ಪುತ್ತೂರು: ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ 16 ಕಡೆ ಎನ್ ಐಎ ದಾಳಿ ನಡೆಸಿದ್ದು, ಜಿಲ್ಲೆಯಾದ್ಯಂತ ನಾಲ್ವರನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ.
ಪುತ್ತೂರಿನ ಕೂರ್ನಡ್ಕ, ತಾರಿಪಡ್ಪು, ಕುಂಬ್ರ ಭಾಗದ ನಾಲ್ವರನ್ನು ಎನ್ ಐಎ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.