News Kannada
Sunday, February 25 2024
ಮಂಗಳೂರು

ವಿಶ್ವ ಟೇಕ್ವಾಂಡೋ ಚಾಂಪಿಯನ್‌ ಶಿಪ್‌: ಮಂಗಳೂರಿನ ಸಂಹಿತಾಗೆ ಬೆಳ್ಳಿ

World Taekwondo Championship: Mangaluru's Samhita wins silver
Photo Credit : News Kannada

ಕೌಲಲಾಂಪುರ/ ಮಂಗಳೂರು: ಮಲೇಷ್ಯಾ ಕೌಲಲಾಂಪುರದ ಜುರಾ ಸ್ಟೇಡಿಯಂನಲ್ಲಿ ನಡೆದ 14ನೇ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ ಶಿಪ್ ಮಹಿಳಾ (ಕಿರಿಯ) ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಮಿತಾ ಅಲೆವೂರಾಯ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಕೋಚ್‌ ಗುರುರಾಜ್‌ ಇಟಗಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮಂಗಳೂರಿನ ಶಾರದಾ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಕದ್ರಿ ವಾಸುದೇವ ಭಟ್‌ ಕುಂಜತ್ತೋಡಿ ಮತ್ತು ದೀಪಾ ಕೆ.ಎಸ್.‌ ಅವರ ಪುತ್ರಿ. ಸಂಹಿತಾ ಅವರು 2022ರಲ್ಲಿ ನೇಪಾಳದಲ್ಲಿ ನಡೆದ ವಿಶ್ವಮಟ್ಟದ ಟೇಕ್ವಾಂಡೋ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

ವಿಶ್ವ ಟೇಕ್ವಾಂಡೋ ಚಾಂಪಿಯನ್‌ ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸಂಹಿತಾ ಅಲೆವೂರಾಯ ಬೆಳ್ಳಿ ಗೆದ್ದು ಸಂಭ್ರಮಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು