ಮಂಗಳೂರು: ಮಂಗಳೂರಿನ ಕಾವೂರು ಬಿಜಿಎಸ್ ಹಾಸ್ಟೆಲ್ ಪಕ್ಕದಲ್ಲಿ ಮನೆಯೊಂದರ ಮೇಲೆ ಬೃಹತ್ ಮರ ಬಿದ್ದು ಮೂವರು ಗಾಯಗೊಂಡಿದ್ದಾರೆ.
ಮಂಗಳೂರಿನ ಕಾವೂರು ಬಿಜಿಎಸ್ ಹಾಸ್ಟೆಲ್ ಪಕ್ಕದ ಮನೆ ಮೇಲೆ ಮುಂಜಾನೆ ವೇಳೆ ಬೃಹತ್ ಮರ ಉರುಳಿಬಿದ್ದಿದ್ದು, ಮನೆಯಲ್ಲಿದ್ದ ಸದಾನಂದ ಹಾಗೂ ಅವರ ಪತ್ನಿ ರತ್ನಾ ಮತ್ತು ಪುತ್ರಿಗೆ ಗಾಯವಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.