News Kannada
Monday, February 26 2024
ಮಂಗಳೂರು

ಮಂಗಳೂರು: ತಿಂಗಳೊಳಗೆ ಹೊಸ ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಆರಂಭ

Mangaluru: Work on new central market to begin within a month
Photo Credit : News Kannada

ಮಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ 1ತಿಂಗಳೊಳಗೆ ಮಂಗಳೂರಿನ ಬಹು ಚರ್ಚಿತ ನೂತನ ಸೆಂಟ್ರಲ್ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಚಾಲನೆ ದೊರೆಯುವ ಸಾಧ್ಯತೆ ಇದೆ. 3ವರ್ಷಗಳೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ ಇಲ್ಲಿನ ಒಟ್ಟು ೩.೬೧ ಎಕರೆ ಸ್ಥಳದಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವ ಪಿಪಿಪಿ ಮಾದರಿಯಲ್ಲಿ ಒಟ್ಟು 114ಕೋಟಿ ರೂ ವೆಚ್ಚದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಸ್ಮಾರ್ಟ್ ಸಿಟಿ ಉದ್ದೇಶಿಸಿದೆ . ಹೊಸ ಮಾರುಕಟ್ಟೆಯಲ್ಲಿ ನೆಲ ಅಂತಸ್ತು ಮತ್ತು ಅದರ ಮೇಲ್ಗಡೆ 5ಮಹಡಿಗಳಿರುತ್ತವೆ ತಳಭಾಗದ 2ಅಂತಸ್ತುಗಳು ವಾಹನ ಪಾರ್ಕಿಂಗ್ ಗೆ ಮೀಸಲಾಗಿರುತ್ತದೆ.

ಸೆಂಟ್ರಲ್ ಮಾರುಕಟ್ಟೆ ನಿರ್ಮಾಣವಾಗುವ ಸ್ಥಳದಲ್ಲಿ ಕಾಮಗಾರಿ ಸಂದರ್ಭ ಬೇಸ್ ಮೆಂಟ್ ಗಾಗಿ ಅಗೆಯಲಾಗುತ್ತದೆ ಈ ವ್ಯಾಪ್ತಿ ಹಾಗೂ ಇದರ ಸುತ್ತಲೂ ಶೀಟ್ ಅಳವಡಿಸಿ ಬಂದ್ ಮಾಡಲಾಗುತ್ತದೆ ಇದರಿಂದಾಗಿ ಸದ್ಯ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ ಜತೆಗೆ ಕಾಮಗಾರಿ ವೇಳೆ ವಾಹನ ಸಂಚಾರ ಕೂಡ ಇಲ್ಲಿ ಸಮಸ್ಯೆ ಆಗಲಿದೆ.

ಹಳೆಯ ಸೆಂಟ್ರಲ್ ಮಾರ್ಕೆಟ್ ಇದ್ದ ಜಾಗದಲ್ಲಿಯೇ ಸ್ಮಾರ್ಟ್ ಸಿಟಿ ವತಿಯಿಂದ ಹೊಸದಾಗಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದೀಗ ಅಂತಿಮ ಹಂತದಲ್ಲಿದ್ದು 1ತಿಂಗಳೊಳಗೆ ಇದರ ಕಾಮಗಾರಿಯೂ ಆರಂಭವಾಗಲಿದೆ ಅದಕ್ಕಾಗಿ ಕೆಲವೇ ದಿನಗಳಲ್ಲಿ ಭೂಮಿಪೂಜೆ ನಡೆಯಲಿದೆ

ಸೆಂಟ್ರಲ್ ಮಾರುಕಟ್ಟೆ ಇದ್ದ ಸ್ಥಳದಲ್ಲೀಗ ಕಲ್ಲುಮಣ್ಣಿನ ರಾಶಿ ಇದ್ದು ತೆರವು ಕಾರ್ಯಾಚರಣೆ ಮುಂದುವರಿದಿದೆ .ನಗರದಲ್ಲಿ ಕಟ್ಟಡ ನಿರ್ಮಾಣ ಮತ್ತು ತೆರವು ತ್ಯಾಜ್ಯವನ್ನು ಹಾಕಲು ಸೂಕ್ತ ಸ್ಥಳದ ಕೊರತೆ ಇರುವುದರಿಂದ ಸೆಂಟ್ರಲ್ ಮಾರ್ಕೆಟ್ ತೆರವು ಕಾಮಗಾರಿ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆಗೂ ಸಮಸ್ಯೆಯಾಗಿದೆ.

ಜತೆಗೆ ಹಗಲು ಮಾರುಕಟ್ಟೆ ಪ್ರದೇಶ ವಾಹನ ಜನ ದಟ್ಟಣೆಯಿಂದ ಕೂಡಿರುವುದರಿಂದ ಟಿಪ್ಪರ್ ಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪ್ರಸ್ತುತ ಈ ತ್ಯಾಜ್ಯವನ್ನು ಇತರ ನಿರ್ಮಾಣ ಸ್ಥಳಗಳಿಗೆ ಲ್ಯಾಂಡ್ ಫೀಲಿಂಗಿಗೆ ಸಹಿತ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಉಳಿದ ಕಲ್ಲು ಜಲ್ಲಿ ಹುಡಿ ಮೊದಲಾದವುಗಳನ್ನು ಗುತ್ತಿಗೆದಾರರೇ ಬೇರೆಡೆಗಳಲ್ಲಿ ಕಾಮಗಾರಿಗಳಿಗೆ ನೀಡುತ್ತಿದ್ದಾರೆ. ಕಾರ್ಯಾಚರಣೆ ನಡೆದಿರುವಂತೆಯೇ ಒಂದೆರಡು ಕಡೆಗಳಲ್ಲಿ ಹೊರಗಿನವರು ಇಲ್ಲಿಗೆ ತ್ಯಾಜ್ಯ ತಂದು ಸುರಿಯುವ ಘಟನೆಯೂ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು