ಕುಂದಾಪುರ: ಬಿಜೆಪಿಯು ಜನರ ಬದುಕಿನ ವಿಚಾರ ಭಾವನೆಗಳ ಬಗ್ಗೆ ಮಾತನಾಡುವುದಿಲ್ಲಾ ಧರ್ಮ ಜಾತಿ ಆಧಾರದ ಮೇಲೆ ಮತ ಕೇಳುತ್ತಾರೆ,ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜನಸಾಮಾನ್ಯರಿಗೆ ತಲುಪುವ ಹಲವಾರು ಕೊಡುಗೆಗಳನ್ನು ನೀಡಿದೆ ಮುಂದೆಯೂ ನೀಡಲಿದೆ. ಬಿಜೆಪಿಯ ಸುಳ್ಳು ಭರವಸೆಗಳೆ ಬಂಡವಾಳವಾಗಿದ್ದು ಜನರ ಹಾದಿ ತಪ್ಪಿಸುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ಸಿದ್ದಾಪುರದಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಯಡಮೊಗೆ ಉದಯ್ ಗಾಣಿಗ ಕೊಲೆಯಾಗಿದ್ದು ಇಂದಿಗೂ ಸರ್ಕಾರ ಕುಟುಂಬಕ್ಕೆ ಪರಿಹಾರ ನೀಡಿಲ್ಲಾ.ಬೇರೆ ಬೇರೆ ಕಡೆಗಳಲ್ಲಿ ಲಕ್ಷ ಲಕ್ಷ ಪರಿಹಾರ ನೀಡಿದ್ದೀರಿ ಯಡಮೊಗೆ ಕುಟುಂಬಕ್ಕೆ ಯಾಕೆ ನೀಡಿಲ್ಲಾ ತಾರತಮ್ಯದ ಮನೋಭಾವನೆ ಏಕೆ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಕೆ.ಗೋಪಾಲ್ ಪೂಜಾರಿ ಮಾತನಾಡಿ ನನಗೆ ಸೋತು ಗೆದ್ದ ಅನುಭವವಿದೆ 2 ದಶಕಗಳ ಕಾಲ ಶಾಸಕನಾಗಿ ಬೈಂದೂರು ಕ್ಷೇತ್ರಕ್ಕೆ ನಾನಾ ಕೊಡುಗೆ ಅಭಿವೃದ್ದಿ ಮಾಡಿದ ತೃಪ್ತಿಯಿದೆ.ಅಂದಿನ ದಿನಗಳಲ್ಲಿ ಬಿಜೆಪಿ ಸುಳ್ಳಿನ ಮತ ಪಡೆದು ಗೆದ್ದು ಬೈಂದೂರು ಕ್ಷೇತ್ರಕ್ಕೆಲ್ಲಿದೆ ಮೆಡಿಕಲ್ ಕಾಲೇಜು,ವಿಮಾನ ನಿಲ್ದಾಣ,ನದಿ ಜೋಡಣೆ,ಹೈಟೆಕ್ ಆಸ್ಪತ್ರೆ ಎಲ್ಲಿದೆ ತೋರಿಸಿ ಕೊಡಿ ಎಂದು ಬಿಜೆಪಿ ಪಕ್ಷದವರನ್ನು ತಮ್ಮ ಮಾತಿನ ಬಾಣದಲ್ಲಿ ತಿವಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಸುಧೀರ್ ಮುರಳಿ.ರಾಜು ಪೂಜಾರಿ ಬೈಂದೂರು,ಪ್ರಸನ್ನ ಶೆಟ್ಟಿ ಕೆರಾಡಿ,ಸಂಪಿಗೇಡಿ ಸಂಜೀವ ಶೆಟ್ಟಿ,ಹರಿಪ್ರಸಾದ್ ಶೆಟ್ಟಿ, ದಿನೇಶ್ ಶೆಟ್ಟಿ ಮೊಳಹಳ್ಳಿ,ಪ್ರಕಾಶ್ಚಂದ್ರ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ,ವಿಕಾಸ್ ಹೆಗ್ಡೆ,ಜಿಲ್ಲಾ ಎಸ್.ಟಿ ಘಟಕ ಅಧ್ಯಕ್ಷ ಜಯರಾಮ ನಾಯ್ಕ್,ಸಿದ್ದಾಪುರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಹರ್ಕೆಬಾಳು, ಯೂತ್ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.