News Karnataka Kannada
Thursday, March 28 2024
Cricket
ಮಂಗಳೂರು

ಉಜಿರೆ: ಎರಡನೇ ಬಾರಿಗೆ ಜಯಶಾಲಿಯಾದ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜ

Harish Poonja, the pioneer of development, emerged victorious for the second time
Photo Credit : News Kannada

ಉಜಿರೆ: ಜಿಲ್ಲೆಯ ಪ್ರತಿಷ್ಠಿತ ಹಾಗೂ ಎಲ್ಲರ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನಡೆದ ಜಿದ್ದಾ ಜಿದ್ದಿ ಪೈಪೋಟಿಯಲ್ಲಿ ಅಂತಿಮವಾಗಿ ಅಭಿವೃದ್ಧಿಯ ಹರಿಕಾರರೆಂದೇ ಜನಪ್ರಿಯರಾದ ಬಿಜೆಪಿ ಪಕ್ಷದ ಅಭ್ಯರ್ಥಿ ,ಶಾಸಕ ಹರೀಶ್ ಪೂಂಜ ಅವರು ಜಯಭೇರಿ ಬಾರಿಸಿ ಎರಡನೇ ಬಾರಿಗೆ ವಿಧಾನ ಸಭೆ ಪ್ರವೇಶಿಸಲು ಜನಾದೇಶ ಪಡೆದಿದ್ದಾರೆ.

ಅವರು ಅಂತಿಮ ಸುತ್ತಿನ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರನ್ನು 18,216 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಬಿಜೆಪಿಯ ಹರೀಶ್ ಪೂಂಜ ಅವರಿಗೆ 1,01,004 ಮತ ಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ತಿ ರಕ್ಷಿತ್ ಶಿವರಾಂ ಅವರಿಗೆ 82,788 ಮತ ಗಳು ಲಭಿಸಿವೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎರಡನೇ ಬಾರಿ ಕಮಲ ಅರಳಿ ಯುವ ನಾಯಕ ಹರೀಶ್ ಪೂಂಜ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ 8 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಭಾರಿ ಪೈಪೋಟಿ ನಡೆದಿತ್ತು.

ಜಾತ್ಯತೀತ ಜನತಾದಳದಿಂದ ಸ್ಪರ್ದಿಸಿದ್ದ ಅಶ್ರಫ್ ಅಲಿ ಕುಞ ಅವರು 556 ಮತಗಳನ್ನು ಪಡೆದಿದ್ದು,ಎಸ್ .ಡಿ.ಪಿ ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರು 2513 ಮತಗಳನ್ನು ಪಡೆದಿದ್ದಾರೆ. ತುಳುವೆರೆ ಪಕ್ಷದ ಶೈಲೇಶ್ ಆರ್ .ಜೆ ಅವ 308 ಮತ ,ಆಮ್ ಆದ್ಮಿ ಪಕ್ಷದಿಂದ ಸಾರ್ಡಿಸಿದ್ದ ಜನಾರ್ದನ ಬಂಗೇರ 278 ಮತ ,ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ದಿಸಿದ್ದ ಆದಿತ್ಯ ನಾರಾಯಣ ಕೊಲ್ಲಾಜೆ 454 ಮತ, ಪಕ್ಷೇತರರಾಗಿ ಸ್ಪರ್ದಿಸಿದ್ದ ಮಹೇಶ್ ಆಟೋ 214 ಮತಗಳನ್ನು ಪಡೆದು ಇಡುಗಂಟು ಕಳೆದುಕೊಂಡಿದ್ದಾರೆ.

ನೋಟಾ ಕ್ಕೆ 892 ಮತಗಳು ಬಿದ್ದಿವೆ. ಬಿಜೆಪಿ ಪಕ್ಷದ ಚುನಾಯಿತ ಅಭ್ಯರ್ಥಿ ಹರೀಶ್ ಪೂಂಜ ಅವರಿಗೆ ಚುನಾವಣಾಧಿಕಾರಿ ಯೋಗೀಶ್ ಎಚ್. ಆರ್. ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಜಯಂತ ಕೋಟಿಯಾನ್ ,ಪ್ರಮುಖರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶಶಿಧರ ಕಳ್ಮಂಜ ,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು