ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಮುಷ್ಟಿ ಕಾಣಿಕೆ ಸಮರ್ಪಿಸಲಾಯಿತು.
ಮುಷ್ಟಿ ಕಾಣಿಕೆ ಸಮರ್ಪಿಸಿ ಆಶೀರ್ವಚನ ನೀಡಿದ ಉಡುಪಿ ಸೋದೆಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರು, ಸಿದ್ಧಿವಿನಾಯಕ ದೇಗುಲವು ಗ್ರಾಮಾಧಿಪತಿಯಾಗಿ ಆರಾಧ್ಯ, ಅತ್ಯಂತ ಪ್ರಾಚೀನ, ಕಾರಣಿಕ ಪ್ರಸಿದ್ಧಿಯನ್ನು ಹೊಂದಿದೆ.
ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಮಾಗಣೆಯ ಪ್ರತಿಯೊಂದು ಮನೆಯವರೂ ಕೈ ಜೋಡಿಸಬೇಕು. ಸಮರ್ಪಣಾ ಭಾವದ ಹತ್ತು ಮುಷ್ಟಿಗಳು ಜತೆ ಸೇರಿದಾಗ ದೇವರ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಕಾರಣವಾಗಲಿದೆ. ದೇವಸ್ಥಾನವು ಶೀಘ್ರದಲ್ಲಿಯೇ ಪೂರ್ಣಗೊಂಡು ವೈಭವವನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಎ. ರಾವ್, ಕಾರ್ಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕಿದಿಯೂರು, ವ್ಯವಸ್ಥಾಪನ ಸಮಿತಿ , ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ತಂತ್ರಿಗಳು, ಅರ್ಚಕರು, ಗಣ್ಯರು, ಮಟ್ಟು ಉದ್ಯಾವರ, ನಿಡಂಬೂರು ಮಾಗನೆಯ ಕುತ್ಪಾಡಿ, ಕಡೆಕಾರು, ಕಿದಿಯೂರು, ಬಲ್ಪಾಡಿ, ಬನ್ನಂಜೆ, ಕಪ್ಪೆಟ್ಟು, ಕನ್ನರ್ಪಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.