ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಇಂದು ನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ಹಲವು ಸಮಯಗಳಿಂದ ಉಡುಪಿ ನಗರದಲ್ಲಿ ನೆಲೆಕಂಡಿರುವ ಭಿಕ್ಷುಕರನ್ನು ವಶಕ್ಕೆ ಪಡೆದರು.
ಬಳಿಕ ಅವರೆಲ್ಲರ ಮನವೊಲಿಸಿ, ಸುಮಾರು ನಲವತ್ತು ಮಹಿಳೆಯರು ಮತ್ತು ಮಕ್ಕಳನ್ನು ರೈಲಿನ ಮೂಲಕ ಅವರ ಊರಾದ ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು.
ರಕ್ಷಿಸಲ್ಪಟ್ಟ ಭಿಕ್ಷುಕರು ಉಡುಪಿಯ ಕೃಷ್ಣ ಮಠ ಹಾಗೂ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ನಿರತರಾಗಿದ್ದರು. ಇದೀಗ ಅವರನ್ನು ವಶಕ್ಕೆ ಪಡೆದು, ಅವರ ಊರಾದ ರಾಜಸ್ಥಾನಕ್ಕೆ ರವಾನಿಸಲಾಗಿದೆ.