News Kannada
Sunday, December 04 2022

ಉಡುಪಿ

ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಹುಟ್ಟು ಹಾಕುತ್ತಿದೆ; ವಿ ಸುನಿಲ್ ಕುಮಾರ್

Photo Credit :

ಕಾರ್ಕಳ : ಪ್ರತೀ ವರ್ಷ ಜನವರಿ 26 ರ ಗಣರಾಜ್ಯೋತ್ಸವದಂದು ಘನವೆತ್ತ ಭಾರತ ಸರ್ಕಾರದಿಂದ ಗಣರಾಜ್ಯೋತ್ಸವ ಪೆರೇಡ್ ಆರಂಭದಿಂದ ಈವರೆಗೆ ತನ್ನದೇ ಆದಂತಹ ನಿಲುವನ್ನು ಇಟ್ಟುಕೊಂಡು ಪೆರೇಡ್ ನಡೆಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.

ಒಟ್ಟು ಈವರೆಗೆ ನಡೆದುಬಂದ ಪದ್ಧತಿಯಂತೆ ದೇಶದಲ್ಲಿರುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 36 ರಾಜ್ಯಗಳೆಂದು ಪರಿಗಣಿಸಿ ಪ್ರತಿ ರಾಜ್ಯವು ಗಣರಾಜ್ಯೋತ್ಸವ ನಿಮಿತ್ತ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪೆರೇಡ್ ಗೆ ಕಳುಹಿಸುವುದು ಪದ್ಧತಿ.

ಆದರೆ ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡಿಗೆ 12 ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ.

36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುವ ನಮ್ಮ ದೇಶದಲ್ಲಿ ಪ್ರತಿ ರಾಜ್ಯವೂ ಪ್ರತಿ ವರ್ಷ ಪೆರೇಡ್ ನಲ್ಲಿ ಭಾಗವಹಿಸುವ ಅವಕಾಶವಿರುವುದಿಲ್ಲ. ಇದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆರಂಭವಾದಾಗಿನಿಂದ ನಡೆದುಬಂದ ಸತ್ಸಂಪ್ರದಾಯ ಮತ್ತು ನಿಯಾಮವಳಿ ಆಗಿರುತ್ತದೆ. ಈ ಸಂಪ್ರದಾಯದಂತೆ 2018 ಮತ್ತು 2021ರಲ್ಲಿ ಕೇರಳ ರಾಜ್ಯವು ತನ್ನ ಸ್ತಬ್ದ ಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು.

ಈ ಪುನರಾವರ್ತಿತ ನಿಯಮದಂತೆ ಕಳೆದ ವರ್ಷಗಳಲ್ಲಿ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಲ್ಲಿ ಈ ವರ್ಷ ಭಾಗವಹಿಸುವ ಅವಕಾಶವಿರುತ್ತದೆ ವಿನಹ ಕಳೆದ ವರ್ಷ ಅಂದರೆ 2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿರುವ ಕೇರಳ ರಾಜ್ಯಕ್ಕೆ ಈ ವರ್ಷ ನಿಯಮಾವಳಿಯಂತೆ ಅವಕಾಶವಿರುವುದಿಲ್ಲ. ಆದರೆ ಈ ನಿಯಮಾವಳಿ ತಿಳಿದಿದ್ದರೂ ಕೂಡ ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದವನ್ನು ಹುಟ್ಟು ಹಾಕುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.

See also  ಕಾರ್ಕಳದಲ್ಲಿ ಮಾ. 10 ರಿಂದ 20ರವರೆಗೆ ಕಾರ್ಕಳ ಉತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು