ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ ಪ್ರಜಾಧ್ವನಿ ಯಾತ್ರೆ ಸಮಾವೇಶ ಮೆರವಣಿಗೆಗೆ ನಗರದ ಲಯನ್ಸ್ ಸರ್ಕಲ್ ನಲ್ಲಿ ಇಂದು ಚಾಲನೆ ನೀಡಲಾಯಿತು.
ಲಯನ್ಸ್ ಸರ್ಕಲ್ ನಿಂದ ಆರಂಭಗೊಂಡ ಮೆರವಣಿಗೆ ಮಿಷನ್ ಕಂಪೌಂಡ್ ಮೈದಾನದವರೆಗೆ ಸಾಗಿಬಂತು. ಮೆರವಣಿಗೆಯಲ್ಲಿ ಕಲ್ಲಡ್ಕ ಕೊಂಬೆ, ಚೆಂಡೆ, ಯಕ್ಷಗಾನ ವೇಷಗಳು, ಕುದುರೆ, ಕೀಲು ಕುದುರೆ, ತಲೀಮು, ಕೊಂಬು, ಕಹಳೆ, ಬೆಳ್ಳಿ ಕವಚದ ರಥ ಸಹಿತ ಹಲವಾರು ರೀತಿಯ ವೇಷಭೂಷಣಗಳು ಗಮನ ಸೆಳೆಯಿತು.
ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್, ಎನ್ ಎಸ್ ಯುಐ ಧ್ವಜಗಳು ರಾರಾಜಿಸುತ್ತಿದ್ದವು. ಸುಡುಬಿಸಿಲನ್ನು ಲೆಕ್ಕಿಸದೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.