News Kannada
Saturday, January 28 2023

ಉಡುಪಿ

ಉಡುಪಿ: ಸೋಲು ಭೀತಿಯಿಂದ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಹೊರಿಸಿ ದೌರ್ಜನ್ಯ- ಮುತಾಲಿಕ್

Udupi: Fearing defeat, activists were falsely accused of committing atrocities: Muthalik
Photo Credit : News Kannada

ಉಡುಪಿ: ಹಿಂದುತ್ವಕ್ಕಾಗಿ ಮತ್ತು ಹಿಂದೂ‌ ಕಾರ್ಯಕರ್ತರ ರಕ್ಷಣೆಗಾಗಿ ಕಾರ್ಕಳದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಕಾರ್ಕಳದಲ್ಲಿ ನಾನು ಸ್ಪರ್ಧೆ ಮಾಡುತ್ತಿರುವುದು ಸಚಿವ ಸುನಿಲ್ ಕುಮಾರ್ ಗೆ ಸಹಿಸಿಕೊಳ್ಳಲು‌ ಆಗುತ್ತಿಲ್ಲ. ಆತನಿಗೆ ಸೋಲುವ ಭೀತಿ‌ ಕಾಡುತ್ತಿದೆ. ಅದಕ್ಕಾಗಿ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಗೂ ಅನಗತ್ಯ ಕಿರುಕುಳ‌ ನೀಡುವ ಕೆಲಸ ಆಗುತ್ತಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸುನಿಲ್ ಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದರು. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹೆದರಿಸುವ ಕೆಲಸ ಆಗುತ್ತಿದೆ. ಇದರ ಅರ್ಥ ಸುನಿಲ್ ಕುಮಾರ್ ಗೆ ಸೋಲು‌ವ ಭಯ ಶುರುವಾಗಿದೆ. ಆತ ಹಿಂದುತ್ವ, ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದರೆ, ಈಗ ಹೆದರುವ ಅವಶ್ಯಕತೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ‌ ಹೋರಾಟ ಬಿಜೆಪಿ‌ ವಿರುದ್ಧ ಅಲ್ಲ, ಭ್ರಷ್ಟಾಚಾರದ ವಿರುದ್ಧ. ಕಾರ್ಕಳ ಗೋ‌ವು ಹತ್ಯೆ ಹಾಗೂ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರವಾಗಿದೆ. ಸಚಿವ ಸುನಿಲ್ ಕುಮಾರ್ ಅತೀ ಭ್ರಷ್ಟ ಹಾಗೂ ದುರಹಂಕಾರಿ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಆತನ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂದು ಗುಡುಗಿದರು.

See also  ಉಡುಪಿ: ಅಪಹರಣಗೊಂಡ ಲಾರಿ ಚಾಲಕ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು