ಕುಂದಾಪುರ: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಂತ್ತಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರ ಕಳೆದ 3 ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದೆ ಮರಳಿ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕ್ಕೆನ್ನುವ ಕಾಂಗ್ರೆಸ್ ಪಕ್ಷದ ಹೋರಾಟ ಸಾಗುತ್ತಲೆ ಇದ್ದು 2023 ರ ಚುನಾವಣೆ ಫಲಿತಾಂಶದ ಮೇಲೆ ಲೆಕ್ಕಾಚಾರಗಳು ಹೊರ ಬೀಳುವ ಸಾಧ್ಯತೆ ಇದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದದಲ್ಲಿ ಹೆಚ್ಚು ಕಮ್ಮಿ 5 ದಶಕಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಹಣಾಹಣಿ ಏರ್ಪಟ್ಟಿದೆ ಮೂರನೇ ಪಕ್ಷ ಆಟಕ್ಕೂ ಉಂಟು ಲೆಕ್ಕಕ್ಕೆ ಇಲ್ಲಾ ಎನ್ನುವಂತ ಪರಿಸ್ಥಿತಿ ಇದೆ. ಕುಂದಾಪುರ ವಿಧಾನ ಸಭಾ ಕ್ಷೇತ್ರದ ಚುನಾವಣೆ ರಂಗದಲ್ಲಿ ಕಾಂಗ್ರೆಸ್ ಮತು ಬಿಜೆಪಿ ಪಕ್ಷದ ಕಾರ್ಯಕರ್ತರದ್ದೆ ಹವಾ.
ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು 1983, 1985, 1987, 1994 ರಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 5ನೇ ಬಾರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಎದುರು ಕೆ.ಪ್ರಕಾಶಚಂದ್ರ ಶೆಟ್ಟಿ ಅವರು ಸೋತ ನಂತರ ಶಾಸಕರಾಗಿ ಮತ್ತೆ ಆಯ್ಕೆ ಆಗಿಲ್ಲ.
ನಂತರ ಅವರು ನಿರಂತರವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗುವುದರ ಮುಖೇನ ಸಭಾಪತಿ ಹುದ್ದೆಯನ್ನು ಅಲಂಕರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಸಲ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಜುನಾಥ ಭಂಡಾರಿ ಅವರಿಗೆ ಅವಕಾಶವನ್ನು ಬಿಟ್ಟು ಕೊಡುವುದರ ಮೂಲಕ ಕೆಪಿಸಿಸಿ ಸದಸ್ಯತ್ವಕ್ಕೂ ರಾಜಿನಾಮೆಯನ್ನು ನೀಡಿದ್ದ ಕೆ.ಪ್ರತಾಪಚಂದ್ರ ಶೆಟ್ಟಿ ಈ ಸಲ ಚುನಾವಣೆಯಲ್ಲಿ ನಿಲ್ಲುವುದು ಡೌಟ್.
ತನ್ನ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷದ ಬೆಂಬಲದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 1994 ರಿಂದ 2018 ರ ತನಕ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರವಾಗಿ 5 ಬಾರಿ ಶಾಸಕರಾಗಿ ಆಯ್ಕೆ ಆಗುವ ಮೂಲಕ ಸೋಲಿಲ್ಲದ ಸರದಾರನಾಗಿ ಗೆಲುವು ಪಡೆಯುತ್ತಾ ಬಂದಿದ್ದಾರೆ. ಸಚಿವ ಸ್ಥಾನ ಗೊಂದಲದಿಂದ ಮಾತೃ ಪಕ್ಷವಾದ ಬಿಜೆಪಿ ಮೇಲೆ ಮುನಿಸಿಕೊಂಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 2013 ರಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಯಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಆಯ್ಕೆ ಆಗಿದ್ದು ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ಪ್ರಮುಖ ನಾಯಕರ ಮನವೊಲಿಕೆಯಿಂದ ಬಿಜೆಪಿ ಪಕ್ಷವನ್ನು ಮತ್ತೆ ಸೇರ್ಪಡೆಗೊಂಡ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದ ರಾಕೇಶ್ ಮಲ್ಲಿ ಅವರನ್ನು ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು.
ಒಂದು ಕಾಲದಲ್ಲಿ ಕಾಂಗ್ರೆಸ್‍ಗೆ ಭದ್ರ ನೆಲೆಯನ್ನು ಕೊಟ್ಟಿದ್ದ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಹಿಡಿತವನ್ನು ಸಾಧಿಸಿದೆ.
ಕುಂದಾಪುರದ ಮೋದಿ ಎಂದೆ ಕರೆಯಲ್ಪಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸೂಕ್ತವಾದ ಎದುರಾಳಿಗಳೆ ಇಲ್ಲಾ ಎನ್ನುವಂತ ಪರಿಸ್ಥಿತಿ ಇದ್ದು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಬಿಜೆಪಿ ಪಕ್ಷ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಜನ ಬೆಂಬಲ ನೀಡಿದರು ಅಚ್ಚರಿ ಇಲ್ಲಾ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣೆಗೆ ನಿಲ್ಲದಿರಲು ಸ್ವಯಂ ನಿವೃತ್ತಿ ಘೋಷಿಸಿದರೆ ಮಾತ್ರ ಬಿಜೆಪಿ ಪಕ್ಷದಲ್ಲಿ ಕಿರಣ್ ಕೊಡ್ಗಿ, ಜಯಪ್ರಕಾಶ್ ಹೆಗ್ಡೆ ,ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದ ಕಟ್ಟೆಗೆ ಟಿಕೆಟ್ ದೊರಕುವ ಸಾಧ್ಯತೆಗಳಿದ್ದು ಬೇರೊಂದು ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರು ಅಚ್ಚರಿ ಇಲ್ಲ.
ತನ್ನ ಸ್ವಂತ ಬಲದ ಮೇಲೆ ಕುಂದಾಪುರ ಕ್ಷೇತ್ರದ ಮೇಲೆ ಹಿಡಿತವನ್ನು ಸಾಧಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವಯಸ್ಸಿನ ಕಾರಣದಿಂದ ಕೆ.ಪ್ರತಾಪಚಂದ್ರ ಶೆಟ್ಟಿ ಅವರಂತೆ ಚುನಾವಣೆಗೆ ನಿವೃತ್ತಿ ಪಡೆದುಕೊಂಡರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೋದಿ ಮತ್ತು ಹಿಂದುತ್ವ ಆಧಾರದ ಮೇಲೆ ಚುನಾವಣೆ ಕಣದಲ್ಲಿ ಹೋರಾಟ ಮಾಡಬೇಕಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಬಹುದು.
ಕೆ ಪ್ರತಾಪಚಂದ್ರ ಶೆಟ್ಟಿ ಅವರು ಕೆಪಿಸಿಸಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರಿಂದ ಅವರು ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಸ್ಪರ್ಧಿಸುವುದು ಕಷ್ಟ ಸಾಧ್ಯ ಕೆ.ಪ್ರಕಾಶಚಂದ್ರ ಶೆಟ್ಟಿ ಅವರು ಟಿಕೆಟ್‍ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ ಮಾಡದಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಕಾಂಗ್ರೆಸ್ ನಿಂದ ಟಿಕೆಟ್‍ಗಾಗಿ ದಿನೇಶ್ ಶೆಟ್ಟಿ ಮೊಳಹಳ್ಳಿ ಮತ್ತು ಅಶೋಕ ಪೂಜಾರಿ ಬಿಜಾಡಿ ಅವರು ಆಕಾಂಕ್ಷಿಗಳಾಗಿದ್ದು ಈ ಗಾಗಲೇ ಪಕ್ಷ ಚಟುವಟಿಕೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
2023 ರ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣೆಯಲ್ಲಿ ನಿಂತು ಗೆದ್ದರೆ 6 ನೇ ಬಾರಿ ಗೆಲುವನ್ನು ಸಾಧಿಸಿದಂತೆ ಆಗುತ್ತದೆ ಚುನಾವಣೆಯಲ್ಲಿ ಸೋತರೆ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ.
ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸತತ 5ನೇ ಬಾರಿಗೆ ಗೆಲುವನ್ನು ಪಡೆಯಲಿದೆ, ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಭಿವೃದ್ದಿ ಕೆಲಸಗಳಿಗೆ ಜನ ಬಿಜೆಪಿಗೆ ಮತ ನೀಡಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ.
-ಶಂಕರ ಅಂಕದಕಟ್ಟೆ,ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ
ಬಿಜೆಪಿ ಪಕ್ಷದ ವಿರುದ್ದ ವಿರುವ ಆಡಳಿತ ವಿರೋಧಿ ಅಲೆ ಮತ್ತು ಬೆಲೆ ಏರಿಕೆಯಿಂದ ಬೇಸತ್ತ ಜನರು ಭ್ರಷ್ಟ ಬಿಜೆಪಿ ಪಕ್ಷವನ್ನು ಸೋಲಿಸಲಿದ್ದಾರೆ. ಅಭಿವೃದ್ಧಿ ಶೂನ್ಯ ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ,ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇತಿಹಾಸ ಮರುಕಳಿಸಲಿದೆ.
-ವಿಕಾಸ್ ಹೆಗ್ಡೆ,ಕಾಂಗ್ರೆಸ್ ಪಕ್ಷದ ಮುಖಂಡರು