News Kannada
Sunday, October 01 2023
ಉಡುಪಿ

ವರಂಗ: ಕನ್ನಡ ಸಾಹಿತ್ಯದ ಮೊದಲ ಕೇಂದ್ರ

ಸಾಹಿತ್ಯ ಸಮ್ಮೇಳನ
Photo Credit : News Kannada

ಕಾರ್ಕಳ: ಕಾರ್ಕಳದ ಸಾಹಿತ್ಯ ಪರಂಪರೆಗೆ ದಕ್ಷಿಣ ಭಾರತದ ಏಕೈಕ, ಅತ್ಯಂತ ಪ್ರಾಚೀನ ಜೈನರ ಗುರುಪೀಠವೆನಿಸಿದ ಅವಿಭಜಿತ ಕಾರ್ಕಳದ ವರಂಗವೇ ಬುನಾದಿ ಹಾಕಿದೆ ಎಂದು ಲೇಖಕಿ ಎಂದು ಲೇಖಕಿ ಯು.ಬಿ ರಾಜಲಕ್ಷ್ಮಿ ಹೇಳಿದರು.

ಅವರು ಕಾರ್ಕಳ ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಅಂಡಾರು ರುಕ್ಮಿಣಿ ಕಿಣಿ ಸಭಾಂಗಣದ ಕುಂಬಳೆ ಪ್ರೋ. ಎಂ ರಾಮ ಚಂದ್ರ ವೇದಿಕೆಯಲ್ಲಿ ನಡೆದ ತಾಲೂಕಿನ ಹದಿನೆಂಟನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಕ್ರಿ.ಪೂ. ಒಂದನೆಯ ಶತಮಾನದಲ್ಲಿ ವಿವಿಧ ಶಾಸ್ತ್ರಾರ್ಥಗಳಲ್ಲಿ ದಿಗ್ಗಜರೆನಿಸಿದ್ದ ಚತುರಮತಿ ಜಿನಮುನಿಗಳಿದ್ದರು ಲೇಖಕಿ ಕನ್ನಡದ ಮೊತ್ತಮೊದಲ ತಾಮ್ರ ಶಾಸನ ದೊರೆತದ್ದೂ ಕಾರ್ಕಳದ ಬೆಳ್ಳಣ್ಣಿನಲ್ಲಿ ಎಂಬುದೂ ಈ ಊರಿನ ಹೆಗ್ಗಳಿಕೆ. ಕಾರ್ಕಳದ ಅರಸರು ತಮ್ಮ ಆಕೆಯ ಆರಂಭದಿಂದಲೇ ಇದ್ಯೆ ಮತ್ತು ಕನ್ನಡ ಸಾಹಿತ್ಯಕ್ಕೆ ನಿರಂತರ ಪ್ರೋತ್ಸಾಹ ನೀಡಿದ್ದರು ಎಂಬುದಕ್ಕೆ ಕಾರ್ಕಳದ ಹಿರಿಯಂಗಡಿಯ ದಾನಸಾಲೆಯೇ ಸಾಕ್ಷಿ. ಇವೆಲ್ಲವೂ ಪ್ರಾಚೀನ ಕಾರ್ಕಳದ ಸಾಹಿತ್ಯ ವೈಭವಕ್ಕೆ ಕೈದೀವಿಗೆಯೆನಿಸಿದ ವೈಶಿಷ್ಟ್ಯಗಳಾಗಿವೆ ಎಂದರು.

ಕನ್ನಡ ಪ್ರೀತಿಗೆ ಮೊದಲ ಆದ್ಯತೆ ನೀಡಿ ಅನ್ನದ ಭಾಷೆಯಾಗಬೇಕಾಗಿದೆ. ಕೇಂದ್ರದ ಹೊಸ ಶಿಕ್ಷಣ ನೀತಿಗಳೆಲ್ಲ ಕನ್ನಡದಲ್ಲು ಅನುಷ್ಠಾನಗೊಂಡರೆ ಕನ್ನಡವೂ ಯುವ ಪ್ರತಿಭೆಗಳ ಆಕರ್ಷಣೆ ಗಳಿಸಿ ಅನ್ನದ ಭಾಷೆಯಾಗಬಹುದು ಎಂದರು .

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸುನೀಲ್ ಕುಮಾರ್ ಮಾತನಾಡಿ ವಿಧಾನ ಸಭಾ ಅಧಿವೇಶನದಲ್ಲಿ ಕನ್ನಡದ ಬಾಷೆಗೆ ಉತ್ತೆಜನ ನೀಡುವ ಕನ್ನಡ ಭಾಷಾ ವಿಧೇಯಕ ಮಂಡನೆ ಮಾಡುವುದಾಗಿ ಹೇಳಿದರು . ಸ್ಥಳೀಯರು ಹೆಚ್ಚಾಗಿ ಕನ್ನಡ ಭಾಷೆಗೆ ಒತ್ತು ನೀಡುವ ಮೂಲಕ ಕನ್ನಡ ವನ್ನು ಬೆಳೆಸಬೇಕು ಎಂದು ಜನತೆಗೆ ಕರೆ ನೀಡಿದರು.

ಕಸಾಪ ಜಿಲ್ಲಾದ್ಯಕ್ಷ ನೀಲಾವರ ಸುರೇಂದ್ರ ಅಡಿಗ , ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ , ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ , ಲೇಖಕ ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ವಿವಿಧ ಸಾಹಿತ್ಯ ಸಮ್ಮೇಳನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ ಕ.ಸಾ.ಪ ಅದ್ಯಕ್ಷ ಪ್ರಭಾಕರ ಕೊಂಡಳ್ಳಿ ದ್ವಜರೋಹಣ ನೆರವೇರಿಸಿದರು . ಹಿರಿಯ ವಕೀಲ ಎಂ ಕೆ ವಿಜಯಕುಮಾರ್ ಸಮ್ಮೇಳನ ಮೆರವಣಿಗೆ ಚಾಲನೆ ನೀಡಿದರು . ಅನಂತ ಶಯನದಿಂದ ಹೊರಟ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಎಸ್ ವಿ ಟಿ ವಿದ್ಯಾ ಸಂಸ್ಥೆ ಗಳ ವರೆಗೆ ಅಂಡಾರು ರುಕ್ಮಿಣಿ ಕಿಣಿ ಸಭಾಂಗಣದ ಕುಂಬಳೆ ಪ್ರೋ! ಎಂ ರಾಮ ಚಂದ್ರ ವೇದಿಕೆ ವರೆಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆ ಗೆ ಮೆರುಗು ನೀಡಿದರು.

ವಿಚಾರಗೋಷ್ಠಿ:
ಭಾವನೆಗಳಿಗೆ ಹೆಚ್ಚಿನ ಒತ್ತು ಕೊಡುವ ಜೊತೆಗೆ ಸುದ್ದಿಯನ್ನು ನಾವು ಕಲಿಯಬೇಕು ಎಂದು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದರು ಅವರು ಲೇಖಕಿ ಯು ಬಿ ರಾಜಲಕ್ಷ್ಮಿ ನೇತೃತ್ವದಲ್ಲಿ ನಡೆದ ಕಾರ್ಕಳ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಅಂತರಂಗದ ಶ್ರೀಮಂತಿಕೆಯೆ ಶ್ರೇಷ್ಠವಾಗಿದೆ ಅದಕ್ಕೆ ಬಡತನವಿಲ್ಲ ಎಂದರು‌. ಸಭೆಯಲ್ಲಿ ಸಮಿತಿಯ ಸಂಚಾಲಕ ನಿತ್ಯಾನಂದ ಪೈ , ಎಸ್ .ವಿ.ಟಿ ಶಿಕ್ಷಣಸಂಸ್ಥೆಗಳ ಗೌರವಾದ್ಯಕ್ಷ ಕೆ.ಪಿ ಶೆಣೈ ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ , ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಉಪಸ್ಥಿತರಿದ್ದರು.

See also  ಉಡುಪಿ ಜಿಲ್ಲೆ ದೇಶದಲ್ಲೇ ಪ್ರಸಿದ್ದ ಪ್ರವಾಸಿ ತಾಣವಾಗಲಿ- ಶಾಸಕ ರಘುಪತಿ ಭಟ್

ವನಜಾಕ್ಷಿ ಜನ್ಮಶತಮಾನೋತ್ಸವದ ಅಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಕರಾದ ಸೆವೆರಿನ್ ಡಿಸೋಜ , ಕಮಲಾಬಾಯಿ‌,  ಎಂ.ಸಿ‌.ಅಚಾರ್, ಸಂಜೀವ ದೇವಾಡಿಗ , ಸೂಡ ಸದಾನಂದ ಶೆಣೈಯವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭ :

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಸಹಕಾರ ರತ್ನ ಡಾ|| ಎಂ.ಎನ್. ರಾಜೇಂದ್ರ ಕುಮಾರ್ ಸನ್ಮಾನ ಸ್ವೀಕರಿಸುವುದರಿಂದ ಜವಾಬ್ದಾರಿ ಯು ಹೆಚ್ಚುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳ್ಳಿ ಎಂದು ಹೇಳಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ. ಪದ್ಮನಾಭ ಗೌಡ ಸಮಾರೋಪ ಭಾಷಣ ಸಮಯ ಪಾಲನೆಯಲ್ಲಿ ಕಾರ್ಕಳ ಸಾಹಿತ್ಯ ಸಮ್ಮೇಳನ ಮೊದಲ ಪ್ರಾಶಸ್ತ್ಯ ನೀಡಿದೆ . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನ್ನಡ ವನ್ನು ಕಡೆಗಣಿಸುತ್ತಿರುವುದು ಖೇದಕರವಾಗಿದೆ
ವಿದೇಶಗಳಿಗೆ ಕಳುಹಿಸಿ ಕನ್ನಡವನ್ನು ಮರೆಯುವ ಪರಿಸ್ಥಿತಿ ಯಾಗುತ್ತಿದೆ. ರಾಜ್ಯದಲ್ಲಿ ಶೇ. 3.6 ಜನರು ಕನ್ನಡವನ್ನು ಒಪ್ಪಿಕೊಂಡಿದ್ದು , ದೇಶದಲ್ಲಿ ಮಾತನಾಡುವ ಭಾಷೆಗಳಲ್ಲಿ 9ನೆ ಸ್ಥಾನದಲ್ಲಿದೆ ಎಂದರು .

ಶಿಕ್ಷಣ ಮತ್ತು ಸಾಹಿತ್ಯ ಒಂದೆ ಭಾಷೆಯ ಎರಡು ಮುಖಗಳಿದ್ದಂತೆ . ಕೇವಲ ರಾಜ್ಯೋತ್ಸವದಂದು ಒಂದೆ ದಿನಕ್ಕೆ ಸಾಹಿತ್ಯ ಕ್ಕೆ ಒತ್ತು ಕೊಡುತ್ತೇವೆ .ನಂತರದ ದಿನಗಳಲ್ಲಿ ಕನ್ನಡವನ್ನು ಮರೆಯುವುದು ವಾಡಿಕೆಯಾಗಿದೆ ಎಂದರು

ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎನ್.ಎಮ್.ಹೆಗಡೆ ಬೆಳ್ಮಣ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಡಿ.ಆರ್ ರಾಜು ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ , ಸ್ವಾಗತ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ , ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

ಕೆ.ಕಮಲಾಕ್ಷ ಕಾಮತ್ ( ಸಮಾಜ ಸೇವೆ), ಎಸ್.ರಾಮ್ ಭಟ್ (ಸಾಂಸ್ಕತಿಕ), ಜ್ಯೋತಿ ಜೆ.ಪೈ (ಸೇವೆ), ಜಗದೀಶ್ ಹೆಗ್ಡೆ (ಶಿಕ್ಷಣ), ಸುಂದರ ಹೆಗ್ಡೆ ( ಜನಪದ –ಕಂಬಳ), ಸಂತೋಷ್ ಡಿ’ಸಿಲ್ವಾ ( ಉದ್ಯಮ), ಆಸ್ಮಾ ಬಾನು, ಸಾಣೂರು (ಕೃಷಿ), ಡಾ| ಪಲ್ಲವಿ ರಾವ್ (ಉದ್ಯಮ), ಸಿದ್ದಾಪುರ ವಾಸುದೇವ ಭಟ್ (ಸಾಹಿತ್ಯ-ಪತ್ರಿಕೋದ್ಯಮ), ಯತೀಶ್ ಭಂಡಾರಿ ಸಂಕಲಕರಿಯಾ (ರಂಗಕಲೆ-ನಾಟಕ), ವೈ.ದಾಮೋದರ ಆಚಾರ್ಯ ಕಾಸರಗೋಳಿ (ಕುಲಕಸಬು), ಉಗ್ಗಪ್ಪ ಪರವ ಕೆರ್ವಾಶೆ (ದೈವ ನರ್ತಕರು), ಡಾ| ಜನಾರ್ದನ ನಾಯಕ್ ಅಜೆಕಾರು (ಯಕ್ಷಗಾನ), ಎಮ್.ಕೆ.ವಿರಂಜಯ ಹೆಗ್ಡೆ (ಸೇವೆ), ರಾಜೇಂದ್ರ ಪ್ರಸಾದ್ (ಕ್ರೀಡೆ), ಸಂಘ ಸಂಸ್ಥೆಗಳ ಪೈಕಿ ಸಾಣೂರು ಯುವಕ ಮಂಡಲ್, ಶ್ರೀ ವೆಂಕಟರಮಣ ಭಜನಾ ಮಂಡಳಿ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯನ್ನು ಗಳಿಗೆ ಸನ್ಮಾನಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು