ಕಾರ್ಕಳ: ಕಾರ್ಕಳ ಕ್ಷೇತ್ರದಲ್ಲಿ ಸರಣಿ ರೂಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಯಾನ ರೀತಿಯಲ್ಲಿ ಸೇರ್ಪಡೆಗಳು ಆಗಲಿವೆ. ಅಪಪ್ರಚಾರಗಳು ನಮಗೆ ಹೊಸತೇನಲ್ಲ. ಅಭಿವೃದ್ಧಿ ಮುಂದೆ ಅದ್ಯಾವುದು ನಡೆಯುವುದೂ ಇಲ್ಲ ಎಂದು ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಪಳ್ಳಿ ನಿಂಜೂರು ಭಾಗದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.
ಅಪಪ್ರಚಾರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರಿಂದ ಅವರಿಗೆ ಲಾಭವೂ ಆಗುವುದಿಲ್ಲ. ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಮಾತನಾಡಿ, ಮೋದಿ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರಾಗಿರುವುದೇ ನಮ್ಮೆಲ್ಲರ ಪುಣ್ಯ ಎಂದರು.
ಬಿಜೆಪಿ ಕ್ಷೇತ್ರಾಾದ್ಯಕ್ಷ ಮಹಾವೀರ ಹೆಗ್ಡೆ, ಬೋಳ ಶ್ರೀನಿವಾಸ ಕಾಮತ್, ಬಿಜೆಪಿ ಪ್ರ. ಕಾರ್ಯದರ್ಶಿ ಜಯರಾಮ ಸಾಲ್ಯಾನ್, ಜಿಲ್ಲಾ ಪದಾಧಿಕಾರಿ ರವೀಂದ್ರ ಮಡಿವಾಳ, ಸುಮಿತ್ ಬೈಲೂರು, ಆಂತೋನಿ ಡಿಸೋಜಾ ಉಪಸ್ಥಿತರಿದ್ದರು.
ಸಂತೋಷ್ ಶೆಟ್ಟಿ . ಜೆನೆಟ್ ಮಾರ್ಟಿಸ್, ದಿಲೀಪ್ ಪಟೇಲ್, ಗೋವಿಂದ ಜೋಗಿ, ಮನ್ಮಥ ಶೆಟ್ಟಿ, ಮಲ್ಲಿಕಾ ಬಿಜೆಪಿ ಸೇರಿದವರು. ಶ್ರೀಕಾಂತ್ ನಿರ್ವಹಿಸಿದರು.