ಮುಚ್ಲುಕೋಡು: ಉಡುಪಿ ಸುತ್ತಮುತ್ತಲಿನ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಷಷ್ಠಿ ಪ್ರಯುಕ್ತ ಇಂದು ವಿಶೇಷ ಪೂಜೆ ನಡೆಯಿತು. ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಕುಕ್ಕಿಕಟ್ಟೆಯ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.
ಮುಚ್ಲಕೋಡು ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ದೇವರ ಪೂಜೆ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ರಥಸಂಪ್ರೋಕ್ಷಣೆ, ರಥಾರೋಹಣ ನಡೆಯಿತು.
ಸುಬ್ರಹ್ಮಣ್ಯ ದೇವರಿಗೆ ಆರು ಎಲೆಗಳಲ್ಲಿ ನೈವೇದ್ಯ ಹಾಗೂ ಅಷ್ಟ ದಿಕ್ಪಾಲಕರಿಗೆ ನೈವೇದ್ಯಗಳನ್ನು ಸಮರ್ಪಿಸಲಾಯಿತು. ಉಳಿದಂತೆ ತಾಂಗೋಡು, ಮಾಂಗೊಡು, ಮುಚ್ಲಕೋಡು ಸೇರಿದಂತೆ ಸುತ್ತಮುತ್ತಲ ಸುಬ್ರಹ್ಮಣ್ಯ, ವಾಸುಕಿ ದೇವಸ್ಥಾನಗಳಲ್ಲೂ ಷಷ್ಠಿ ಮಹೋತ್ಸವ ನಡೆಯಿತು.