News Kannada
Friday, September 29 2023
ಮಂಗಳೂರು

ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ವುಮೆನ್ ಆನ್ ವಾಕ್

Women on Walk to raise awareness about heart health
Photo Credit : News Kannada

ಮಂಗಳೂರು: ಕರಾವಳಿ ಪ್ರದೇಶದಲ್ಲಿ ಮುಂಚೂಣಿಯ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಒಂದಾಗಿರುವ ಮಂಗಳೂರು ಕೆಎಂಸಿ ಆಸ್ಪತ್ರೆಯು ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಾಗೂ ಮಹಿಳೆಯರ ಹೃದಯದ ಆರೋಗ್ಯ ಕುರಿತಂತೆ ಗಮನ ಸೆಳೆಯಲು 2 ಕಿಲೋ ಮೀಟರ್ ದೂರದ ವುಮೆನ್ ಆನ್ ವಾಕ್(WoW)ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸೆಪ್ಟೆಂಬರ್ 17, 2023ರ ಭಾನುವಾರ ಬೆಳಿಗ್ಗೆ 6.30ಕ್ಕೆ ವಾಕಥಾನ್ ಕಾರ್ಯಕ್ರಮಕ್ಕೆ ಬಾವುಟ ತೋರಿಸಿ ಚಾಲನೆ ನೀಡಲಾಯಿತು. ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ  ಗೀತಾ ಡಿ. ಕುಲಕರ್ಣಿ, ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‍ನ ಡೀನ್ ಡಾ. ಆಶಿತಾ ಉಪ್ಪೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಶೇಖರ್ ಅವರು ವಾಕಥಾನ್‍ನ ಗೌರವ ಅತಿಥಿಗಳಾಗಿದ್ದರು. ರಾಷ್ಟ್ರೀಯ ಮಟ್ಟದ ಅಥ್ಲೀಟ್ ಆದ ಕುಮಾರಿ ವರ್ಷಾ ಅವರು ವಾಕಥಾನ್‍ನ ನೇತೃತ್ವ ವಹಿಸಿ ಮುಂದೆ ಜ್ಯೋತಿ ಹಿಡಿದು ಸಾಗಿದ್ದರು. ವಾಕಥಾನ್‍ಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಿಂದ ಚಾಲನೆ ನೀಡಲಾಯಿತ್ತಲ್ಲದೆ, ಕಪ್ರಿಗುಡ್ಡದ ಮರೇನಾ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ವರೆಗೆ ನಡಿಗೆ ಆಯೋಜಿಸಲಾಗಿತ್ತು. ಈ ವಾಕಥಾನ್‍ನಲ್ಲಿ 1000ಕ್ಕೂ ಹೆಚ್ಚಿನ ಜನರು ಉತ್ಸಾಹದೊಂದಿಗೆ ಭಾಗವಹಿಸಿದ್ದರು.

ಮುಂಬರಲಿರುವ ವಿಶ್ವ ಹೃದಯ ದಿನದ ಭಾಗವಾಗಿ ಈ ವಾಕಥಾನ್ ಆಯೋಜಿಸಲಾಗಿದ್ದು, ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಸಲಾಯಿತು. ಜೊತೆಗೆ ಸಾಮಾನ್ಯವಾಗಿ ನಿರ್ಲಕ್ಷಿಸಲಾಗುವಂತಹ ಮಹಿಳೆಯ ಹೃದಯ ಆರೋಗ್ಯ ಕೇವಲ ಆಕೆಗೆ ಮಾತ್ರವಲ್ಲದೆ, ಆಕೆಯ ಕುಟುಂಬಕ್ಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂಬ ಸಂದೇಶವನ್ನು ಹರಡುವುದು ಇದರ ಉದ್ದೇಶವಾಗಿತ್ತು. ಯುವ ಮತ್ತು ಮಧ್ಯಮ ವಯಸ್ಸಿನ ಅನೇಕ ಮಹಿಳೆಯರು ಈ ವಾಕಥಾನ್‍ನಲ್ಲಿ ಭಾಗವಹಿಸಿದ್ದರು. ಹೃದಯದ ಆರೋಗ್ಯಕ್ಕಾಗಿ ಆಯೋಜಿಸಲಾದ ವುಮೆನ್ ಆನ್ ವಾಕ್(WoW)ನಲ್ಲಿ ಕೆಂಪು ಬಣ್ಣದ ಉಡುಗೆಗಳನ್ನು ಧರಿಸಲಾಗಿತ್ತು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹ ಪೈ ಅವರು ಈ ಕಾರ್ಯಕ್ರಮದಲ್ಲಿ ವಿಶ್ವ ಹೃದಯ ದಿನದ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಘೀರ್ ಸಿದ್ಧಿಕಿ, ಎಂಎಎಚ್‍ಇ, ಮಂಗಳೂರು ಕ್ಯಾಂಪಸ್‍ನ ಪ್ರೊ. ವಿಸಿ ಡಾ. ದಿಲೀಪ್ ಜಿ. ನಾಯಕ್, ಮಂಗಳೂರಿನ ಕೆಎಂಸಿಯ ಡೀನ್ ಡಾ. ಬಿ. ಉನ್ನಿಕೃಷ್ಣನ್, ಇಂಟರ್‍ವೆನ್ಷನಲ್ ಕಾರ್ಡಿಯಾಲಾಜಿಸ್ಟ್‍ಗಳಾದ ಡಾ. ಎಂ.ಎನ್. ಭಟ್, ಡಾ. ರಾಜೇಶ್ ಪೈ, ಕಾರ್ಡಿಯಾಕ್ ಎಲೆಕ್ಟ್ರೋಫಿಜಿಸಿಸ್ಟ್ ಡಾ. ಮನೀಶ್ ರೈ, ಕಾರ್ಡಿಯೋಥೊರಾಕಿಕ್ ಮತ್ತು ವಾಸ್ಕ್ಯೂಲಾರ್ ಶಸ್ತ್ರಕ್ರಿಯಾ ತಜ್ಞರಾದ ಡಾ. ಮಾಧವ್ ಕಾಮತ್ ಮತ್ತು ಡಾ. ಸೂರಜ್ ಪೈ, ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ಶಸ್ತ್ರಕ್ರಿಯಾ ತಜ್ಞರಾದ ಡಾ. ಹರೀಶ್ ರಾಘವನ್ ಮತ್ತು ಡಾ. ಐರೇಶ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

See also  ಬೆಂಗಳೂರು: ಜುಲೈ 22 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

ವಿವಿಧ ವಿಭಾಗಗಳ ಮುಖ್ಯಸ್ಥರು, ಆಸ್ಪತ್ರೆ ಆಡಳಿತ ಮತ್ತು ಸಿಬ್ಬಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಉಪಕ್ರಮದಲ್ಲಿ ಹಲವಾರು ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಕೆಎಂಸಿ ಆಸ್ಪತ್ರೆ ರೆಡ್ ಎಫ್‍ಎಂ ಸಹಯೋಗದಲ್ಲಿ ನಡೆಸುತ್ತಿರುವ ಹೃದಯ ಆರೋಗ್ಯ ಜಾಗೃತಿ ಕುರಿತ ಹಾರ್ಟ್‍ಬೀಟ್ ಕ್ವಿಜ್ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜೊತೆಗೆ ವಾಕಥಾನ್‍ನಲ್ಲಿ ಹಲವಾರು ವರ್ಗಗಳಲ್ಲಿ ಬಹುಮಾನಗಳನ್ನು ನೀಡಲಾಯಿತು. ಇವುಗಳಲ್ಲಿ ಅತ್ಯುತ್ತಮ ಸಮೂಹ/ಸಂಸ್ಥೆ, ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದವರು, ಅತ್ಯುತ್ತಮ ಸ್ಲೋಗನ್(ಘೋಷವಾಕ್ಯ) ಮತ್ತು ಅತ್ಯುತ್ತಮ ಪ್ಲಾಕಾರ್ಡ್(ಭಿತ್ತಿಪತ್ರ) ಮುಂತಾದ ಬಹುಮಾನಗಳನ್ನು ಕಾರ್ಯಕ್ರಮದ ನಂತರ ನೀಡಲಾಯಿತು. ಮಿಸೆಸ್ ಮಂಗಳೂರು ಖ್ಯಾತಿಯ ಸೌಜನ್ಯ ಹೆಗ್ಡೆ ಅವರು ಕಾರ್ಯಕ್ರಮದ ನಿರೂಪಕರಾಗಿದ್ದರು.

ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹೃದಯ ರಕ್ತನಾಳಗಳ ರೋಗಗಳನ್ನು ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಈ ರೋಗಗಳನ್ನು ನಿಯಂತ್ರಿಸಿ ಅವುಗಳ ಜಾಗತಿಕ ಪರಿಣಾಮ ಇಲ್ಲವಾಗುವಂತೆ ಮಾಡುವ ಗುರಿಯೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಹೃದಯ ರೋಗಗಳ ಲಕ್ಷಣಗಳು, ಆರೋಗ್ಯ ಸಂಬಂಧಿ ಅಪಾಯಗಳು ಮತ್ತು ಹೃದಯ ರೋಗಗಳಿಗೆ ಸಂಬಂಧಿಸಿದಂತೆ ಇತರೆ ಅಂಶಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಈ ಒಂದು ತಿಂಗಳ ಅವಧಿಯ ಅಭಿಯಾನ ಹೊಂದಿರುತ್ತದೆ. ಜೊತೆಗೆ ಹೃದಯ ರೋಗಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಗುರಿಯನ್ನು ಕೂಡ ಈ ಕಾರ್ಯಕ್ರಮ ಹೊಂದಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು