News Kannada
Wednesday, December 07 2022

ಉಡುಪಿ

ಶಿರೂರು: ಯಕ್ಷಗಾನ ಕಲಾವಿದನ ಮನೆಯ ಬೀಗ ಒಡೆದು ಚಿನ್ನಾಭರಣ ಕಳವುಗೈದ ಫೇಸ್ ಬುಕ್ ಸ್ನೇಹಿತ

Facebook friend breaks lock of Yakshagana artiste's house, steals gold ornaments
Photo Credit : News Kannada

ಶಿರೂರು:  ಫೇಸ್ ಬುಕ್ ಮೂಲಕ ಪರಿಚಯಗೊಂಡ ಸ್ನೇಹಿತನೊಬ್ಬ ಯಕ್ಷಗಾನ ಕಲಾವಿದನ ಮನೆಯ ಬೀಗ ಒಡೆದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಶಿರೂರು ಗ್ರಾಮದ ಮೇಲ್ಪೇಟೆ ನಿವಾಸಿ 34ವರ್ಷದ ಸಂತೋಷ ಮೊಗವೀರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಯಕ್ಷಗಾನ ಕಲಾವಿದರಾಗಿದ್ದು, ಚಿಕ್ಕ ಮೇಳ ಎಂಬ ಯಕ್ಷಗಾನವನ್ನು ನಡೆಸಿಕೊಂಡಿದ್ದರು. ಇವರು ಮೇಳದ ಸಾಮಾಗ್ರಿಗಳೊಂದಿಗೆ ಶಿರೂರು ಗ್ರಾಮದ ಶಿರೂರು ಮೇಲ್ಪೆಟೆ ಎಂಬಲ್ಲಿ ಸುಭಾಷ್ ಪ್ರಭು ಅವರ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ಇವರಿಗೆ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ‌ ಗುರುರಾಜ್ ಎಂಬವ ಪರಿಚಯವಾಗಿತ್ತು. ನ.9ರಂದು ಸಂತೋಷ್ ಅವರ ಕೊಠಡಿಗೆ ಬಂದು ಅವರೊಂದಿಗೆ ಉಳಿದುಕೊಂಡಿದ್ದನು. ನ. 12ರಂದು ಸಂತೋಷ್ ಅವರು ಚಿಕ್ಕ ಮೇಳ ಕಾರ್ಯಕ್ರಮದ ಪ್ರಯುಕ್ತ ಕುಂದಾಪುರ ತಾಲೂಕಿನ ಹೆರಿಕುದ್ರು ಎಂಬಲ್ಲಿಗೆ ಹೊರಟಿದ್ದರು.

ಅವರೊಂದಿಗೆ ಗುರುರಾಜ್ ಕೂಡ ಹೋಗಿದ್ದನು. ಈ ವೇಳೆ ಗುರುರಾಜ್ ಕಾರ್ಯಕ್ರಮ ವಿಡಿಯೋ ಮಾಡುವ ಉದ್ದೇಶದಿಂದ ಸಂತೋಷ್ ಅವರ ಮೊಬೈಲ್ ಪಡೆದಿದ್ದನು. ಬಳಿಕ ಅವರಿಗೆ ತಿಳಿಸದೇ ಶಿರೂರು ಮೇಲ್ಪೆಟೆಗೆ ಬಂದು ಸಂತೋಷ್ ವಾಸ್ಥವ್ಯವಿರುವ ಕೊಠಡಿಯ ಬೀಗವನ್ನು ಒಡೆದು ಬ್ಯಾಗ್ ನಲ್ಲಿಟ್ಟಿದ್ದ 12 ಗ್ರಾಂ  ತೂಕದ ಚಿನ್ನದ ಕೊರಳಿನ ಚೈನ್, 4 ಗ್ರಾಂ ತೂಕದ ಚಿನ್ನದ ಉಂಗುರ, ಕಾಣಿಕೆ ಡಬ್ಬಿಯಲ್ಲಿದ್ದ 10 ಸಾವಿರ ನಗದು, ಇನ್ನೊಂದು ಡಬ್ಬಿಯಲ್ಲಿದ್ದ 1 ಸಾವಿರ ರೂ. ನಗದು ಹಾಗೂ 14 ಸಾವಿರ ಮೌಲ್ಯದ ರಿಯಲ್ ಮೀ ಮೊಬೈಲ್ ಫೋನ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.

ಕಳವಾದ ಸೊತ್ತುಗಳ ಒಟ್ಟು ಮೌಲ್ಯ 85 ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

See also  ಉಡುಪಿ: ಶ್ರೀಗಣೇಶ ಕ್ರೆಡಿಟ್ ಸೊಸೈಟಿ ಮಹಾಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು