News Karnataka Kannada
Monday, May 06 2024
ಮಂಗಳೂರು

ಮಾರ್ನೆಮಿ ಪಿಲಿಯ ಕೊರಳಿನಲ್ಲಿ ಲಕ್ಷತೂಗುವ ʼನೋಟಿನ ಮಾಲೆʼ

Marnemi Pili's neck is a 'garland of notes' weighing lakhs
Photo Credit : News Kannada

ಮಂಗಳೂರು: ನವರಾತ್ರಿ ಸಡಗರ ಆರಂಭ ಗೊಳ್ಳುತ್ತಿದ್ದಂತೆ ಹುಲಿ ವೇಷದ ತಾಸೆಯ ಪೆಟ್ಟು-ಕುಣಿತ ಮತ್ತೆ ತುಳುನಾಡಿನಲ್ಲಿ ಗುನು ಗುನಿಸಲು ಶುರುವಾಗಿದೆ. ಪಟ್ಟಿ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ. ನಾಡಿನೆಲ್ಲೆಡೆ ನಾನಾ ರೀತಿಯ ಹುಲಿಗಳ ದರ್ಶನವಾಗುತ್ತಿದೆ. ದೇವಸ್ಥಾನದ ಅಂಗಣ, ಅಂಗಡಿ-ಮನೆ ಮುಂಭಾಗ, ಮೆರವಣಿಗೆಯಲ್ಲಿ ಹುಲಿ ಕುಣಿತದ ಹೆಜ್ಜೆ.

ಎಲ್ಲೆಲ್ಲೂ ಕಾಣಸಿಗುವ ಮಾರ್ನೆ ಮಿಯ ಕೆಲವು ಪಿಲಿಯ ಕೊರಳಿನಲ್ಲಿ ಗಮನಸೆಳೆಯುವುದು ಬಹು ಮೌಲ್ಯದ ನೋಟಿನ ಮಾಲೆ, ಅದರಲ್ಲಿಯೂ ಟ್ಯಾಬೋದಲ್ಲಿ ಕಾಣುವ ಹುಲಿ ಕುಣಿತಗಾರನ ಕೊರಳಿಗೆ ನೋಟಿನ ಮಾಲೆಯೇ ಗೌರವದ ಸಂಕೇತ.

ದಸರಾ ಸಂದರ್ಭ ಹಲವು ಪ್ರಖ್ಯಾತ ಟೀಮ್ ಗಳು ಹುಲಿ ವೇಷ ಕುಣಿತ ಮಾಡುವುದು ವಾಡಿಕೆ. ಇದರಲ್ಲಿ ಕೆಲವು ಹುಲಿ ಕುಣಿತದ ಟೀಮ್ ಗಳಿಗೆ ‘ಹೆಮ್ಮೆಯ ಹುಲಿ’ ಎಂದು ಕೆಲವು ಹುಲಿವೇಷಗಳನ್ನು ಪರಿಭಾವಿಸುತ್ತಾರೆ. ಅಂತಹ ಹುಲಿ ವೇಷ ಧಾರಿಗೆ ತಂಡದಿಂದ ಅಥವಾ ಗೆಳೆಯರಿಂದ ನೋಟಿನ ಮಾಲೆ ಹಾಕುತ್ತಾರೆ. 300 ರೂ.ಗಳಿಂದ ಆರಂಭವಾಗುವ ನೋಟುಗಳ ಮಾಲೆಯ ಮೌಲ್ಯ ಕೆಲವು ಲಕ್ಷ ರೂ.ಗಳನ್ನು ತೂಗುವುದುಂಟು.

ಹಿಂದೆ ಹೇಗಿತ್ತು?
ಮೊದಲು ಕೂಡ ಹುಲಿ ವೇಷಧಾರಿ ಹಣದ ನೋಟಿನ ಮಾಲೆ ಹಾಕುವ ಪರಿಪಾಠವಿತ್ತು. ಆಗ ರಿಬ್ಬನ್‌ಗೆ ನೊಟುಗಳನ್ನು ಜೋಡಿಸಿ ಪಿನ್‌ ಹಾಕಿ ಮಾಲೆ ಸ್ವರೂಪ ಪಡೆಯುತ್ತಿತ್ತು. ಆದರೆ ಈಗ ರಿಬ್ಬನ್ ಬದಲಿಗೆ ಬಗೆ ಬಗೆಯ ಡಿಸೈನ್ ಆರಂಭವಾಗಿದೆ. ಗಣೇಶ್ ಉಳ್ಳಾಲ ಹಾಗೂ ಜಯಂತಿ ಅವರ ಪುತ್ರ ಉಳ್ಳಾಲ ಅರಸಹಿತ್ತು ನಿವಾಸಿ ರಕ್ಷಿತ್ ಅವರು ಫೈನಾನ್ಸ್‌ನಲ್ಲಿ ಉದ್ಯೋಗದಲ್ಲಿದ್ದು, ಅದರ ಜತೆಗೆ ನೋಟಿನ ಮಾಲೆಯನ್ನೂ ಪೋಣಿಸುವ ಕೈಚಳಕವನ್ನು ಮಾಡುತ್ತಿದ್ದಾರೆ.

