ಕುಂದಾಪುರ: ಸಿದ್ದಾಪುರ ಗ್ರಾಮದ ಮಾರ್ಡಿ ರಾಘವೇಂದ್ರ ಮೋಗವೀರ ಎಂಬ ಯುವಕ ಕಳೆದ 2 ದಶಕಗಳಿಂದ ತರಕಾರಿ ಹಣ್ಣುಗಿಳಿಂದ ವಿವಿಧ ಕಲಾಕೃತಿಗಳನ್ನು ರಚಿಸುವಲ್ಲಿ ತೊಡಗಿಕೊಂಡಿದ್ದಾರೆ.
ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸುವಲ್ಲಿ ನಿಪುಣತೆಯನ್ನು ಹೊಂದಿರುವ ರಾಘವೇಂದ್ರ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ. ತರಕಾರಿ ಮತ್ತು ಹಣ್ಣುಗಳಲ್ಲಿ ರಚಿಸಿರುವ ಕಲಾಕೃತಿಗಳು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿರುವ ಕಾಂತಾರ ಕಲಾಕೃತಿ ಕಣ್ಮನ ಸೆಳೆಯುವಂತೆ ಇದೆ.