News Karnataka Kannada
Sunday, April 28 2024
ಮಂಗಳೂರು

ಮಂಗಳೂರಿನಲ್ಲಿ ಕುಸಿಯುತ್ತಿದೆ ಮರಗಳ ಸಂಖ್ಯೆ

The number of trees in Mangaluru is declining
Photo Credit : News Kannada

ಮಂಗಳೂರು: ಹೆಚ್ಚುತ್ತಿರುವ ತಾಪಮಾನ. ಇದರಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಇದಕ್ಕೆ ಮೂಲ ಕಾರಣ ಅರಣ್ಯ ನಾಶ. ಮಂಗಳೂರಿನಲ್ಲೂ ಬಿಸಿಲ ಝಳ ಏರುತ್ತಿದೆ.  ಮರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಾದರೆ ಮಂಗಳೂರಿನಲ್ಲಿ ಎಷ್ಟು ಪ್ರಮಾಣದ ಅರಣ್ಯವಿದೆ ಗೊತ್ತಾ ? ಅದರ ಅಂಕಿಅಂಶ ಇಲ್ಲಿದೆ ನೋಡಿ.

ನಿಟ್ಟೆ ವಿವಿ ನುಕ್ಸರ್ ರಿಸರ್ಚ್ ಸೆಂಟರ್ ಡೆಪ್ಯುಟಿ ಡೈರೆಕ್ಟರ್ ಡಾ. ಸ್ಮಿತಾ ಹೆಗ್ಡೆಯವರ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ  ‘ಟ್ರೀ ಕೌಂಟ್ ಮಂಗಳೂರು’ ಎಂಬ ಅಧ್ಯಯನ ನಡೆಸಿ,ನಗರದಲ್ಲಿ ಮರಗಳೆಷ್ಟಿವೆ ಎಂಬ ಲೆಕ್ಕಚಾರ ಮಾಡಲಾಯಿತು.

ಮಂಗಳೂರು ಮನಪಾ ವ್ಯಾಪ್ತಿಯ ಒಟ್ಟು 60 ವಾರ್ಡ್ ಗಳ 50 ವಾರ್ಡ್ ಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 6.24% ಮರಗಳಿವೆ. ಖಾಸಗಿ ಪ್ರದೇಶಗಳಲ್ಲಿ ಒಟ್ಟು 41.09ಶೇ. ಮರಗಳಿವೆ. ನಗರದ ದೇರೆಬೈಲ್, ಡೊಂಗರಕೇರಿ, ಕದ್ರಿ ಕಂಬಳ ವಾರ್ಡ್ ನಲ್ಲಿ ಮರಗಳ ಸಂಖ್ಯೆ ತೀರಾ ಕಡಿಯಾಗಿದ್ದು, ಇಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ 3 ಶೇ. ತಾಪಮಾನ ಏರಿಕೆಯಾಗಿದೆ. ತಿರುವೈಲ್, ಬಜಾಲ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣದೆ ಸರ್ವೆ ಪ್ರಕಾರ ಇಲ್ಲಿ ತಾಪಮಾನ ಕಡಿಮೆಯಿದೆ.

ಮರಗಳಗಳ ರಕ್ಷಣೆಗೆ ಬಹಳಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶ ಮಾಡುವ ಕೆಲಸ ಕೂಡ ಭರದಿಂದ ಸಾಗುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಪ್ರೇಮಿಗಳು ಮರಗಳ ಉಳಿವಿಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದ್ಯಾವುದೂ ಲೆಕ್ಕಕ್ಕೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿ ಮಂಗಳೂರಿನ ಜನರು ಇಂದಿನಿಂದಲೇ ಎಚ್ಚೆತ್ತುಕೊಂಡು ಮರಗಳ ಸಂರಕ್ಷಣೆಗೆ ಮುಂದಾಗಬೇಕಿದೆ.

ಇದೆ ರೀತಿ ಮುಂದುವರಿದರೆ ಮುಂದೊಂದು ದಿನ ಭಯಂಕರವಾದ ಬಿಸಿಲು ಹಾಗು ನೀರಿನ ಅಭಾವದಿಂದಾಗಿ ಮನುಷ್ಯ ಜಾತಿ ಹಾಗೂ ಪ್ರಾಣಿ ಸಂಕುಲಗಳು ಬಳಲುವುದಂತೂ ಖಂಡಿತ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು