News Karnataka Kannada
Friday, April 19 2024
Cricket
ಮಂಗಳೂರು

ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಪ್ರಕರಣದಲ್ಲಿ ನಳಿನ್ ಕುಮಾರ್, ಸದಾನಂದ ಗೌಡ ನೇರ ಭಾಗಿ

Nalin Kumar, Sadananda Gowda directly involved in attack on BJP workers in Puttur
Photo Credit : News Kannada

ಪುತ್ತೂರು: ಕಾರ್ಯಕರ್ತರಿಗೆ ಪೊಲೀಸರಿಂದ ಹಲ್ಲೆ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಸಂಸದ ನಳಿನ್ ಕಟೀಲ್ ನೇರ ಭಾಗಿಯಾಗಿದ್ದಾರೆ. ಅವರ ಒತ್ತಡದಲ್ಲಿ ಡಿವೈಎಸ್ಪಿ ಅವರ ತಾಳಕ್ಕೆ ತಕ್ಕಂತೆ ಕುಣಿದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಇವರೇ ಅನ್ಯಾಯ ಮಾಡಿ, ಎಸ್ಪಿಗೆ ಒತ್ತಡ ಹಾಕಿರುವುದಲ್ಲದೆ ಅಧಿಕಾರಿಗಳನ್ನು ಅಮಾನತು ಮಾಡಿರುವುದೂ ಇವರೇ. ಇದು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳಿಗೆ, ಮುಂದಕ್ಕೆ ಕಾನೂನು ಮೀರಿ ನಡೆಯುವ ಪೊಲೀಸರಿಗೆ ಪಾಠವಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪಿಸಿದರು.

ಮೇ.೧19ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ ಸದಾನಂದ ಗೌಡರೇನು ಸ್ವಾತಂತ್ರ್ಯ ಹೋರಾಟಗಾರರೇ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ? ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದರೆ ನಾವೇಕೆ ಅನ್ಯಾಯ ಮಾಡಬೇಕು. ಇಂತಹ ಘಟನೆಗಳು ಬೇರೆಲ್ಲಿಯೂ ನಡೆದಿಲ್ವಾ. ಅಷ್ಟೊಂದು ದೊಡ್ಡ ಅಪರಾಧವಾ? ನಗರ ಠಾಣೆಯಲ್ಲಿ ವಿಚಾರಣೆ ಮಾಡಬೇಕಾದ ಪ್ರಕರಣವನ್ನು ಡಿವೈಎಸ್ಪಿ ಕಚೇರಿಯಲ್ಲಿ ಸಂಪ್ಯ ಪೊಲೀಸರನ್ನು ಕರೆಯಿಸಿ ಹಲ್ಲೆ ನಡೆಸಿದ್ದಾರೆ.

ಡಿವೈಎಸ್ಪಿಯವರು ಯಾರ ಕುಮ್ಮಕ್ಕಿನಲ್ಲಿ ಪುತ್ತೂರಿಗೆ ಬಂದಿದ್ದಾರೆ ಅವರ ನಡವಳಿಕೆಯ ಬಗ್ಗೆ ನಮಗೆ ಗೊತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಮಾಜಿ ಸಚಿವ ಸದಾನಂದ ಗೌಡರವರ ಒತ್ತಡ ಹಾಕಿ ಹಲ್ಲೆ ನಡೆಸಿದ್ದಾರೆ. ಆದರೆ ಪ್ರಭಾಕರ ಭಟ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ಸಾಕಷ್ಟು ಕೆಲಸವಿದ್ದರೂ ಇಲ್ಲಿಗೆ ಬಂದು ಲಾಭ ಪಡೆಯಲು ಯತ್ನಿಸುತ್ತಾರೆ. ನಾನು ಮಾಡುತ್ತೇನೆಂದು ಹರೀಶ್ ಪೂಂಜ ಹೇಳಲು ಪುತ್ತೂರಿನಲ್ಲಿ ಶಾಸಕರು ಇಲ್ವಾ ಎಂದು ಅಲಿಯವರು ಪ್ರಶ್ನಿಸಿದರು.

ಬಿಜೆಪಿಯವರ ಆರೋಪಗಳನ್ನು ಜನ ನಂಬುವುದಿಲ್ಲ. ಇವರ ನಾಟಕ, ದೊಂಬರಾಟಗಳೆಲ್ಲವೂ ಜನರಿಗೆ ಅರಿವಿದೆ. ಕಾರ್ಯಕರ್ತರಿಗೆ ನಡೆದ ಹಲ್ಲೆಯನ್ನು ಪ್ರಥಮ ಭಾರಿಗೆ ತೀವ್ರವಾಗಿ ಖಂಡಿಸಿದವರು ಶಾಸಕ ಅಶೋಕ್ ಕುಮಾರ್ ರೈಯವರು. ಹಾಗಿದ್ದರೂ ಅಶೋಕ್ ರೈಯವರು ಶಾಸಕರಾಗಿ ಗೆದ್ದ ಬಳಿಕ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಘಟನೆಯ ಬಗ್ಗೆ ದೂರು ಕೊಟ್ಟವರು, ಪ್ರತಿಭಟನೆ ನಡೆಸಿದವರು ಯಾರೆಂದು ಗೊತ್ತಿದ್ದರೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಡಿವೈಎಸ್ಪಿ ಕಚೇರಿಯಲ್ಲಿ ಯಾಕೆ ತನಿಕೆ ನಡೆಸಬೇಕು. ಸಂಪ್ಯ ಎಸೈ ಹಾಗೂ ಸಿಬ್ಬಂಧಿಗಳಿಗೆ ಇದರಲ್ಲಿ ಏನು ಸಂಬಂಧವಿದೆ? ಡಿವೈಎಸ್ಪಿ ಕಚೇರಿಯಲ್ಲಿ ಅವರ ಅದೇಶವಿಲ್ಲದೆ ಸಿಬ್ಬಂಧಿಗಳು ಕೆಲಸ ಮಾಡುತ್ತಾರಾ? ಡಿವೈಎಸ್ಪಿಯವರ ಆದೇಶದಂತೆ ಕೆಲಸ ಮಾಡಿದವರಿಗೆ ಅಮಾನತು ಶಿಕ್ಷೆ. ಇವರ ಮೇಲೆ ಮಾತ್ರ ಶಿಸ್ತು ಕ್ರಮ. ತನಗೆ ಒತ್ತಡ ಹೇರಿ ನೂರಾರು ಕರೆಗಳು ಬಂದಿವೆ ಎಂದು ಹೇಳುವ ಡಿವೈಎಸ್ಪಿಯವರು ಕರೆ ಮಾಡಿದವರು ಯಾರೆಂದು ಬಹಿರಂಗ ಪಡಿಸಲಿ ಎಂದು ಆಲಿ ಹೇಳಿದರು.

ಘಟನೆಯ ಬಗ್ಗೆ ಪ್ರಭಾಕರ್ ಭಟ್ ಹಾಗೂ ಹರೀಶ್ ಪೂಂಜ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಾಜ ರಾಧಾಕೃಷ್ಣ ಆಳ್ವ ಹಾಗೂ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ದೂರು ಮೊದಲು ದೂರು ನೀಡಿ ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಶಾಸಕ ಸಂಜೀವ ಮಠಂದೂರು ಹಿಂದೂ ಕಾರ್ಯಕರ್ತರ ಮೇಲೆ ಹಾಗೂ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ.‌

ರಾಜ್ಯದಲ್ಲಿ ಈಗ ಬಿಜೆಪಿ ಹಂಗಾಮಿ ಸರಕಾರ ಆಡಳಿತದಲ್ಲಿದೆ. ನಾಳೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಜನರಿಗೂ ಇದರ ಮಾಹಿತಿಯಿದೆ. ಆದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುವವರಿಗೆ ಕನಿಷ್ಠ ಜ್ಞಾನವಿರಬೇಕು. ಚುನಾವಣೆ ನಡೆದ ಕೂಡಲೇ ಅಧಿಕಾರಕ್ಕೆ ಬರುವುದಿಲ್ಲ. ಈಗ ಬಸವರಾಜ ಬೊಮ್ಮಾಯಿಯವರೇ ಹಂಗಾಮಿ ಮುಖ್ಯಮಂತ್ರಿಯಾಗಿದ್ದಾರೆ. ಆರೋಪ ಮಾಡುವವರ ತಲೆಯಲ್ಲಿ ಸೆಗಣಿಯಿರುವುದೊ? ಜನರು ಸತ್ಯ ನಂಬುವ ರೀತಿಯಲ್ಲಿ ಇವರು ಸುಳ್ಳು ಹೇಳಬೇಕು ಎಂದರು.

ನಳಿನ್ ಕುಮಾರ್ ಹಾಗೂ ಸದಾನಂದ ಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವುದಕ್ಕೆ ಕಾಂಗ್ರೆಸ್‌ನವರಿಗೆ ಯಾಕೆ ನೋವಾಗಬೇಕು. ನಾವು ಯಾಕೆ ಒತ್ತಡ ಹಾಕಿ ಹಲ್ಲೆ ನಡೆಸಬೇಕು ಎಂದು ಘಟನೆಯ ಬಗ್ಗೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯವರಿಗೆ ಪ್ರಶ್ನಿಸಿದರು. ಬಿಜೆಪಿಯವರೇ ದೂರು ನೀಡಿ, ಪ್ರತಿಭಟನೆ ನಡೆಸಿ ಮಾನ ಮರ್ಯಾದೆ ಇಲ್ಲದೆ ಅವರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರೇನು ಕಿವಿಗೆ ಹೂ ಇಟ್ಟಿದ್ದಾರಾ? ಜನರಿಗೂ ಗೊತ್ತಿದೆ ಯಾರು ಮಾಡಿದ್ದು ಎನ್ನುವುದು. ದೂರು ನೀಡಿದ್ದು ಯಾರು ಎಂದು ಗೊತ್ತಿದ್ದರೂ ಅರುಣ್ ಪುತ್ತಿಲ  ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿಲ್ಲ. ಯಾರ ಒತ್ತಡದಲ್ಲಿ ಬಂಧಿಸಿ, ಹಲ್ಲೆ ನಡೆಸಿದ್ದಾರೆ. ಅದಕ್ಕಿರುವ ಕಾರಣ, ಅದರ ಹಿಂದಿರುವವವರ ಬಗ್ಗೆ ಗೊತ್ತಿದ್ದರೂ ಪುತ್ತಿಲ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕೂರ್ನಡ್ಕದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಕಾವುನಲ್ಲಿ ಮುಸ್ಲಿಮರಿಂದ ಬ್ಯಾನರ್‌ಗೆ ಹಾನಿ ಮಾಡಿರುವುದಾಗಿ ಅರುಣ್ ಪುತ್ತಿಲ ಆರೋಪಿಸಿದ್ದು, ಮುಸ್ಲಿಂಮರಿಗಾಗಲಿ, ಕಾಂಗ್ರೆಸ್‌ನವರಿಗಾಗಲಿ ಪುತ್ತಿಲರವರ ಬ್ಯಾನರ್ ಹಾನಿ ಮಾಡುವ ಆವಶ್ಯಕತೆಯಿಲ್ಲ. ಪುತ್ತಿಲ ಆರೋಪವನ್ನು ನೇರವಾಗಿ ಮಾಡಲಿ. ಅದು ಬಿಟ್ಟು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಬಾಯಿಗೆ ಬಂದಂತೆ ಬಯ್ಯುತ್ತಿದ್ದ ಪ್ರಭಾಕರ ಭಟ್ ಆಸ್ಪತ್ರೆಗೆ ಭೇಟಿ ನೀಡಿ ಪುತ್ತಿಲರವರ ಮೇಲೆ ಆರೋಪ ಮಾಡದೆ ಕಾಂಗ್ರೆಸ್ ಮೇಲೆ ಮಾಡಿದ್ದಾರೆ. ಇಬ್ಬರಿಗೂ ಭಯವಿದೆ. ಪ್ರಭಾಕರ ಭಟ್‌ರವರ ಹೇಳಿಕೆ, ಡಿ.ವಿ ಸದಾನಂದ ಗೌಡರ ಶನಿ ಬಿಡಿಸಿರುವ ಹೇಳಿಕೆಯಿಂದಾಗಿ ಬಿಜೆಪಿ ಇಂದು ಮೂರನೇ ಸ್ಥಾನಕ್ಕೆ ಬಂದಿದೆ. ಇನ್ನೂ ಕೆಳ ಹಂತಕ್ಕೆ ಹೋಗಬಾರದು ಎಂಬ ಭಯದಿಂದ ಪುತ್ತಿಲರ ಮೇಲೆ ಆರೋಪ ಮಾಡಲು ಪ್ರಭಾಕರ ಭಟ್ ಹೆದರಿದ್ದಾರೆ. ನೇರವಾಗಿ ಆರೋಪ ಮಾಡದ ಪುತ್ತಿಲರವರಿಗೆ ಕಾರ್ಯಕರ್ತರಿಗೆ ಬಾಸುಂಡೆ ನೀಡಿರುವ ಬಗ್ಗೆ ಅವರಿಗೂ ಒಂದು ಕಡೆ ಭಯವಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಹುಮತ ಬರುತ್ತಿದ್ದರೆ ಕಾರ್ಯಕರ್ತರನಲ್ಲ ಪುತ್ತಿಲರನ್ನು ಚಪಾತಿ ಮಾಡುತ್ತಿದ್ದರು. ಕಾಂಗ್ರೆಸ್‌ಗೆ ಅಧಿಕಾರ ಬಂದಿರುವುದರಿಂದ ಪುತ್ತಿಲ ಬದುಕಿದ್ದಾರೆ. ಶನಿಪೂಜೆಯ ಸಂದರ್ಭದಲ್ಲಿ ಎನ್‌ಕೌಂಟರ್ ಮಾಡಲು ಮುಂದಾದಾಗ ಅವರಿಗೆ ರಕ್ಷಣೆ ಕೊಟ್ಟವರು ಯಾರೆಂಬುದನ್ನು ಹೇಳಲಿ. ಅವರ ಪರಸ್ಪರ ಡೊಂಬರಾಟದಲ್ಲಿ ಅಮಾಯಕ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಕೇಶ್ ಕೆಮ್ಮಿಂಜೆ, ಮಂಜುನಾಥ ಹಾಗೂ ಕಾರ್ಯದರ್ಶಿ ವಿಕ್ಟರ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು