News Kannada
Sunday, March 03 2024
ಕ್ಯಾಂಪಸ್

ಉಜಿರೆ: ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್ ಡಿ ಎಂ ಕಾಲೇಜಿಗೆ ದ್ವಿತೀಯ ಪ್ರಶಸ್ತಿ

Ujire: SDM College bags second prize in short film competition
Photo Credit : News Kannada

ಉಜಿರೆ: ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ ‘ಇಂಪ್ರೆಶನ್ – 2023’ ರಾಜ್ಯ ಮಟ್ಟದ ಮಾಧ್ಯಮ ಸ್ಪರ್ಧೆಯಕಿರುಚಿತ್ರ ವಿಭಾಗದಲ್ಲಿಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ‘ನಾದ’ ಎಂಬ ಶೀರ್ಷಿಕೆಯಡಿ ಈ ಕಿರುಚಿತ್ರವು ಮೂಡಿಬಂದಿದೆ. ಈ ಕಿರುಚಿತ್ರವು ಕಿರಣ್‌ಕುಲಕರ್ಣಿ ಕಥೆ ಮತ್ತು ನಿರ್ದೇಶನ, ಶ್ಯಾಮ್ ಪ್ರಸಾದ ಛಾಯಗ್ರಹಣ, ಜೆಸ್ವಿನ್, ಶಶಿಧರ್ ಹಾಗು ಅರ್ಪಿತ್ ಇಚ್ಚೆ ಸೃಜನಶೀಲ ತಂಡದ ಮೂಲಕ ಮೂಡಿ ಬಂದಿದೆ.

ಈ ಕಿರುಚಿತ್ರದಲ್ಲಿಅರವಿಂದ, ಪೂರ್ಣಶ್ರೀ, ದಿವ್ಯ ಲಕ್ಷ್ಮೀ ಮತ್ತು ಮದನ್ ನಟಿಸಿದ್ದು, ಅಮಿತ ಮತ್ತು ಸಂಪತ್‌ಕುಮರ್‌ರೈ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ. ಈ ಚಿತ್ರಕ್ಕೆ ಸಹಾಯಕ ಪ್ರಾಧ್ಯಪಕ ಸುನಿಲ್ ಹೆಗ್ಡೆ ಮತ್ತುಎಸ್ ಡಿ ಎಂ ಮಲ್ಟಿ ಮೀಡಿಯಾ ಸ್ಟುಡಿಯೋದ ತಂತ್ರಜ್ಞ ರಕ್ಷಿತ್‌ರೈಯವರ ಮಾರ್ಗದರ್ಶನದಲ್ಲಿ ಮೂಡಿಬಂದಿದೆ.

ಆಧುನಿಕ ಸಮಾಜದಲ್ಲಿ ಪೂರ್ವ ಗ್ರಹ ಪೀಡಿತ ದೃಷ್ಟಿಕೋನವನ್ನು ಬಿಟ್ಟು ವಾಸ್ತವವಾದಿ ಉದಾರತೆ ತೋರಬೇಕು ಎಂಬ ಸಂದೇಶ ಈ ಚಿತ್ರ ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು