News Kannada
Monday, March 04 2024
ಮಂಗಳೂರು

ಬಂಟ್ವಾಳ: ಪೆರುವಾಯಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಹೊರಟ ಪಂಚಾಯಿತಿ ಉಪಾಧ್ಯಕ್ಷೆ

Swachhta Vahini's charioteer sets out to make Peruvai village a model village
Photo Credit : By Author

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮ ಪಂಚಾಯತ್ ಒಂದು ಸಣ್ಣ ಪಂಚಾಯಿತಿ ಆಗಿದ್ದು ಕೇವಲ 8 ಜನ ಸದಸ್ಯರನ್ನು ಮಾತ್ರ ಹೊಂದಿದೆ. ಈ ಪಂಚಾಯಿತಿಯ ಉಪಾಧ್ಯಕ್ಷೆ ನೆಫೀಸಾ ತಸ್ಲಿ(29) ತಮ್ಮ ವಿಶಿಷ್ಟ ಕಾಯಕದ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ.

ನೆಫೀಸಾ ತಸ್ಲಿ ಅವರು ಸ್ವಚ್ಛತೆಗಾಗಿ ಕಸ ಕೊಂಡೊಯ್ಯುವ ವಾಹನವನ್ನು ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮನೆ, ಅಂಗಡಿಗಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಪ್ರೇರಣೆ ನೀಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ ಜೊತೆಗೆ ಉತ್ತಮ ರೀತಿಯಲ್ಲಿ ಜನರ ಮನ್ನಣೆ ಪಡೆದಿದ್ದಾರೆ.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ನೆಫೀಸಾ ತಸ್ಲಿ, ನಾಲ್ಕು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ವಾಹನ ಬಂದಿತ್ತು. ಗ್ರಾಮದ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಮಹಿಳಾ ಚಾಲಕರನ್ನು ನೇಮಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನಿಯೋಜಿತಳಾಗಿರುವ ಚಾಲಕಿ ಇನ್ನೂ ಸಮರ್ಪಕ ತರಬೇತಿ ಪಡೆದಿರಲಿಲ್ಲ. ಹಾಗಾಗಿ ನಾನು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಗೆ ಚಾಲನೆ ನೀಡಿದ್ದೇನೆ. ಸ್ವಚ್ಛವಾಹಿನಿಯ ಮೂಲಕ ಪೆರುವಾಯಿ ಗ್ರಾಪಂ ಅನ್ನು ಮಾದರಿ ಗ್ರಾಪಂ ಆಗಿಸುವ ಇಚ್ಛೆ ಇದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು