News Kannada
Thursday, September 21 2023
ನುಡಿಚಿತ್ರ

ಕಾಸ್ಮೋಪಾಲಿಟನ್ ಸಿಟಿಯಲ್ಲಿ ಪ್ರವೃತ್ತಿ ಕೃಷಿಕ ನಿತ್ಯಾನಂದ ನಾಯಕ್ ನರಸಿಂಗೆ

manipal 6
Photo Credit : News Kannada

ಮಣಿಪಾಲ್: ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಮಣಿಪಾಲ್ ಹೈಟೆಕ್ ಪಟ್ಟಣಗಳಲ್ಲಿ ಒಂದಾಗಿದೆ. ಮಣಿಪಾಲ್ ಹಂತ ಹಂತವಾಗಿ ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಶೋಧನಾ ಕೇಂದ್ರಗಳ ಕೇಂದ್ರಬಿಂದುವಾಗಿ ಇಂದು ಬೆಳೆದು ನಿಂತಿದೆ.
ಅಂತರ್ ರಾಷ್ಟೀಯ ಮಟ್ಟದಲ್ಲಿ ಸಾಕಷ್ಟು ಹೆಸರುಗಳಿಸುತ್ತಿರು ನಗರ. ಶೈಕ್ಷಣಿಕವಾಗಿ ದೇಶ ವಿ ದೇಶಿಯರನ್ನು ಆಕರ್ಷಿಸುತ್ತಿರುವ ನಗರ. ಉದ್ಯಮ ಕ್ಷೇತ್ರಕ್ಕೂ ಸಾಕಷ್ಟು ಅವಕಾಶಗಳನ್ನು ನೀಡುತ್ತಿರುವ ನಗರ.

ಇಂತಹ ನಗರದಲ್ಲಿ ಜಮೀನನ್ನು ಮಾರಿ ಲಾಭಗಳಿಸುವ ಉದ್ದೇಶವನ್ನು ಹೊಂದಿರುವವರು, ಇರುವ ಅಲ್ಪಸ್ವಲ್ಪ ಜಮೀನನ್ನು ಮಾರಿ ಬಹುಮಹಡಿ ಕಟ್ಟಡಗಳನ್ನು ಕಟ್ಟಿ, ಫ್ಲಾಟ್ ಗಳಲ್ಲಿ ಜೀವನ ನಡೆಸುವಂತಹ ಪ್ರವೃತಿವೇಗವಾಗಿ ಬೆಳೆಯುತ್ತಿದೆ.
ಇಂತಹ ಬೆಳವಣಿಗೆಯ ನಡುವೆ ನಿತ್ಯನಂದ ನಾಯಕ್ ನರಸಿಂಗೆ ರವರು ತದ್ವಿರುದ್ದವಾಗಿ ತಮ್ಮಪಾಡಿಗೆ ತಾವು, ಇರುವ ಹತ್ತು ಎಕ್ಕರೆ ಜಮೀನಿನನ್ನು ಹಸಿರಾಗಿಸಿದ್ದಾರೆ. ಕೋಟಿ ಕೋಟಿ ಮೌಲ್ಯವಿರುವ ತಮ್ಮ ಜಮೀನನ್ನು ಮಾರದೆ ಕೃಷಿಯನ್ನು ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರೆ.

ಸದಾ ಹಸನ್ಮುಖಿ ಆಗಿರುವ ನಿತ್ಯನಂದ ನಾಯಕ್ ನರಸಿಂಗೆ ಶ್ರೀದುರ್ಗಾ ಪರಮೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಲಿಮಿಟೆಡ್ ಪರ್ಕಳ, ಉಡುಪಿ ಇಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಹತ್ತು ಎಕರೆ ಜಮೀನಿನಲ್ಲಿ ಹಸಿರು ಧಾನ್ಯ ತರಕಾರಿಗಳನ್ನು ಬೆಳೆಯುತ್ತಿರುವುದು ಮಹತ್ತರವಾದ ಸಾಧನೆ.

ಕಳೆದ 15 ವರ್ಷಗಳಿಂದ ಬರಡಾಗಿ ಬಿದ್ದಿದ್ದ ಜಮೀನಲ್ಲಿ ಬೆಳೆದಿದ್ದ ಗಿಡ,ಕಳೆ ಕುಂಟೆ ಕಿತ್ತು ಹಿತಾಚಿ, ಜೆಸಿಬಿ, ಟ್ರಾಕ್ಟರ್ ನೆರವಿನಿಂದ ನೆಲವನ್ನು ಸಮತಟ್ಟು ಮಾಡಿ ಕೃಷಿಗೆ ಯೋಗ್ಯವನ್ನಾಗಿಸಿದ್ದಾರೆ. ಕೃಷಿಯನ್ನು ಆಪ್ತರ ಸಹಾಯ ಸಲಹೆಯ ಮೇರೆಗೆ ಆರಂಭಿಸಿದರು.ಆರಂಭದಲ್ಲಿ ಒಂದಿಷ್ಟು ತರಕಾರಿಗಳನ್ನು ಪ್ರಾಯೋಗಿಕವಾಗಿ ಬೆಳೆಸಿ ಅದರ ಪರಿಣಾಮವಾಗಿ ಸೊಲೂ ಕಂಡರೂ ಕೂಡ ತಮ್ಮ ಪ್ರಯತ್ನ ಬಿಡದೆ ಇಂದು ಯಶಸ್ವಿ ಕೃಷಿಕರೆನಿಸಿಕೊಂಡಿದ್ದಾರೆ.

ಕಳೆದ ಒಂದೂವರೆ ವರ್ಷದ ಸತತ ಪ್ರಯತ್ನದಿಂದ ಇವರು ಹೀರೆಕಾಯಿ, ಹಾಗಲಕಾಯಿ, ಮಟ್ಟಿಗುಳ್ಳ,ಬಿಳಿಬೆಂಡೆ, ಚೌಲಿ ಚಿಡ್ಕಿ ಮಿಡ್ಕಿ, ಅರಿವೆ, ಗೆಣಸು, ಮೆಣಸು, ಮೂಲಂಗಿ ಹೀಗೆ ಇನ್ನಿತರ ತರಕಾರಿ ಜೊತೆಗೆ, ಋತುಮಾನಕ್ಕೆ ತಕ್ಕಂತೆ ತರಕಾರಿಗಳನ್ನು ಬೆಳೆಸುತ್ತಾರೆ.

ಕೃಷಿ ವಿಜ್ಞಾನ ಕೇಂದ್ರದಿಂದ ಹೈಬ್ರೀಡ್ ಬೀಜಗಳನ್ನು ತಂದು ಬಿತ್ತಿ ಒಳ್ಳೆಯ ಬೆಳೆಯನ್ನು ತೆಗೆಯುವ ಇವರಿಗೆ ಆಪ್ತರಾದ ಕರುಣಾಕರ್ ಸುಳ್ಯ ಇವರು ಸಲಹೆಯನ್ನು ನೀಡುತ್ತಿದ್ದಾರೆ.
ಜಮೀಜಿನಲ್ಲಿ ಅಕೇಶಿಯಾ, ಕರ್ಮಾರ್ ಮತ್ತು ನೇರವಾಗಿರುವಂತಹ ಮರಗಳನ್ನು ಹಾಕಿ ಅದಕ್ಕೆ ಜೆ.ವಯರ್ ಕಟ್ಟಿ ಚಪ್ಪರ ಹಾಕಿ ಹೀರೆ ಹಾಗೂ ಹಾಗಲಕಾಯಿ ಬಳ್ಳಿಗಳನ್ನು ಬಿಡಲಾಗಿದೆ. ತೋಟಕ್ಕೆ ಹಟ್ಟಿಗೊಬ್ಬರ, ಭೂಮಿ ಮಿತ್ರ, ಗೋ ಕೃಪ ಗೊಬ್ಬರವನ್ನು ಬಳಸಲಾಗುತ್ತಿದ್ದು ಯಾವುದೇ ಹಾನಿಕಾರಕ ಗೊಬ್ಬರವನ್ನು ಬಳಸಲಾಗುತ್ತಿಲ್ಲ.

