News Karnataka Kannada
Friday, April 19 2024
Cricket
ಮಂಗಳೂರು

ಕೆಎಂಸಿ ಹಾಸ್ಪಿಟಲ್ ನಲ್ಲಿ ಮಕ್ಕಳ ಸಮಗ್ರ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ಪ್ರಗತಿ ರಿಷಬ್ ಶೆಟ್ಟಿ

Pragati Rishab Shetty inaugurates Integrated Child Care Centre at KMC Hospital
Photo Credit : News Kannada

ಮಂಗಳೂರು: ಮಂಗಳೂರಿನ ಅಂಬೇಡ್ಕರ್‌ ವೃತ್ತದಲ್ಲಿರುವ ಕೆಎಂಸಿ ಹಾಸ್ಪಿಟಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್   ಪ್ರಗತಿ ರಿಷಬ್‌ ಶೆಟ್ಟಿ ಅವರು  ಅತ್ಯಾಧುನಿಕ ಮಕ್ಕಳ ಸಮಗ್ರ ಆರೈಕೆ ಕೇಂದ್ರ(ಕಾಂಪ್ರೆಹೆನ್ಸಿವ್ ಸೆಂಟರ್ ಫಾರ್ ಪೀಡಿಯಾಟ್ರಿಕ್ ಕೇರ್)ವನ್ನು ಉದ್ಘಾಟಿಸಿದರು.

ನವಜಾತ ಶಿಶು ಆರೈಕೆ, ಲಸಿಕೆಗಳು ಮತ್ತು ಉನ್ನತ ಬಹುವಿಭಾಗೀಯ ಚಿಕಿತ್ಸೆಗಳು ಹಾಗೂ ಮಕ್ಕಳ ತುರ್ತು ಸ್ಥಿತಿಗಳು ಸೇರಿದಂತೆ ವಿಸ್ತಾರವಾದ ಶ್ರೇಣಿಯ ಸೇವೆಗಳನ್ನು ಪೂರೈಸುವದರೊಂದಿಗೆ ಈ ಆಅಧುನಿಕ ಸೌಲಭ್ಯ ಮಂಗಳೂರಿನಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಕ್ರಾಂತಿ ಉಂಟು ಮಾಡುವ ಗುರಿ ಹೊಂದಿದೆ.

ಕೆಎಂಸಿ ಹಾಸ್ಪಿಟಲ್‌ನ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಬಿ ಅವರು ಮಾತನಾಡಿ, ”ಕೆಎಂಸಿ ಹಾಸ್ಪಿಟಲ್‌ನಲ್ಲಿನ ಮಕ್ಕಳ ಸಮಗ್ರ ಅದ್ಯ ಕೇಂದ್ರವನ್ನು ಮಗುವಿನ ಎಲ್ಲಾ ಆರೋಗ್ಯ ಸೇವಾ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಉನ್ನತ ಕೌಶಲ್ಯದ ಮತ್ತು ಸಹಾನುಭೂತಿಯುಳ್ಳ ಆರೋಗ್ಯ ಸೇವಾ ವೃತ್ತಿಪರರ ತಂಡದೊಂದಿಗೆ ಮಕ್ಕಳ ಪ್ರತಿ ಹಂತದ ಬೆಳವಣಿಗೆಯಲ್ಲಿ ಅಸಾಧಾರಣ ಆರೈಕೆಯನ್ನು ಪೂರೈಸುವಲ್ಲಿ ನಾವು ಬದ್ಧರಾಗಿರುತ್ತೇವೆ. ನಿಖರ ರೋಗನಿರ್ಣಯ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ತಜ್ಞರ ತಂಡವು ಇತ್ತೀಚಿನ ರೋಗನಿದಾನ ತಂತ್ರಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಬಳಸುತ್ತದೆ” ಎಂದರು.

ಪ್ರಸ್ತುತ ಪೀಳಿಗೆಯ ಮಕ್ಕಳ ವೈವಿಧ್ಯಪೂರ್ಣ ಆರೋಗ್ಯ ಸೇವಾ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕೆಎಂಸಿ ಹಾಸ್ಪಿಟಲ್‌ ನ ಮಕ್ಕಳ ಸಮಗ್ರ ಅರೈಕೆ ಕೇಂದ್ರವು ಪ್ರತ್ಯೇಕವಾದ ಉಪವಿಭಾಗೀಯ ಸೇವೆಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಅಲರ್ಜಿ ಮತ್ತು ಅಸ್ತಮಾ ಕ್ಲಿನಿಕ್, ಮಕ್ಕಳ ಮತ್ತು ಹದಿಹರೆಯದವರಿಗೆ ಸಮಾಲೋಚನೆ, ಮಕ್ಕಳ ಮೂತ್ರಪಿಂಡ ರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ಮಕ್ಕಳ ನಿರ್ನಾಳ ಗ್ರಂಥಿ ಶಾಸ್ತ್ರ, ಮಕ್ಕಳ ನೇತ್ರ ಸನ ಶಾಸ್ತ್ರ, ಮಕ್ಕಳ ಕ್ಯಾನ್ಸರ್ ಅರೈಕೆ ಮಕ್ಕಳ ತುರ್ತು ಚಿಕಿತ್ಸೆ ಮತ್ತು ಮಕ್ಕಳ ತೀವ್ರ ನಿಗಾ ಘಟಕ ಮುಂತಾದ ಸೇವೆಗಳು ಸೇರಿವೆ. ವಿಶೇಷ ತಜ್ಞರ ತಂಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಕ್ಕಳ ಆರೋಗ್ಯ ಸೇವೆಯಲ್ಲಿ ನೂತನ ಹೆಗ್ಗುರುತುಗಳನ್ನು ನಾವು ಸಾಧಿಸುವ ವಿಶ್ವಾಸ ಹೊಂದಿದ್ದೇವೆ.

ಮಾಹ, ಮಂಗಳೂರು ಕ್ಯಾಂಪಸ್‌ ಪ್ರೊವೈಸ್ ಚಾನ್ಸಲರ್ ಡಾ. ದಿಲೀಪ್ ನಾಯಕ್‌ ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಬೆಳವಣಿಗೆಯ ಯೋಗಕ್ಷೇಮ ಸೇರಿದಂತೆ ಸಂಪೂರ್ಣ ಮತ್ತು ಬಹು ಆಯಾಮದ ಆರೈಕೆಯನ್ನು ಮಕ್ಕಳಿಗೆ ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ ಇಲ್ಲಿ ಮಕ್ಕಳು ತಮ್ಮ ಆರೋಗ್ಯದ ಎಲ್ಲಾ ವಿಷಯಗಳಲ್ಲಿ ಅತ್ಯುನ್ನತ ಗುಣಮಟ್ಟದ ಆರೈಕೆ ಪಡೆಯುವರು ಎಂದರು.

ಸ್ಯಾಂಡಲ್‌ವುಡ್‌ನ ಖ್ಯಾತ ಸೆಲೆಬ್ರಿಟಿ ಸ್ಟೈಲಿಸ್ಟ್ ಆದ  ಪ್ರಗತಿ ರಿಷಬ್‌ ಶೆಟ್ಟಿ ಅವರು ಮಾತನಾಡಿ, “ಮಂಗಳೂರಿನಲ್ಲಿ ಈ ರೀತಿಯ ಮೊದಲ ಸಮಗ್ರ ಮಕ್ಕಳ ಆರೈಕೆ ಕೇಂದ್ರವನ್ನು ಉದ್ಘಾಟಿಸುವುದು ಒಂದು ಅದ್ಭುತವಾದ ಅನುಭವವಾಗಿದೆ. ತಾಯಿಯರ ದಿನದ ಅಂಗವಾಗಿ ಮತ್ತು ಸ್ವತಃ ಒಬ್ಬ ತಾಯಿಯಾಗಿ ಮಕ್ಕಳಿಗೆ ಸಂಪೂರ್ಣ ಆರೋಗ್ಯ ಸೇವಾ ಸೌಲಭ್ಯಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ ಹಾಸ್ಪಿಟಲ್‌ನಲ್ಲಿ ಒಂದೇ ಸೂರಿನಡಿ ಲಭ್ಯವಿರುವುದು ನನಗೆ ಹರ್ಷದ ವಿಷಯವಾಗಿದೆ. ಚಿಕಿತ್ಸೆಯ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಉಲ್ಲಾಸದಿಂದ ಇಡುವುದಕ್ಕಾಗಿ ಮತ್ತು ಸಂಪೂರ್ಣ ವೈದ್ಯಕೀಯ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರ ಮತ್ತು ಸುಲಭವಾಗಿಸುವುದಕ್ಕಾಗಿ ನವೀನ ಕ್ರಮದ ರೂಪದಲ್ಲಿ ಸಂವಾದಯುತ ಆಟದ ಪ್ರದೇಶವನ್ನು ಇಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಬಹಳಷ್ಟು ಪ್ರಶಂಸೆ ಲಭಿಸಿದೆ” ಎಂದರು.

ಮಣಿಪಾಲ್ ಹಾಸ್ಪಿಟಲ್ಸ್ ಕುರಿತು:

ಆರೋಗ್ಯ ಕಾಳಜಿ ಕ್ಷೇತ್ರದಲ್ಲಿ ಮುಂಚುಣಿಯಲ್ಲಿರುವ ಮಣಿಪಾಲ್ ಹಾಸ್ಪಿಟಲ್ಸ್, ವಾರ್ಷಿಕ ಸುಮಾರು 4.5 ಮಿಲಿಯನ್ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮುಲಕ ಭಾರತದ ಅಗ್ರ ಕ್ರಮಾಂಕದ ಆರೋಗ್ಯ ಕಾಳಜಿ ಪ್ರದಾಯಕ ಎಂದೆನಿಸಿದೆ. ತನ್ನ ಮಲ್ಟಿಸ್ಪೆಷಾಲಿಟಿ ಹಾಗೂ ತೃತೀಯ ಆರೈಕೆ ವಿತರಣಾ ಜಾಲದ ಮೂಲಕ ಅತ್ಯುನ್ನತ ಗುಣಮಟ್ಟದ ಆರೋಗ್ಯ ಕಾಳಜಿ ಒದಗಿಸುವುದು ಹಾಗೂ ಆಸ್ಪತ್ರೆ ಕಾಳಜಿಯಿಂದ ಆಚೆಗೆ ತನ್ನ ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೊಂದಿದೆ. ವಿಕ್ರಮ್ ಹಾಪಿಟಲ್‌ನೊಂದಿಗೆ ಭಾರತದಲ್ಲಿನ ಕೊಲಿಂಬಿಯಯಾ ಏಷ್ಯಾ ಹಾಸ್ಪಿಟಲ್ಸ್‌ನ ಶೇ.100ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಭಾರತದ 16 ನಗರಗಳಲ್ಲಿ ಒಟ್ಟು 29 ಆಸ್ಪತ್ರೆಗಳಾದ್ಯಂತ 7,800 ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಈ ಆಸ್ಪತ್ರೆಗಳಲ್ಲಿ 4,000 ಪ್ರತಿಭಾನ್ವಿತ ವೈದ್ಯರುಗಳ ತಂಡ ಹಾಗೂ 11,000ಕ್ಕೂ ಅಧಿಕ ನೌಕರರನ್ನು ಮಣಿಪಾಲ್ ಹಾಸ್ಪಿಟಲ್ಸ್ ಒಳಗೊಂಡಿದೆ.

ಜಗತ್ತಿನಾದ್ಯಂತ ಇರುವ ವಿವಿಧ ರೀತಿಯ ರೋಗಿಗಳಿಗೆ ಸಮಗ್ರ ರೋಗ ನಿವಾರಕ ಮತ್ತು ರೋಗ ತಡೆಗಟ್ಟುವ ಸೇವೆಗಳನ್ನು ಮಣಿಪಾಲ್ ಹಾಸ್ಪಿಟಲ್ಸ್ ಒದಗಿಸುತ್ತಿದೆ. ಮಣಿಪಾಲ್ ಹಾಸ್ಪಿಟಲ್ಸ್ ಎನ್‌ಎಬಿಹೆಚ್, ಎಎಹೆಚ್‌ ಪಿಪಿ ಮಾನ್ಯತೆ ಪಡೆದಿದೆ ಮತ್ತು ಮಣಿಪಾಲ್ ಹಾಸ್ಪಿಟಲ್ಸ್ ವ್ಯಾಪ್ತಿಯಲ್ಲಿರುವ ಬಹುತೇಕ ಆಸ್ಪತ್ರೆಗಳು ಎನ್‌ಪಿಎಲ್, ಇಆರ್, ರಕ್ತ ನಿಧಿ ಮಾನ್ಯತೆ ಪಡೆದಿವೆಯಲ್ಲದೆ, ಶ್ರೇಷ್ಠ ಮಟ್ಟದ ಶುಶೂಷಣೆಯಿಂದಾಗಿ ಜಗತ್ತಿನಾದ್ಯಂತ ಗುರುತಿಸಲ್ಪಡುತ್ತವೆ. ಇದರೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಎಂದೆನಿಸಿರುವ ಮಣಿಪಾಲ್ ಹಾಸ್ಪಿಟಲ್ಸ್, ರೋಗಿಗಳು ಇತರರಿಗೆ ಹೆಚ್ಚಾಗಿ ಶಿಫಾರಸು ಮಾಡುವ ಆಸ್ಪತ್ರೆಯಾಗಿದೆ ಎಂಬುದನ್ನು ವಿವಿಧ ಸಮೀಕ್ಷೆಗಳು ದೃಢಪಡಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು