ಕಿದಿಯೂರು: ಪಡುಕೆರೆ ಇದರ 54ನೇ ವಾರ್ಷಿಕೋತ್ಸವ ಶ್ರೀ ಬಾಲಾಂಜನೇಯ ಪೂಜಾ ಮಂದಿರ ಕಿದಿಯೂರು, ಪಡುಕೆರೆ ಇದರ 54ನೇ ವಾರ್ಷಿಕೋತ್ಸವ ಹಾಗೂ ನೂತನ ವೇದಿಕೆಯ ಉದ್ಘಾಟನಾ ಸಮಾರಂಭವು ಇಂದು ಸಂಘದ ಆವರಣದಲ್ಲಿ ನಡೆಯಿತು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರುಗೊಳಿಸಿದ 5 ಲಕ್ಷ ರೂಪಾಯಿ ಅನುದಾನ ಸೇರಿದಂತೆ ಒಟ್ಟು 7.5 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ನೂತನ ವೇದಿಕೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿ, ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ, ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.