News Kannada
Friday, December 09 2022

ಉಡುಪಿ

ಬೈಂದೂರು: ಅಜ್ಜಿಗೆ ಮನೆ ನಿರ್ಮಾಣ ಮಾಡಲು ಬೇಕಿದೆ ಸಂಕಲ್ಪ

Byndoor: Grandmother needs a resolve to build a house
Photo Credit : News Kannada

ಬೈಂದೂರು: ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು ನಿವಾಸಿ ಚಂದು ಪೂಜಾರ್ತಿ (70) ಎನ್ನುವ ಇಳಿ ವಯಸ್ಸಿನ ಅಜ್ಜಿ ಏಕಾಂಗಿ ಆಗಿ ಬದುಕುತ್ತಿದ್ದು ಅವರ ವಾಸದ ಮನೆ ಶಿಥಿಲಾವಸ್ಥೆಯಲ್ಲಿದೆ ಅಜ್ಜಿಗೊಂದು ಸೂರೊಂದನ್ನು ಕಲ್ಪಿಸುವ ಕಾರ್ಯಕ್ಕೆ ಸಮಾಜ ಬಾಂಧವರುಮ,ದಾನಿಗಳು ಕೈ ಜೋಡಿಸಬೇಕಾಗಿದೆ.

ನಾಡ ಗ್ರಾಮದ ತೆಂಕಬೈಲು ಗೋಳಿಹಕ್ಲು 5.ಸೆಂಟ್ಸ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಚಂದು ಅಜ್ಜಿಗೆ ಮಕ್ಕಳಿಲ್ಲ,ಅವರ ಪತಿ ನಿಧನರಾಗಿ 30 ವರ್ಷಗಳು ಕಳೆದು ಹೋಗಿದೆ ಕಳೆದ 30 ವರ್ಷಗಳಿಂದ ಒಬ್ಬಂಟಿಯಾಗಿ ಅಜ್ಜಿ ವಾಸಮಾಡುತ್ತಿದ್ದಾರೆ. ಮಣ್ಣಿನ ಇಟ್ಟಿಗೆಯಿಂದ ಕಟ್ಟಿದ ಸಣ್ಣ ಮನೆ ಸಂಪೂರ್ಣ ದುರಾವಸ್ಥೆಯಲ್ಲಿದೆ, ಹಾವು, ಚೇಳು ಮನೆ ಒಳಗೆ ಹೊಗ್ಗದಂತೆ ರಕ್ಷಣೆಗೆ ಕಿಟಕಿ ಬಾಗಿಲುಗಳಿಲ್ಲ, ಮನೆ ಎದುರುಗಡೆ ತೆಂಗಿನ ಗರಿಯ ತಟ್ಟಿಯನ್ನು ಕಟ್ಟಲಾಗಿದೆ, ದುಸ್ಥಿಯಿಂದ ಕೂಡಿದ್ದ ಮನೆ ಯಾವುದೇ ಕ್ಷಣದಲ್ಲಾದರೂ ಉದುರಿ ಬೀಳುವ ಪರಿಸ್ಥಿಯಲ್ಲಿದೆ, ಮನೆ ಮೇಲಿನ ಮಾಡಿಗೆಗೆ ಸ್ಥಳೀಯರ ಸಹಕಾರದಿಂದ ಟಾರ್ಪಲ್ ಹೋದಿಕೆಯನ್ನು ಹಾಕಲಾಗಿದೆ. ಇಳಿ ವಯಸ್ಸಿನಲ್ಲಿ ಯಾತನೆಯ ಬದುಕನ್ನು ನಡೆಸುತ್ತಿರುವ ಚೆಂದು ಅಜ್ಜಿಗೆ ಮನೆಯೊಂದು ಕಲ್ಪಿಸಿ ಕೊಡುವ ಸಂಕಲ್ಪ ನಾಗರಿಕ ಸಮಾಜ ಮಾಡಬೇಕಾಗಿದೆ.

ತಿಂಗಳಿಗೆ ಬರುತ್ತಿರುವ ಸಂಧ್ಯಾ ಸುರಕ್ಷಾ ಹಣದಿಂದ ಅಜ್ಜಿ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ ಸೊಸೈಟಿಯಲ್ಲಿ ಸಿಗುತ್ತಿರುವ ಅಕ್ಕಿಯೇ ಅಜ್ಜಿಯ ಜೀವನಕ್ಕೆ ಆಧಾರವಾಗಿದೆ ಶೌಚಾಲಯದ ವ್ಯವಸ್ಥೆ ಕೂಡ ಅಜ್ಜಿ ಮನೆಯಲ್ಲಿ ಇಲ್ಲ.ಅಜ್ಜಿಯ ಆರೋಗ್ಯವು ಕೂಡ ಹದಗೆಟ್ಟಿದ್ದು ದೈಹಿಕವಾಗಿ ಅಶಕ್ತರಾಗಿದ್ದಾರೆ ಅಧಿಕಾರಿ ವರ್ಗದವರನ್ನು ಸಂಪರ್ಕಿಸಿ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲುವಷ್ಟು ಶಕ್ತರಿಲ್ಲ ಚೆಂದು ಅಜ್ಜಿಗೆ ದಾನಿಗಳ ಸಹಕಾರದ ಅವಶ್ಯಕತೆ ಇದೆ.

ಮನೆಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಲೈನ್ ತುಂಡಾಗಿ ಬಿದ್ದು ಎರಡು ವರ್ಷಗಳು ಕಳೆದು ಹೋಗಿದೆ ವಿದ್ಯುತ್ ದೀಪದ ಸೌಲಭ್ಯವಿಲ್ಲದೆ ಕಳೆದೆರಡು ವರ್ಷಗಳಿಂದ ಅಜ್ಜಿ ಕತ್ತಲೆಯಲ್ಲಿ ಬದುಕುನ್ನು ಕಳೆಯುತ್ತಿದ್ದಾರೆ.

ಅಜ್ಜಿಯ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡ ಬಯಸುವವರು ನೆರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಹುದಾಗಿದೆ.

ಹೆಸರು:ಚೆಂದು ಪೂಜಾರ್ತಿ,ಬ್ಯಾಂಕ್ ಹೆಸರು:ಬ್ಯಾಂಕ್ ಆಫ್ ಬರೋಡಾ,ಖಾತೆ ಸಂಖ್ಯೆ-81920100008241, ಐಎಫ್‌ಸ್ಸಿ ಕೋಡ್-ಬಿಎಆರ್‌ಬಿ0ವಿಜೆಎನ್‌ಎಡಿಎ

ತನ್ನ ಯೌವನದ ವಯಸ್ಸಿನಲ್ಲಿಯೆ ಚೆಂದು ಅಜ್ಜಿ ಪತಿಯನ್ನು ಕಳೆದುಕೊಂಡಿದ್ದಾರೆ ಅಜ್ಜಿಗೆ ಮಕ್ಕಳಿಲ್ಲ. ಸರಿ ಸುಮಾರು 30 ವರ್ಷಗಳಿಂದ ಅಜ್ಜಿ ಒಂಟಿ ಆಗಿ ವಾಸಮಾಡುತ್ತಿದ್ದಾರೆ ಅವರ ವಾಸದ ಮನೆ ಸಂಪೂರ್ಣ ಹಾಳಾಗಿದೆ.ಅಜ್ಜಿಗೊಂದು ಸುಸಜ್ಜಿತವಾದ ಮನೆಯನ್ನು ಕಟ್ಟಿಕೊಡಲು ಸ್ಥಳೀಯರ ಸಹಕಾರದಿಂದ ನಿರ್ಧರಿಸಲಾಗಿದೆ. ದಾನಿಗಳು, ಸಂಘ ಸಂಸ್ಥೆಯವರು, ಸಮಾಜ ಭಾಂದವರು ಆದಷ್ಟು ನೆರವನ್ನು ನೀಡಬೇಕು.
-ಉದಯ ಜೋಗಿ,ನಾಡ ಗ್ರಾ.ಪಂ ಸದಸ್ಯರು

ಇಳಿ ವಯಸ್ಸಿನ ಚೆಂದು ಅಜ್ಜಿ ಪರಿಸ್ಥಿತಿ ಬಹಳಷ್ಟು ಕಷ್ಟಕ್ಕೆ ಸಿಲುಕಿದೆ.ವಾಸದ ಮನೆ ಭಾಗಶಃ ಹಾಳಾಗಿದೆ ಹೆಂಚುಗಳು ಜಾರಿ ಹೋಗಿದೆ.ಹಣವಂತರು,ದಾನಿಗಳು ಅಜ್ಜಿಯ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ಮಾಡಬೇಕು.

-ಸ್ಥಳೀಯ ಪಂಚಾಯತ್ ಆಸಕ್ತಿ ವಹಿಸಿ ಅಜ್ಜಿಯ ಮನೆ ನಿರ್ಮಾಣಕ್ಕೆ ಸಹಕಾರವನ್ನು ನೀಡಬೇಕು.ಪಂಚಾಯತ್ ನಿಂದ ಶೌಚಾಲಯದ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವ ಕೆಲಸಕ್ಕೆ ಕೂಡಲೆ ಮುಂದಾಗಬೇಕು.
-ಕಾಮೇಶ್ ದೇವಾಡಿಗ ತೆಂಕಬೈಲು,ಸ್ಥಳೀಯ ನಿವಾಸಿ

See also  ಉಡುಪಿ:ಕಂಬಳಕ್ಕೆ ಅನುಮತಿ ನೀಡುವ ಕುರಿತು ಚರ್ಚಿಸಿ ತೀರ್ಮಾನ: ಸಚಿವ ಸುನಿಲ್ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು