News Kannada
Monday, March 04 2024
ಮಂಗಳೂರು

ಉಳ್ಳಾಲ: ಆಧಾರ್ ಇಲ್ಲದ್ದಕ್ಕೆ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದ ಬಸ್‌ ನಿರ್ವಾಹಕ

Ullal: Bus conductor pulls down girl students for not having Aadhaar
Photo Credit : News Kannada

ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ಸನ್ನ ತಡೆದ ಸ್ಥಳೀಯರು ನಿರ್ವಾಹಕನನ್ನ ತರಾಟೆಗೆತ್ತಿಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.

ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಎಂಬಾತ ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದು ಹಣ ನೀಡದಕ್ಕೆ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮೆರೆದಿದ್ದಾನೆ.

ಕುಂಪಲ ಸರಕಾರಿ ಶಾಲೆಯ ಐವರು ವಿದ್ಯಾರ್ಥಿನಿಯರು ಇಂದು ಶಾಲೆ ಮುಗಿಸಿ ಸರಕಾರಿ ಬಸ್ಸು ಹತ್ತಿದ್ದಾರೆ. ಬಸ್ಸಿನ ಖಾಯಂ ನಿರ್ವಾಹಕ, ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲವಂತೆ. ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ.

ಇಂದು‌ ಆ ಖಾಯಂ ನಿರ್ವಾಹಕ ರಜೆ ಮಾಡಿದ್ದು, ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದ. ಹುಸೇನ್ ಎಳೆಯ ವಿದ್ಯಾರ್ಥಿನಿಯರೆಂದು ಕರುಣೆ ತೋರದೆ ಜೇಬಲ್ಲಿ ಹಣ ಇಲ್ಲದೆ ಕುಂಪಲದ ಬಗಂಬಿಲಕ್ಕೆ ತೆರಳಲಿದ್ದ ಐವರು ಮಕ್ಕಳನ್ನ ಮೂರು ಕಟ್ಟೆ ಎಂಬಲ್ಲೇ ಕೆಳಗಿಳಿಸಿ ತೆರಳಿದ್ದಾನೆ. ಈ ವಿದ್ಯಮಾನವನ್ನ ಬಸ್ಸಲ್ಲೇ ಇದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ‌ ಗುಲಾಬಿ ಗಮನಿಸಿದ್ದಾರೆ.

ಸಂಜೆ ಸ್ಥಳೀಯರು ಕುಂಪಲ ಶಾಲೆಯ ಎದುರೇ ಬಸ್ಸನ್ನ ತಡೆದು ನಿಲ್ಲಿಸಿದ್ದು ನಿರ್ವಾಹಕನನ್ನ ತರಾಟೆಗೆತ್ತಿದ್ದಾರೆ. ಸ್ಥಳೀಯರಾದ ಯಶವಂತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿ ರಮ್ಯಾ ಅವರನ್ನ ಸಂಪರ್ಕಿಸಿ ಎಳೆಯ ಮಕ್ಕಳನ್ನ ಮಾನವೀಯತೆ ತೋರಿಸದೆ ಬಸ್ಸಿನಿಂದ ಕೆಳಗಿಳಿಸಿದ ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು