News Karnataka Kannada
Saturday, April 27 2024
ಮಂಗಳೂರು

ಸೈಕಲ್ ಏರಿ ದೇಶ ಪರ್ಯಟನೆ ಮೂಲಕ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿರುವ ಯುವಕ

Young man rides a bicycle to teach environmental protection through travelling around the country
Photo Credit : News Kannada

ಬಂಟ್ವಾಳ:  ಸೈಕಲ್ ಏರಿ ದೇಶ ಪರ್ಯಟನೆ ಮಾಡುವ ಈ ಯುವಕ ಎಲ್ಲರಿಗೂ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿದ್ದಾನೆ.

ಹೌದು ಈತನ ಹೆಸರು ಚೈತನ್ಯ. ಆಂಧ್ರಪ್ರದೇಶದ ನಲ್ಲೂರು ಜಿಲ್ಲೆ ಈತನ ತವರು ಜಿಲ್ಲೆ. ಕಳೆದ 2022 ಡಿ.25 ನಲ್ಲೂರಿನಿಂದ ಯಾತ್ರೆ ಹೊರಟಿರುವ ಈತ ಈವರೆಗೆ  9400 ಕಿಮೀ‌  ಸೈಕಲ್‌ನಲ್ಲೇ ಕ್ರಮಿಸಿದ್ದಾನೆ. ಕಳೆದ‌146 ದಿನಗಳಲ್ಲಿ ಪಾಂಡಿಚೇರಿ, ತಮಿಳುನಾಡು, ಕೇರಳ ಹಾಗೂ ರಾಜ್ಯಗಳನ್ನು ಸಂಪರ್ಕಿಸಿರುವ ಈತ ಒಟ್ಟು 625 ದಿನಗಳ‌ ಕಾಲ ಸೈಕಲ್ ನಲ್ಲಿ ಪಯಣಿಸಿ ಗಿನ್ನೆಸ್ ದಾಖಲೆಯ ಉದ್ದೇಶವನ್ನೂ ಇರಿಸಿಕೊಂಡಿದ್ದಾನೆ. ಪುತ್ತೂರಿನಿಂದ‌ ಮಂಗಳೂರಿಗೆ ಸಾಗುವ ದಾರಿ ಮಧ್ಯೆ ಕಲ್ಲಡ್ಕದಲ್ಲಿ ಪತ್ರಿಕೆಯ ಜೊತೆ ಮಾತನಾಡಿದ ಚೈತನ್ಯ ತನ್ನ ಅನಿಸಿಕೆಗಳನ್ನು ತೆರೆದಿಟ್ಟಿದ್ದಾನೆ.

ಪರಿಸರ ಜಾಗೃತಿಯೇ ಈತನ ಆಶಯ

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವುದು ತನ್ನ ಮುಖ್ಯ ಧ್ಯೇಯ ಎನ್ನುವ ಈತ ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡಬೇಕು, ಬಳಸಿದ ಪ್ಲಾಸ್ಟಿಕನ್ನು ಮತ್ತೆ ಮತ್ತೆ  ಮರುಬಳಕೆ ಮಾಡುವ ಮೂಲಕ‌ ಹೊಸ‌ಪ್ಲಾಸ್ಟಿಕ್ ಉಪಯೋಗವನ್ನು ತಡೆಯಬೇಕು , ಅತಿಯಾದ ಉಷ್ಟಾಂಶವನ್ನು ಕಡಿಮೆ‌ ಮಾಡಲು ಮರಗಿಡಗಳನ್ನು ಬೆಳೆಸಿ ಎನ್ನುವ ಈತ ಪ್ರತೀ ಮನೆಯ ಸುತ್ತಮುತ್ತ ಕನಿಷ್ಟ ನಾಲ್ಕೈದು‌ ಗಿಡಗಳನ್ನು ನೆಟ್ಟು ಮರವಾಗಿಸಬೇಕು ಎನ್ನುತ್ತಾನೆ. ಪ್ಲಾಸ್ಟಿಕ್ ಹಾವಳಿ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ತನ್ನ ತಂದೆ ಗುರಂ ನರಸಿಂಹಲು ಪ್ರೇರಣೆಯಾಗಿದ್ದಾರೆ ಎನ್ನುವ ಈತ ಡಿ.ಫಾರ್ಮ್  ವಿದ್ಯಾರ್ಜನೆ ಪೂರೈಸಿದ್ದು,  ತಾನೇನಾದರೂ ಸಾಧಿಸಬೇಕು, ತನ್ನ ಸಾಧನೆ ಸಮಾಜಮುಖಿಯಾಗಿರಬೇಕು ಎನ್ನುವ ಛಲ ಹೊಂದಿದ್ದಾನೆ.‌

ಒಟ್ಟು 50 ಸಾವಿರ ಕಿ‌ಮೀ.ದೂರು ಸೈಕಲ್‌ನಲ್ಲೇ ಕ್ರಮಿಸಿ ದೇಶ ಸುತ್ತುವ ಜೊತೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ತಿಳಿಯುವ ಉದ್ದೇಶವೂ ಈತನದ್ದಾಗಿದ್ದು, ಸೈಕಲ್‌ಯಾತ್ರೆಯ ಮೂಲಕ‌ಭೂಮಿಗೇ ಚೈತನ್ಯ ನೀಡಲು ಹೊರಟ ಚೈತನ್ಯನ ಯಾತ್ರೆ ಯಶಸ್ವಿಯಾಗಲಿ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು