News Karnataka Kannada
Wednesday, April 24 2024
Cricket
ಮಂಗಳೂರು

ಗೃಹಪ್ರವೇಶವಾಗಿ ಐದೇ ದಿನದಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿ: ಘಟನೆ ಹಿಂದಿದೆ ಬ್ಯಾಂಕ್‌ ಸಾಲದ ಕಥೆ

woman-commits-suicide-within-five-days-of-entering-her-house-the-story-behind-the-bank-loan-fraud
Photo Credit : News Kannada

ಉಳ್ಳಾಲ: ಜೀವನದಲ್ಲಿ ಹಲವಾರು ಕನಸುಗಳನ್ನು ಕಟ್ಟಿ ಬಾಳಿ ಬದುಕುಬೇಕಾದ ಯುವತಿಯೋರ್ವಳು ತಾನೇ ಖರೀದಿಸಿದ ಹೊಸ ಮನೆಯಲ್ಲಿ ಗೃಹಪ್ರವೇಶವಾಗಿ ಐದೇ ದಿನದಲ್ಲಿ ಮನೆಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿರುವ ಘಟನೆ ಮಂಗಳೂರು ಉಳ್ಳಾಲ ಸಮೀಪದ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ಮೂಲತಃ ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ರಾತ್ರಿ ಅಶ್ವಿನಿ ತನ್ನ ಸ್ನೇಹಿತೆ ಜತೆ ಚಾಟ್ ಮಾಡಿದ್ದಳು. ಬೆಳಗ್ಗೆ ನೋಡಿದಾಗ ಕೋಣೆಯಲ್ಲಿ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಗೈದಿದ್ದು ಬೆಳಕಿಗೆ ಬಂದಿದೆ.

ಮೃತದೇಹದ ಬಳಿ ಅಶ್ವಿನಿ ಬರೆದ ಡೆತ್ ನೋಟ್‌ ದೊರೆತಿದೆ ಎನ್ನಲಾಗಿದೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು, ಬ್ಯಾಂಕ್‌ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಸಾಮಾನ್ಯ ಕುಟುಂಬದಲ್ಲಿ ಬೆಳೆದು ಬಂದ ಅಶ್ವಿನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿಯೇ ಮನೆಯೊಂದನ್ನ ಖರೀದಿಸಿ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರು. ಡೆತ್‌ನೋಟ್‌ನಲ್ಲಿ ತನ್ನ ಪ್ರಿಯಕರನ ಹೆಸರು ಉಲ್ಲೇಖಿಸಿ ಐ ಲವ್ ಯೂ ಅಂತ ಬರದಿದ್ದು, ತಾನು ಬಳಸುತ್ತಿದ್ದ ಐ ಫೋನನ್ನು ಆತನಿಗೆ ನೀಡಬೇಕೆಂದು ಹೇಳಿದ್ದಾಳೆ.

ಅಶ್ವಿನ ಅವರ ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗಳ ಮೃತದೇಹ ಕಂಡು ಹೆತ್ತ ತಾಯಿ ಮನೆಯೊಳಗಡೆ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಬ್ಯಾಂಕ್ ಸಾಲದಿಂದ ಅಶ್ವಿನಿ ಖಿನ್ನತೆಗೊಳಗಾಗಿ, ಆತ್ಮ ಹತ್ಯೆಗೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು