ಬಂಟ್ವಾಳ: ಟೆಂಪೋ ರಿಕ್ಷಾ ಚಾಲಕನೋರ್ವ ಆಕ್ಟಿವಾ ವನ್ನ ಓವರ್ ಟೇಕ್ ಮಾಡಲು ಹೋಗಿದ್ದು ಈ ಸಂದರ್ಭ ಮುಡಿಪು ಮಾರ್ಗಾವಾಗಿ ಬರುತ್ತಿದ್ದ ಕಾಸರಗೋಡು ಟು ಬಿಸಿ ರೋಡ್ ಬಸ್ ಸರಕಾರಿ ಚಾಲಕನ ಸಮಯ ಪ್ರಜ್ಞೆಯಿಂದ ರಸ್ತೆ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ನಡೆದಿದೆ.
ಟೆಂಪೋ ರಿಕ್ಷಾ ಚಾಲಕ ಇಲ್ಯಾಸ್ ಮೀನಿನ ವ್ಯಾಪಾರಿಯಾಗಿದ್ದು ಮೆಲ್ಕಾರಿನಿಂದ ಬರುತ್ತಿದ್ದು ಈ ವೇಳೆ ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಆಕ್ಟೀವಾ ಒಂದನ್ನು ಓವರ್ ಟೇಕ್ ಮಾಡಲು ಹೋಗಿದ್ದು ಈ ವೇಳೆ ಕಾಸರಗೋಡಿನಿಂದ ಬಿಸಿ ರೋಡಿಗೆ ಬರುತ್ತಿದ್ದ ಸರಕಾರಿ ಬಸ್ ಎದುರಾಗಿದ್ದು ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು ಟೆಂಪೋ ರಿಕ್ಷಾ ಚಾಲಕನನ್ನು ಬಚಾವ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕರೆಂಟ್ ಕಂಬಕ್ಕೆ ಗುದ್ದಿದ್ದಾರೆ.
ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ. ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಮೆಸ್ಕಾಮ್ ಸಿಬ್ಬಂದಿಗಳು ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಾರೆ.
ಇನ್ನು ಬಸ್ ಚಾಲಕ ಸಮಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮೆಸ್ಕಾಮ್ ಸಿಬ್ಬಂದಿಗಳು ಕರೆಂಟ್ ಕಂಬವನ್ನು ತೆರವು ಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಸ್ಥಳಕ್ಕೆ ನಂದ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.