ಮಂಗಳೂರು: ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿ ವೈದ್ಯಕೀಯ ವಿದ್ಯಾರ್ಥಿನಿಗೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯೋರ್ವಳಿಗೆ ಜೂ.3ರಂದು 7794013522ನಿಂದ ಅಪರಿಚಿತನೋರ್ವ ಕರೆ ಮಾಡಿ “ನೀವು ಐ ಫೋನ್ ಪ್ರೊ-12 ಗೆದ್ದಿದ್ದೀರಿ. ಅದನ್ನು ಕಳುಹಿಸಿಕೊಡಲು ಜಿಎಸ್ಟಿ ಪಾವತಿಸಬೇಕು’ ಎಂದು ಹೇಳಿದರು.
ಇದನ್ನು ನಂಬಿದ ವಿದ್ಯಾರ್ಥಿನಿ ಗೂಗಲ್ಪೇ ಮೂಲಕ ಹಂತ ಹಂತವಾಗಿ ಒಟ್ಟು 98,972 ರೂ. ಕಳುಹಿಸಿದ್ದರು. ಅನಂತರ ಅಪರಿಚಿತ ಮತ್ತಷ್ಟು ಹಣವನ್ನು ಕಳುಹಿಸಿ ಸ್ಕ್ರೀನ್ ಶಾಟ್ ಕೂಡ ಕಳಿಸುವಂತೆ ಹೇಳಿದ. ಅನಂತರ ವಿದ್ಯಾರ್ಥಿನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.