News Kannada
Monday, November 28 2022

ಉಡುಪಿ

ಕಾರ್ಕಳ: 50ಕ್ಕೂ ಅಧಿಕ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ಬಲಿ - 1 min read

Photo Credit : IANS

ಉಡುಪಿ : ಕೊರೊನಾ 3ನೇ ಅಲೆಯ ಭೀತಿಯ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾಲುಬಾಯಿ ರೋಗ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾರ್ಕಳ ನಗರದ ಆಸುಪಾಸಿನಲ್ಲಿ 50ಕ್ಕೂ ಅಧಿಕ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ಬಲಿಯಾಗಿವೆ ಎಂದು ವರದಿಯಾಗಿದೆ.

ಅನೇಕ ಜಾನು​ವಾ​ರು​ಗಳಲ್ಲಿ ಕಾಲು​ಬಾಯಿ ಜ್ವರ ಕಾಣಿ​ಸಿ​ಕೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ತೆಳ್ಳಾರು, ಮಿಯಾರು, ದುರ್ಗಾ ಮೊದಲಾದ ಕಡೆ ಕಾಯಿಲೆ ಕಾಣಿಸಿಕೊಂಡಿದೆ. ಜಾನುವಾರುಗಳ ಬಾಯಿಯಲ್ಲಿ ಮತ್ತು ಗೊರಸಿನ ಸಂಧಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತಿದೆ. ಪರಿನಾಮ ಆಹಾರ ಸೇವಿಸಲು ಆಗದೆ ಜಾನುವಾರುಗಳು ಯಾತನೆ ಪಡುತ್ತಿವೆ.

ಕೆಲ ಗ್ರಾಮ​ಗ​ಳ ಜಾನು​ವಾ​ರು​ಗ​ಳಲ್ಲಿ ಕಾಲು​ಬಾ​ಯಿ ರೋಗ ಲಕ್ಷಣ ಕಾಣಿಸಿಕೊಂಡಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗ ಬಂದ ಐದಾರು ದಿನದಲ್ಲಿಯೇ ಹಸುಗಳು ಸಾವನ್ನಪ್ಪುತ್ತಿವೆ. ಜಾನು​ವಾ​ರು​ಗಳು ಕಾಲು​ಬಾಯಿ ರೋಗಕ್ಕೆ ತುತ್ತಾ​ಗುತ್ತಿರುವುದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ. ಈ ಪ್ರಕ​ರ​ಣ​ಗಳು ವರ​ದಿ​ಯಾ​ಗು​ತ್ತಿ​ದ್ದಂತೆಯೇ ರಾಸು​ಗ​ಳಿಗೆ ಚುಚ್ಚು​ ಮದ್ದು ಹಾಗೂ ಅಗತ್ಯ ಚಿಕಿತ್ಸೆ ಕೊಡಿಸಲು ಜನರು ಪರದಾಡುವಂತಾಗಿದೆ. ಅಲ್ಲದೆ ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಯಿಲೆಯಿಂದ ಒಂದರ ಮೇಲೊಂದರಂತೆ ರಾಸುಗಳು ಸಾವನ್ನಪ್ಪುತ್ತಿದ್ದರೂ ಪಶು ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುಬಾಯಿ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಜಾನುವಾರುಗಳನ್ನು ಗ್ರಾಮಸ್ಥರೇ ತಮ್ಮ ಜಮೀನುಗಳಲ್ಲಿ ಹೂಳುತ್ತಿದ್ದಾರೆ. ಕೂಡಲೇ ರಾಸುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕೆಂದು ಪಶು ಇಲಾಖೆಗೆ ಒತ್ತಾಯಿಸಿದ್ದಾರೆ.

See also  ಮಕ್ಕಳಲ್ಲಿ ಕೊರೊನಾ ಪತ್ತೆಯಾದರೆ ಆಯಾ ತರಗತಿ ಐದು ದಿನ ಬಂದ್‌; ಕೂರ್ಮಾರಾವ್‌ ಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು