ಉಡುಪಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ಇದರ ವಾರ್ಷಿಕ ಸಮ್ಮೇಳನ-ಜ್ಞಾನ ಸಮ್ಮಿಲನವು ಇದೇ 23ರಂದು ಬೆಳಿಗ್ಗೆ 9.30ಕ್ಕೆ ಕಾಪು ಸಮೀಪದ ಪಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆಯಲಿದೆ ಎಂದು ಶಾಖಾ ಅಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಬರಹಗಾರ ಸಿಎ ಪಟ್ಟಭಿರಾಮನ್, ಕೇಂದ್ರೀಯ ಮಂಡಳಿಯ ಸದಸ್ಯ ಸಿಎ ಕೋತ ಶ್ರೀನಿವಾಸ್, ಪ್ರಾದೇಶಿಕ ಮಂಡಳಿಯ ಸದಸ್ಯೆ ಸಿಎ ಗೀತಾ ಎ.ಬಿ, ಕರ್ನಾಟಕ ರಾಜ್ಯ ಪರಿಶೋಧಕರ ಸಂಸ್ಥೆಯ ಅಧ್ಯಕ್ಷ ಸಿಎ ಪ್ರಮೋದ್ ಶ್ರೀಹರಿ ಸಂಪನ್ಮೂಲ ವ್ಯಕ್ಯಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಖಾ ಉಪಾಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್, ಕಾರ್ಯದರ್ಶಿ ಸಿಎ ಮಹಿಂದ್ರಾ ಶೆಣೈ, ಕೋಶಾಧಿಕಾರಿ ಸಿಎ ಅರ್ಚನಾ ಮಯ್ಯ, ಸಿಎ ಮಲ್ಲೇಶ್ ಕುಮಾರ್, ಸಿಎ ವರದರಾಜ್ ಪೈ ಉಪಸ್ಥಿತರಿದ್ದರು.