆ ಸಿಟಿಸೆಂಟರ್. ದೇಶವಿದೇಶಗಳ ಬ್ಯಾಂಡ್ ಗಳ ಸಾಮಗ್ರಿಗಳು ಈ ಮಾಲ್ ಮೂಲಕ ಒಂದೇ ಕಡೆ ಗ್ರಾಹಕರಿಗೆ ದೊರೆಯುವಂತಾಗಿದೆ ಅಲ್ಲದೆ ಚಲನಚಿತ್ರದ ಬೆಳವಣಿಗೆ ಹಾಗೂ ಕಲಾವಿದರಿಗೆ ಸಿಟಿ ಸೆಂಟರ್ ಪ್ರೋತ್ಸಾಹ ನೀಡಿದೆ ಎಂದರು. ಚಲನಚಿತ್ರ ನಟ ವಿನೀತ್, ನಟಿ ರಚನಾ ರೈ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕಲಾವಿದರು ಚಲನಚಿತ್ರನಟರು ಗ್ರಾಹಕರು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಮೋತಿಶಾಮ್ ಕಾಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಎಸ್ ಎಂ ಹರ್ಷದೆ ನಿರ್ದೇಶಕ ಎಸ್ ಎಂ ಸವೂದ್ ಹಾಗೂ ಸಿಇಒ ಧರ್ಮರಾಜ್ ಅತಿಥಿಗಳನ್ನು ಸ್ವಾಗತಿಸಿದರು.

ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು ವಿವಿಧ ಕಲಾ ತಂಡದ ಸದಸ್ಯರು ತಮ್ಮ ಕಾರ್ಯಕ್ರಮಗಳ ಮೂಲಕ ವರ್ಷಾಚರಣೆ ಸಂಭ್ರಮಕ್ಕೆ ಮೆರುಗು ನೀಡಿದರು.

ಸಿಟಿಸೆಂಟರ್ ಕಾರ್ನಿವಲ್ ಜುಲೈ ರಿಂದ ಆಗಸ್ಟ್ 15ರವರೆಗೆ ನಡೆಯಲಿದೆ. ಗ್ರಾಹಕರು ಹೆಚ್ಚು ಶಾಪಿಂಗ್ ಮಾಡೋ ಮೂಲಕ ಪ್ರತಿದಿನ ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶವಿದ್ದು ಬಂಪರ್ ಬಹುಮಾನವಾಗಿ ಕಾರು ಬೈಕ್ ಹಾಗೂ ಸ್ಕೂಟರ್ ನ್ನು ಗೆಲ್ಲಬಹುದಾಗಿದೆ. ಅಲ್ಲದೆ ವಾರಾಂತ್ಯದಲ್ಲಿ ನಡೆಯುವ ಡ್ರಾದಲ್ಲಿ ಹೋಮ್ ಸೆಂಟರ್ ನಿಂದ ಸೋಫಾಸೆಟ್ ಕ್ಲಬ್ ಮಹೀಂದ್ರದಿಂದ ಹಾಲಿಡೇ ವೌಚೆರ್ ಮತ್ತು ಐಫೋನ್ ಗೆಲ್ಲುವ ಅವಕಾಶವಿದೆ ಅಲ್ಲದೆ ವಾರಾಂತ್ಯದಲ್ಲಿ ಮಕ್ಕಳಿಂದ , ದೊಡ್ಡವರಿಂದ ವಿವಿಧ ಕಲಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು