News Karnataka Kannada
Saturday, April 20 2024
Cricket
ಮಂಗಳೂರು

ಉಳ್ಳಾಲ: ಹಿಂದೂ ಸಮಾಜ ಕೈಗೆ ಬಳೆ ತೊಟ್ಟಿಲ್ಲ, ಲವ್‌ ಜಿಹಾದ್‌ ವಿರುದ್ಧ ಪುತ್ತಿಲ ಗುಡುಗು

Hindu society doesn't wear bangles on its hands: Puttila against 'love jihad'
Photo Credit : Facebook

ಉಳ್ಳಾಲ: ಲವ್ ಜಿಹಾದ್‌ ಭಾಗವಾಗಿ ಹಿಂದೂ ಯುವತಿಯರೊಂದಿಗೆ ಸೋಮೇಶ್ವರ ಬೀಚ್‌ನಲ್ಲಿ ಮಜಾ ಉಡಾಯಿಸುತ್ತಿದ್ದ ಅನ್ಯ ಕೋಮಿನ ಯುವಕರಿಗೆ ನೋವಿನಿಂದಲೇ ಹಿಂದೂ ಯುವಕರು ಉತ್ತರ ನೀಡಿದ್ದಾರೆ.

ಹಿಂದೂಗಳು ಪಲಾಯನವಾದಿಗಳಲ್ಲ ,ಹಿಂದೂ ಸಮಾಜ ಕೈಗೆ ಬಳೆ ತೊಟ್ಟಿಲ್ಲ, ಹಿಂದೂ ಸಮಾಜಕ್ಕೆ ಅನ್ಯಾಯವಾದರೆ ಹೋರಾಟಕ್ಕೆ ನಾನು ಸಿದ್ಧ ಎಂದು ಹಿಂದೂ ಫೈರ್ ಬ್ರಾಂಡ್ ಅರುಣ್ ಪುತ್ತಿಲ ಘರ್ಜಿಸಿದ್ದಾರೆ.

ಅಂಬಿಕಾ ರೋಡ್ ಗಟ್ಟಿ ಸಮಾಜ ಭವನದಲ್ಲಿ ಹಿಂದೂ ಬಾಂಧವರು ಉಳ್ಳಾಲ ಇವರ ನೇತೃತ್ವದಲ್ಲಿ ಜರುಗಿದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯು ಜನಪ್ರತಿನಿಧಿಯ ಕೈಗೊಂಬೆಯಂತೆ ವರ್ತಿಸಿದರೆ ಹಿಂದೂ ಸಮಾಜ ಉತ್ತರವನ್ನು ನೀಡಲು ಸಿದ್ಧವಿದೆ.

ಸೋಮೇಶ್ವರದ ಘಟನೆಯಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ. ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ರಕ್ಷಣೆ ನೀಡಲಾಗಿದೆ. ಕ್ಷೇತ್ರದಲ್ಲಿ ದ್ವೇಷದ ರಾಜಕಾರಣವನ್ನು ಮಾಡದೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸುವುದು ಇಲ್ಲಿನ ಜನಪ್ರತಿನಿಧಿಯ ಕರ್ತವ್ಯ. ಪೊಲೀಸ್ ಇಲಾಖೆಯೊಳಗೂ ಹಿಂದೂಗಳಿದ್ದಾರೆ.

ಜನಸ್ನೇಹಿ ಇಲಾಖೆಯ ಪೊಲೀಸರಿಗೆ ಗೌರವ ಕೊಡುವ ಹೃದಯ ಶ್ರೀಮಂತಿಕೆ ಇರುವ ಸಮಾಜವೆಂದರೆ ಅದು ಹಿಂದೂ ಸಮಾಜವಾಗಿದೆ. ಸೋಮೇಶ್ವರದಲ್ಲಿ ಮೋಜು,ಮಸ್ತಿಗೆ ಹಿಂದೂ ಸಹೋದರಿಯರನ್ನು ಉಪಯೋಗಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ವಿರೋಧಿಸುವುದು ನಮ್ಮ ಧರ್ಮ,ಸಹೋದರಿಯರ ಅತ್ಯಾಚಾರವನ್ನು ಸಹಿಸಲು ಸಾಧ್ಯವೇ ಇಲ್ಲ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು