ಕಟಪಾಡಿ: ಮದುವೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ ಮಾತ್ರ ಇರುವುದಿಲ್ಲ. ಅದರ ಜೊತೆಗೆ ಏನಾದರೊಂದು ಹೊಸತನ ಇರುತ್ತದೆ. ಅದರಂತೆ ಕಟಪಾಡಿಯಲ್ಲಿ ಮದುವೆ ದಿನದಂದು ನವ ಜೋಡಿಯೊಂದು ಜೆಸಿಬಿಯಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ನೆರೆದಿದ್ದವರ ಗಮನ ಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ಮದುವೆ ದಿನ, ಮದುವೆ ಮಂಟಪಕ್ಕೆ ನವ ಜೋಡಿ ವಿಭಿನ್ನವಾಗಿ ಆಗಮಿಸಿ ಬಂದ ಅತಿಥಿಗಳ ಗಮನ ಸೆಳೆಯುತ್ತಾರೆ. ಅದರಂತೆ ಕಟಪಾಡಿ ವಿಶ್ವನಾಥ ಕ್ಷೇತ್ರದ ನಾರಾಯಣ ಸಭಾಭವನದಲ್ಲಿ ನಡೆದ ಮದುವೆಯಲ್ಲಿ ನವ ಜೋಡಿ ರಾಜೇಶ್ ಹಾಗೂ ಗೀತಾ ಜೆಸಿಬಿಯಲ್ಲಿ ಎಂಟ್ರಿ ಕೊಟ್ಟು ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.
ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿರುವ ರಾಜೇಶ್, ತನ್ನ ಮದುವೆಯಲ್ಲಿ ಹೊಸತನ ಇರಬೇಕು ಅಂತ ವಿಶಿಷ್ಟ ಎಂಟ್ರಿಯ ಪ್ಲಾನ್ ಹಾಕಿಕೊಂಡು, ಜೆಸಿಬಿಯಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಾಜೇಶ್ ಡಿಫರೆಂಟ್ ಎಂಟ್ರಿ ಐಡಿಯಾಗೆ ಗೀತಾ ಕೂಡ ಸಹಕಾರ ನೀಡಿದ್ದಾರೆ. ನವ ಜೋಡಿ ಜೆಸಿಬಿಯಲ್ಲಿ ಆಗಮಿಸುವ ವಿಡಿಯೋ ಸದ್ಯ ಕರಾವಳಿಯಲ್ಲಿ ಭಾರೀ ವೈರಲ್ ಆಗುತ್ತಿದೆ.