ಮೌಲ್ಯಕ್ಕೆ ತಕ್ಕಹಾಗೆ ಮಾಲೆ!
10 ರೂ.ಗಳ ನೋಟು ಈಗ ಸುಲಭಕ್ಕೆ ಸಿಗುತ್ತಿಲ್ಲ. ಹೀಗಾಗಿ 10 ರೂ. ನೋಟಿನ ಮಾಲೆ ಕೊಂಚ ಕಷ್ಟ ಉಳಿದಂತೆ 50,100,500,2ಸಾವಿರ. ರೂಗಳ ನೋಟಿನ ಮಾಲೆ ಮಾಡಲಾಗುತ್ತದೆ. ಕೆಲವರು ನೋಟುಗಳನ್ನೇ ನೀಡಿ ಮಾಲೆ ಮಾಡಲು ತಿಳಿಸಿದರೆ, ಇನ್ನೂ ಕೆಲವರು ಅಕೌಂಟ್‌ಗೆ ಹಣ ಹಾಕುತ್ತಾರೆ. ನಾವೇ ಹಣ ಡ್ರಾ ಮಾಡಿ ಮಾಲೆ ಮಾಡಿ ಕೊಡುತ್ತೇವೆ. ಕೆಲವರು ಒಂದು ಮಾಲೆಯಲ್ಲಿ 50 ಸಾವಿರ ರೂ. ಮೌಲ್ಯದ ನೋಟುಗಳು ಬೇಕು ಅನ್ನುವ ವರಿದ್ದಾರೆ. ಆಗ ನೋಟು ಯಾವ ಪ್ರಕಾರದ್ದು ಬೇಕು ಎಂಬುದನ್ನು ತಿಳಿದು ಅಂತಹ ಮಾಲೆ ಮಾಡಲಾ ಗುತ್ತದೆ ನವರಾತ್ರಿಯ ಹುಲಿ ವೇಷಧಾರಿ ಮಾತ್ರ ಮಾಲೆ ಹಾಕುವುದಲ್ಲ ಈಗ ಈ ಟ್ರೆಂಡ್ ಮದುವೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ರಕ್ಷಿತ್ ಉಳ್ಳಾಲ,

ಮಾಡುವುದು ಹೇಗೆ?
ಚಾರ್ಟ್ ಪೇಪರ್ ನಲ್ಲಿ ರಟ್ಟಿನ ತುಂಡನ್ನು ಇರಿಸಿ ನೋಟುಗಳನ್ನು ಸುಂದರವಾಗಿ ವಿನ್ಯಾಸಗೊಳಿಸಿ ಜೋಡಿಸಿಡಲಾಗುತ್ತದೆ. ನೋಟಿಗೆ ಹಾನಿಯಾಗದಂತೆ ಜೋಡಿಸಿ ಮಾಲೆ ರೂಪ ನೀಡಲಾಗುತ್ತದೆ. ಇದಕ್ಕೆ ಹೊಸ ಹೊಸ ವಿನ್ಯಾಸದ ರೂಪ ನೀಡಲಾಗುತ್ತದೆ. ಕೆಲವು ಆಕಾರ ಗಳಲ್ಲಿ ಮಾಲೆಯು ಸಿದ್ಧಗೊಳ್ಳುತ್ತದೆ. ಅವಮಿಗಿಂತ 3 ತಿಂಗಳುಗಳ ಮುನ್ನವೇ ನೋಟು ಮಾಲೆ ಮಾಡುವ ಕಾವ್ಯವನ್ನು ಆರಂಭಿಸಲಾ ಗುತ್ತದೆ ಎನ್ನುತ್ತಾರೆ ರಕ್ಷಿತ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು