ಕುಂದಾಪುರ: ಕನ್ನಡ ಶಾಲೆಗಳು ಉಳಿಯಬೇಕಾದರೆ ಹಳೆ ವಿದ್ಯಾರ್ಥಿಗಳ ಕೊಡುಗೆ ಮಹತ್ವವಾದದ್ದು, ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸರಕಾರಿ ಶಾಲೆಯ ಮಕ್ಕಳಿಗೆ ಕನ್ನಡ ಶಿಕ್ಷಣದ ಜತೆಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣದ ಅಗತ್ಯವಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಗೆ ಬ್ರ ಹ್ಮಾವರ -ತಲ್ಲೂರು ರಿಯಲ್ ಗ್ರೂಪ್ ಆಫ್ ಕಂಪೆನಿ ಕೊಡುಗೆ ನೀಡಿದ 1.50 ಲಕ್ಷ.ರೂ ಮೌಲ್ಯದ ಸುಸಜ್ಜಿತವಾದ ಕಂಪ್ಯೂಟರ್ ತರಗತಿ ಕೋಣೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದುಡಿಮೆಯ ಹಣದಲ್ಲಿ ಒಂದಂಶವನ್ನು ದಾನ ಧರ್ಮ ಮಾಡುವುದರಿಂದ ಕಷ್ಟದಲ್ಲಿರುವವರಿಗೆ ಉಪಕಾರವಾಗುತ್ತದೆ ಯುವ ಮನಸುಗಳು ಸಾಮಾಜಿಕ ಮನೋಭಾವದಿಂದ ಇಂದಿನ ದಿನಗಳಲ್ಲಿ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು, ರಿಯಲ್ ಗ್ರೂಪ್ ಆಪ್ ಕಂಪೆನಿ ಮಾಲೀಕರಾದ ರಾಘವೇಂದ್ರ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಸದಾಶಿವ ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ, ರಾಜೀವ ಶೆಟ್ಟಿ, ವಿರಾಜ ಶೆಟ್ಟಿ, ವೈಭವ ಅರಾಟೆ, ರಮೇಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ಆಚಾರ್ಯ, ಕ್ಷೇತ್ರ ಸಮನ್ವಯಾಧಿಕಾರಿ ಕರುಣಾಕರ ಶೆಟ್ಟಿ, ಶಿಕ್ಷಣ ಸಂಯೋಜಕ ಯೋಗೀಶ್, ನಿವೃತ್ತ ಪಶು ವೈದ್ಯಾಧಿಕಾರಿ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಾಜೇಶ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಶ್ರೀದೇವಿ, ರೋಹಿಣಿ, ನಾಗರತ್ನ ಸಹರಿಸಿದರು. ದೈಹಿಕ ಶಿಕ್ಷಕ ಸಂತೋಷ ಖಾರ್ವಿ ನಿರೂಪಿಸಿದರು. ಲೀಲಾ ಜಿ ವಂದಿಸಿದರು. ಹಳೆ ವಿದ್ಯಾರ್ಥಿ ವೈಭವ್ ಅರಾಟೆ ಪ್ರೊಜೆಕ್ಟರ್ ಕೊಡುಗೆ ನೀಡಿದರು.