ಇವರು ಬೆಳೆಯುವ ತರಾಕಾರಿ ಉಡುಪಿಯ ಡೈಲಿ ಮಾರ್ಕೆಟ್ ನಲ್ಲಿ ಭರ್ಜರಿಯಾಗಿ ವ್ಯಾಪಾರಾವಾಗುತ್ತಿದೆ. ಮಟ್ಟಿಗುಳ್ಳ 180ರಿಂದ 200 ಕೆ.ಜಿ, ಗೆಣಸು 800ರಿಂದ 850 ಕೆ.ಜಿ, ಬಿಳಿಬೆಂಡೆ ಇದುವರೆಗೆ 7.5 ಟನ್, ಹೀರೆ ಆರಂಭದಲ್ಲಿ 48 ರಿಂದ 700 ಕೆ.ಜಿ, ಬೆಳೆಸಿ ಲಾಭ ಪಡೆಯುತ್ತಿದ್ದಾರೆ.

ನ್ಯೂಸ್ ಕನ್ನಡದ ಜೊತೆ ಮಾತಾನಾಡಿದ ನಿತ್ಯನಂದ ನಾಯಕ್‌ರವರು “ ನಾವು ಬೆಳೆಯುವ ತರಾಕಾರಿಗೂ ಮಾರ್ಕೆಟ್‌ನಲ್ಲಿ ಲಭ್ಯವಿರುವ ತರಾಕಾರಿಗೂ ತುಂಭಾ ವ್ಯತ್ಯಾಸವಿದೆ. ನಮ್ಮ ತರಾಕಾರಿಯು ಸಾಮಾನ್ಯ ಗಾತ್ರದಿಂದ ಕೂಡಿದ್ದು, ತೂಕ ಕಮ್ಮಿ ಇದ್ದು ಒಂದು ಕೆ.ಜಿ ಹಾಗಲಕಾಯಿ 8ರಿಂದ 9 ಹಾಗಲಕಾಯಿ ತೂಕಕ್ಕೆ ಸಿಗುತ್ತದೆ ಹಾಗೂ ತಾಜಾವಾಗಿರುತ್ತದೆ”.
“ಲಾಭಾಂಶದ ಬಗ್ಗೆ ಮಾತಾನಾಡುವುದದರೆ ಮಾರ್ಕೆಟ್ ನಲ್ಲಿ ಒಳ್ಳೆಯ ದರ ನಿಗದಿಯಾದಗ ನಮ್ಮಲ್ಲಿ ಆ ಬೆಳೆ ಇರಬೇಕು. ಕೆಲವೋಮ್ಮೆ ಬೆಳೆ ಚೆನ್ನಾಗಿರುತ್ತದೆ ಆದರೆ ಮಾರ್ಕೆಟ್ ದರ ಕಡಿಮೆ ಇರುತ್ತದೆ. ಇದು ಸಮಯದ ಮೇಲೆ ನಿರ್ಧರಿತವಾಗಿರುತ್ತದೆ” ಎಂದು ನಿತ್ಯಾನಂದ ನಾಯಕ್ ರವರು ಹೇಳುತ್ತಾರೆ.

See also  ಆಷಾಡದಲ್ಲಿ ನಂಜನಗೂಡು ನಂಜುಂಡೇಶ್ವರನಿಗೆ ವಿವಾಹ!

ನಮ್ಮಗೆ ಬೇಕಾಗಿರುವ ತರಾಕಾರಿಗಳನ್ನು ಸ್ವತಃ ನಾವೇ ಆಯ್ಕೆ ಮಾಡಿ ಮನೆಗೆ ತರುವುದರಲ್ಲಿ ತೃಪ್ತಿ ಇರುತ್ತದೆ. ನಿತ್ಯಾನಂದ ನಾಯಕರ ತೋಟದಲ್ಲಿ ನೈಸರ್ಗಿಕ ಕೃಷಿಯಿಂದ ಉತ್ತಮ ತಾಜಾ ತರಾಕಾರಿಗಳು ಸಿಗುತ್ತದೆ. ಹತ್ತು ಎಕರೆ ಜಮೀನಿನಲ್ಲಿ ಸೊಂಪಾಗಿ ತರಕಾರಿ ಬೆಳೆಸಿ ಸೈ ಎನಿಸಿಕೊಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು