News Kannada
Friday, March 01 2024
ಮಂಗಳೂರು

ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ದಸರಾ ಪ್ರಯುಕ್ತ ವಿಶೇಷ ಪ್ಯಾಕೇಜ್ ಪ್ರವಾಸ

Photo Credit : News Kannada

ಮಂಗಳೂರು: ಕರಾರಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಅಕ್ಟೋಬರ್‌ 15 ರಿಂದ ಅ.24ರವರೆಗೆ ಕಾರ್ಯಾಚರಿಸಲು ಯೋಜಿಸಲಾಗಿದೆ. ಮಾರ್ಗ, ಸಮಯ ಮತ್ತು ಪ್ರಯಾಣ ದರದ ವಿವರ ಈ ಕೆಳಗಿನಂತಿದೆ.

ಪ್ಯಾಕೇಜ್ -1 ಮಂಗಳೂರು ದಸರಾ ದರ್ಶನ:
ಮಂಗಳೂರು ಬಸ್ಸು ನಿಲ್ದಾಣದಿಂದ ಶ್ರೀ ಮಂಗಳಾದೇವಿ ದೇವಸ್ಥಾನ – ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಬೋಳಾರ ಮಾರ್ಗವಾಗಿ ಸಮಯ 08.00 ರಿಂದ 09.00, ಮೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ನಂತೂರು ಗುರುಪುರ ಮಾರ್ಗವಾಗಿ ಸಮಯ 09.45 -10.15, ಸುಂಕದಕಟ್ಟೆ ಶ್ರೀ ಅಂಬಿಕ ಅನ್ನಪೂರ್ಣೇಶ್ವರಿ ದೇವಸ್ಥಾನ ಗುರುಪುರ -ಕೈಕಂಬ ಮಾರ್ಗವಾಗಿ ಸಮಯ 10.45- 11.15, ಶ್ರೀ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನ ಎಕ್ಕಾರು ಮಾರ್ಗವಾಗಿ 11.35-12.15, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) ಕಿನ್ನಿಗೋಲಿ, ಮುಲ್ಕಿ ಮಾರ್ಗವಾಗಿ ಸಮಯ 12.45-14.00, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್ ಹೆಜಮಾಡಿ ಮಾರ್ಗವಾಗಿ ಸಮಯ 14.30-16.00, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸುರಸ್ತಲ್‌ ಮಾರ್ಗವಾಗಿ ಸಮಯ 16.15-16-45, ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ) ಲೇಡಿಹಿಲ್‌ ಮಾರ್ಗವಾಗಿ ಸಮಯ 17.15-18.15, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ನವದುರ್ಗಾ ದರ್ಶನ ಲೇಡಿಹಿಲ್‌ ಮಾರ್ಗವಾಗಿ ಸಮಯ 18.30-19.30, ಇನ್ನು ಪ್ಯಾಕೇಜ್‌ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ (ಊಟ, ಉಪಹಾರ ಹೊತುಪಡಿಸಿ) ನರ್ಮ್‌ ನಗರ ಸಾರಿಗೆಯಲ್ಲಿ ವಯಸ್ಕರಿಗೆ 400ರೂಪಾಯಿ, ಇನ್ನು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 300ರೂಪಾಯಿ, ನಗರ ವೋಲ್ವೋ ಸಾರಿಗೆಯಲ್ಲಿ ವಯಸ್ಕರಿಗೆ 500 ರೂಪಾಯಿ, ಹಾಗು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಇದರಲ್ಲಿ 400ರೂಪಾಯಿ ಪ್ರಯಾಣದರ ಇರಲಿದೆ.

ಪ್ಯಾಕೇಜ್‌ -2: ಮಂಗಳೂರು ಕೊಲ್ಲೂರು ಟೂರ್‌ ಪ್ಯಾಕೇಜ್‌ ಹೀಗಿದೆ.
ಮಂಗಳೂರು ಬಸ್ಸು ನಿಲ್ದಾಣ-ಮಾರಣಕಟ್ಟಿ ಮಹಾಲಿಂಗೇಶ್ವರ ದೇವಸ್ಥಾನ ಕುಂದಾಪುರ ಮಾರ್ಗವಾಗಿ ಸಮಯ 08.00-11.00, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾರ್ಗವಾಗಿ ಜಡ್ಕಲ್‌ ಮಾರ್ಗವಾಗಿ ಸಮಯ 13.15-1500, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನ ಊಟ) ಜಡ್ಕಲ್‌ ಹಳ್ಳಿಹೊಳೆ 13.15-15.00, ಹಾಗೂ ಉಡುಪಿ-ಉಚ್ಚಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶಂಕರನಾರಾಯಣ ಮಾರ್ಗವಾಗಿ ಸಮಯ 16.30-17.30, ಇನ್ನು ಮಂಗಳೂರು ಬಸ್‌ ನಿಲ್ದಾಣ ಸಮಯ 18.30ಕ್ಕೆ ಇರಲಿದೆ.

ಇಲ್ಲಿ ಕರ್ನಾಟಕ ಸಾರಿಗೆಯಲ್ಲಿ ವಯಸ್ಕ ಪ್ರಯಾಣಿಕರಿಗೆ 500 ರೂಪಾಯಿ ಹಾಗು 6ರಿಂದ 12 ವರ್ಷದೊಳಗಿನರಿಗೆ 450 ರೂಪಾಯಿ ಇರಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು