ಉಡುಪಿ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ
ಉಡುಪಿ ಕಿನ್ನಿಮುಲ್ಕಿಯ ಕನ್ನರ್ಪಾಡಿ ಕಾಲನಿಯಲ್ಲಿ ನಡೆದಿದೆ.
ಕನ್ನರ್ಪಾಡಿ ನಿವಾಸಿ ವಿರೂಪಾಕ್ಷ ಕೆ. ತನ್ನ ಹೆಂಡತಿ ಮಕ್ಕಳೊಂದಿಗೆ ಡಿ.3ರಂದು ತಾಯಿಯ ಮನೆಯಾದ ಕುಂದಾಪುರಕ್ಕೆ ಹೋಗಿದ್ದರು. ಡಿ. 4ರಂದು ಮನೆಗೆ ಬಂದು ನೋಡಾಗ ಮನೆಯ ಎದುರಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಬೆಡ್ರೂಮಿನ ಕಪಾಟಿನಲ್ಲಿದ್ದ ಹವಳದ ಸರ, ಚಿನ್ನದ ಸರ, ಚಿನ್ನದ ಕಾಯಿನ್ ಸೇರಿದಂತೆ ಒಟ್ಟು 98 ಗ್ರಾಂ ಚಿನ್ನ ಹಾಗೂ ಬೆಳ್ಳಿಯ 2 ಲೋಟಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.