News Karnataka Kannada
Friday, March 29 2024
Cricket
ಮಂಗಳೂರು

ಚಿಕ್ಕಮಗಳೂರಿನಲ್ಲಿ ಬಿಜೆಪಿ ಮಣಿಸಿದ ಕಾಂಗ್ರೆಸ್‌, ವಿವೇಕ್‌ ಪೂಜಾರಿ ಅವಿರತ ಶ್ರಮಕ್ಕೆ ಪ್ರಶಂಸೆ

Vivek Poojary lauds Congress for its relentless efforts in defeating BJP in Chikmagalur
Photo Credit : News Kannada

ಮಂಗಳೂರು: ಇಂದಿರಾ ಗಾಂಧಿ ಸ್ಪರ್ಧೆ ಮಾಡಿದ್ದ ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಬಿಜೆಪಿಯ ಭದ್ರಕೋಟೆಯಂತಿದ್ದ ಚಿಕ್ಕಮಗಳೂರಿನಲ್ಲಿ ಕೇಸರಿ ಪಕ್ಷ ಮಕಾಡೆ ಮಲಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಿ.ಟಿ ರವಿ ಅಂತಹ ಘಟಾನುಘಟಿ ನಾಯಕರು ಸೋತು ಸುಣ್ಣವಾಗಿದ್ದಾರೆ. ಮಲೆನಾಡಿನ ಐದು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮಣಿಸುವಲ್ಲಿ ಮಂಗಳೂರಿನ ಉದ್ಯಮಿಯೋರ್ವರು ಇರುವುದು ಗಮನಾರ್ಹ ಸಂಗತಿ. ʼ
ಮಂಗಳೂರಿನ ಉದ್ಯಮಿ ವಿವೇಕ್‌ ರಾಜ್‌ ಪೂಜಾರಿ ಅವರನ್ನು ಚಿಕ್ಕಮಗಳೂರಿನ ಚುನಾವಣಾ ಉಸ್ತುವಾರಿಯನ್ನಾಗಿ ಡಿ.ಕೆ. ಶಿವಕುಮಾರ್‌ ನೇಮಿಸಿದ್ದರು. ತನಗೆ ಸಿಕ್ಕ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ವಿವೇಕ್‌ ರಾಜ್‌ ಚಿಕ್ಕಮಗಳೂರಿನಲ್ಲಿಯೇ ನೆಲೆಸಿ ಹಗಲಿರುಳು ದುಡಿದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದರು. ಇದು ಕಾಂಗ್ರೆಸ್‌ ನಾಯಕರ ಮೆಚ್ಚುಗೆಗೆ ಪಾತ್ರವಾಗಿದೆ.

ಚುನಾವಣಾ ತಂತ್ರ ನಿಪುಣ ವಿವೇಕ್‌: ವಿವೇಕ್‌ ಪೂಜಾರಿ ಪರಿಶ್ರಮಿ ಹಾಗೂ ತಂತ್ರ ಹೆಣೆಯುವುದರಲ್ಲಿ ನಿಪುಣರು. ಮತದಾರರ ಮನದಾಳ ಅಳೆಯುವುದರಲ್ಲಿ ನಿಸ್ಸೀಮರು. ಇವರ ರಾಜಕೀಯ ಸಾಮರ್ಥ್ಯವನ್ನು ಚೆನ್ನಾಗಿಯೇ ಗಮನಿಸಿಯೇ ಉಸ್ತುವಾರಿ ಸ್ಥಾನ ನೀಡಲಾಗಿತ್ತು. ಉಸ್ತುವಾರಿ ಸಿಗುವುದರ ಹಿಂದೆ ಐವನ್‌ ಡಿಸೋಜ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಡಿ.ಕೆ. ಸುರೇಶ್‌ ಮುಂತಾದವರ ಕೊಡುಗೆಯೂ ಇದೆ. ತಾವು ಶಿಫಾರಸು ಮಾಡಿದ ನಾಯಕ ಪರಿಶ್ರಮದಿಂದ ಕೆಲಸ ಮಾಡಿ ಉತ್ತಮ ಫಲಿತಾಂಶ ತಂದು ಕೊಟ್ಟಿರುವ ಬಗ್ಗೆ ಇವರೆಲ್ಲರಿಗೂ ತೃಪ್ತಿ ಇದೆ.
ಅಂತೂ ಈ ಚುನಾವಣೆ ಮೂಲಕ ವಿವೇಕ್‌ ಪೂಜಾರಿ ಅವರ ಸಾಮರ್ಥ್ಯ ರಾಜ್ಯ ನಾಯಕರಿಗೆ ತಿಳಿಯುವಂತಾಯಿತು.
ಇದು ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವುದರಲ್ಲಿ ಎರಡು ಮಾತಿಲ್ಲ.

ಅಂಶುಮತ್‌ ಮಾರ್ಗದರ್ಶನ: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಯಶಸ್ಸಿನಲ್ಲಿ ವಿವೇಕ್‌ ಪೂಜಾರಿ ಅವರು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಂಶುಮತ್‌ ಮಾರ್ಗದರ್ಶನದಲ್ಲಿ ತನ್ನದೇ ರೀತಿಯಲ್ಲಿ ತಂತ್ರಗಾರಿಕೆ ಹೆಣೆದು ಫೀಲ್ಡಿಗಳಿದರು. ತಮ್ಮದೇ ಆದ ಇಂಟೆಲೆಜೆನ್ಸ್‌ ತಂಡ ರಚಿಸಿ ಮತದಾರರ ನಾಡಿ ಮಿಡಿ ಅರಿತರು. 21 ಸಾವಿರ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್‌ ಗೆಲ್ಲಬೇಕಾದ ಅನಿವಾರ್ಯತೆ ಮನದಟ್ಟು ಮಾಡಿಕೊಟ್ಟರು.ರಾತ್ರಿ ಹಗಲು ಪಕ್ಷಕ್ಕಾಗಿ ದುಡಿದರು. ಇವೆಲ್ಲವೂ ಚುನಾವಣೆಯಲ್ಲಿ ಯಶಸ್ಸು ನೀಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು