News Kannada
Monday, March 04 2024
ಮಂಗಳೂರು

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿ

Ullal: Fish-carrying pick-up vehicle overturns on Netravati bridge
Photo Credit : News Kannada

ಉಳ್ಳಾಲ: ಟಯರ್ ಸಿಡಿದು ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಗಾಯವಾಗದೇ ರಸ್ತೆ ಸಂಚಾರದಲ್ಲಿ ಮಾತ್ರಾ ವ್ಯತ್ಯಾಸ ಉಂಟಾಯಿತು.

ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್ ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿದೆ. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸಂಚಾರದಲ್ಲಿ ವ್ಯತ್ಯಾಸ ಉಂಟಾದ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವಾಹನದಲ್ಲಿದ್ದ ಮೀನು ರಸ್ತೆ ಪೂರ್ತಿ ಚೆಲ್ಲಿಹೋಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು