ಉಳ್ಳೂರು: ಏಳು ಮಂದಿಯ ಗುಂಪೊಂದು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ದಂಪತಿಗೆ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ ಘಟನೆ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ತೆಂಕೊದ್ದು ಎಂಬಲ್ಲಿ ನಡೆದಿದೆ.
ತೆಂಕೊದ್ದು ನಿವಾಸಿ ಜಯರಾಮ ಶೆಟ್ಟಿ ಹಾಗೂ ಅವರ ಪತ್ನಿ ರುಕ್ಕಿಣಿ ಹಲ್ಲೆಗೊಳಗಾದ ದಂಪತಿ. ಇವರ ಮೇಲೆ ಉಳ್ಳೂರಿನ ಪ್ರಸಾದ ಶೆಟ್ಟಿ, ಕುಮಾರ್ ಶೆಟ್ಟಿ, ಸಂತೋಷ ಕೊಠಾರಿ ಹಾಗೂ ಇತರ 4 ನಾಲ್ವರು ಹಲ್ಲೆಗೈದಿದ್ದಾರೆ ಎನ್ನಲಾಗಿದೆ.
ಜಯರಾಮ ಶೆಟ್ಟಿ ಹಾಗೂ ಆರೋಪಿಗಳ ಮಧ್ಯೆ ವೈಮನಸ್ಸಿದ್ದು, ಇದೇ ವಿಚಾರದಲ್ಲಿ ಪ್ರಸಾದ್ ಶೆಟ್ಟಿ ಎಂಬಾತ ಇತರೆ ಆರು ಮಂದಿಯ ಜೊತೆಗೂಡಿ ಡಿ.4 ರಂದು ರಾತ್ರಿ ಜಯರಾಮ ಶೆಟ್ಟಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಜಯರಾಮ ಶೆಟ್ಟಿ ಬೊಬ್ಬೆ ಹಾಕಿದ್ದು, ಆಗ ಮನೆಯಲ್ಲಿ ಇದ್ದವರು ಓಡಿ ಬಂದಿದ್ದಾರೆ. ತಡೆಯಲು ಬಂದ ಜಯರಾಮ್ ಶೆಟ್ಟಿ ಅವರ ಪತ್ನಿಗೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.