News Karnataka Kannada
Thursday, April 25 2024
ಕರಾವಳಿ

ಟೇಪ್‌ ಸುತ್ತಿ ಮಕ್ಕಳನ್ನು ಕೊಲೆ ಮಾಡಿದ್ದ ಪಾಪಿ ತಂದೆಯನ್ನು ಬಂಧಿಸಿದ ಪೊಲೀಸರು

Body found in mysterious circumstances in Bihar's Bhojpur, family alleges brutal murder
Photo Credit :

ದಾವಣಗೆರೆ: ತನ್ನಿಬ್ಬರು ಅವಳಿ ಮಕ್ಕಳಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ತಂದೆಯನ್ನು ದಾವಣಗೆರೆಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್‌ ನ ಅಮರ್ (36) ತನ್ನ ಅವಳಿ ಮಕ್ಕಳಾದ ಅದ್ವೈತ್ ಮತ್ತು ಅನ್ವಿತ್ (4.4 ) ಅವರನ್ನು ಕೊಲೆಗೈದಿರುವ ಆರೋಪಿ. ಯಾವ ಕಾರಣಕ್ಕೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ಹೊರ ಬರಬೇಕಿದೆ.

ಹರಿಹರ ಸಮೀಪದ ಕಾರ್ಗಿಲ್ ಕಂಪನಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿರುವ ಅಮರ್, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ವಾಸಿಸುತ್ತಿದ್ದ. ಮೇ.31 ರಂದು ಅವಳಿ ಮಕ್ಕಳಾದ ಅದ್ವೈತ್ ಮತ್ತು ಅನ್ವಿತ್ ಇಬ್ಬರನ್ನು ಕಾರಿನಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್‌ ಗೇಟ್‌ ಗೆ ಕರೆದೊಯ್ದು ಸರ್ವೀಸ್ ರಸ್ತೆಯಲ್ಲಿ ಇಬ್ಬರೂ ಮಕ್ಕಳಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಅಮರ್ ಪತ್ನಿ ಜಯಲಕ್ಷ್ಮಿ ತನ್ನ ತವರು ಊರಾದ ವಿಜಯಪುರದಲ್ಲಿದ್ದರು. ಅಮರ್‌ ನ ತಾಯಿ ಸಾವಿತ್ರಮ್ಮ ಮನೆಯಲ್ಲಿದ್ದರು. ವಿದ್ಯಾನಗರ ಠಾಣೆ ಪೊಲೀಸರು ಆರೋಪಿಯನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಅವಳಿ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು